ಕಾಪು ವಿಧಾನಸಭಾ ಕ್ಷೇತ್ರದ ಬೆಳ್ಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ರಸ್ತೆಗಳ ಅಭಿವೃದ್ಧಿಗೆ 5 ಕೋಟಿ 5 ಲಕ್ಷ ರೂಪಾಯಿ ಅನುದಾನದ ಮಂಜೂರಾಗಿದ್ದು, ಇದರ ಗುದ್ದಲಿ ಪೂಜೆ ಹಾಗೂ ಉದ್ಘಾಟನೆಯನ್ನು ಇಂದು ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ನೆರವೇರಿಸಿದರು.

ಬೆಳ್ಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ರಾಜ್ಯ ಹೆದ್ದಾರಿ ಬೆಳ್ಳೆ ಪೇಟೆ ಭಾಗದಲ್ಲಿ ರಸ್ತೆ ಡಾಮರೀಕರಣ – 1 ಕೋಟಿ, ರಾಜ್ಯ ಹೆದ್ದಾರಿ ನಾಲ್ಕು ಬೀದಿಯಿಂದ ಗಣಪತಿಕಟ್ಟೆ ರಸ್ತೆ ಅಭಿವೃದ್ಧಿ 2 ಕೋಟಿ 40 ಲಕ್ಷ, ಕಟ್ಟಿಂಗೇರಿ ಚಕ್ರಬೆಟ್ಟು ಎಸ್.ಸಿ ಕಾಲನಿ ರಸ್ತೆ ಕಾಂಕ್ರೀಟಿಕರಣ – 20 ಲಕ್ಷ, ಕಟ್ಟಿಂಗೇರಿ ಕುಮಾರೊಟ್ಟು ರಸ್ತೆ ಕಾಂಕ್ರೀಟಿಕರಣ – 10 ಲಕ್ಷ, ಪಡುಬೆಳ್ಳೆ ಮದ್ವನಗರ ಕಾಲೋನಿ ರಸ್ತೆ ಅಭಿವೃದ್ಧಿ – 5 ಲಕ್ಷ, ಪಡುಬೆಳ್ಳೆ ಧರ್ಮಶ್ರೀ ಕಾಲೋನಿ ಅಭಿವೃದ್ಧಿ – 5 ಲಕ್ಷ, ಪಡುಬೆಳ್ಳೆ ರಕ್ಷಾಪುರ ಕಾಲೋನಿ ರಸ್ತೆ ಅಭಿವೃದ್ಧಿ – 5 ಲಕ್ಷ ಸೇರಿದಂತೆ ಒಟ್ಟು 3 ಕೋಟಿ 85 ಲಕ್ಷ ರೂಪಾಯಿ ಅನುದಾನದ ಕಾಮಗಾರಿಯ ಗುದ್ದಲಿ ಪೂಜೆ ನೆರವೇರಿಸಿ ರಾಜ್ಯ ಹೆದ್ದಾರಿ ನಾಲ್ಕು ಬೀದಿಯಲ್ಲಿ ಮೋರಿ ಸಹಿತ ರಸ್ತೆ ಡಾಮರೀಕರಣ – 70 ಲಕ್ಷ ಹಾಗೂ ಪಡುಬೆಳ್ಳೆ ಮುಡುಬೆಳ್ಳೆ ಸಂಪರ್ಕ ರಸ್ತೆ ಅಭಿವೃದ್ಧಿ – 50 ಸೇರಿದಂತೆ 1 ಕೋಟಿ 20 ಲಕ್ಷ ರೂಪಾಯಿ ಕಾಮಗಾರಿಯನ್ನು ಉದ್ಘಾಟಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಲಾಲಾಜಿ ಆರ್ ಮೆಂಡನ್, ಬೆಳ್ಳೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ದಿವ್ಯಾ ಆಚಾರ್ಯ, ಉಪಾಧ್ಯಕ್ಷರಾದ ಶಶಿಧರ್ ವಾಗ್ಲೆ, ಗ್ರಾಮ ಪಂಚಾಯತ್ ಸದಸ್ಯರಾದ ರಾಜೇಂದ್ರ ಶೆಟ್ಟಿ, ಸುಧಾಕರ್ ಪೂಜಾರಿ, ಹರೀಶ್ ಶೆಟ್ಟಿ, ಸಂಧ್ಯಾ ಶೆಟ್ಟಿ, ಮೇರಿ ಡಿಸೋಜ, ಗುರುರಾಜ್ ಭಟ್, ಅಮಿತಾ, ಕಾಪು ಮಂಡಲ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷರಾದ ಸಂತೋಷ್ ಮೂಡುಬೆಳ್ಳೆ, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರಾದ ದೇವದಾಸ್ ಕಾಮತ್, ಬೆಳ್ಳೆ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಶಂಕರ ದೇವಾಡಿಗ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.