ಉಡುಪಿ‌ | ಅನಧಿಕೃತ ಪತ್ರಕರ್ತರ ವಾಹನಗಳಲ್ಲಿ ಮೀಡಿಯಾ ಸ್ಟಿಕ್ಕರ್ ದುರ್ಬಳಕೆ, ಕಠಿಣ ಕ್ರಮಕ್ಕೆ ಎಸ್ಪಿಗೆ ದೂರು

Date:

Advertisements

ಕಾರ್ಕಳ ವ್ಯಾಪ್ತಿಯಲ್ಲಿ ಅನಧಿಕೃತ ಪತ್ರಕರ್ತರ ಹಾವಳಿ ದಿನೇ ದಿನೇ ಹೆಚ್ಚಾಗುತ್ತಿದ್ದು ಪತ್ರಕರ್ತರ ಸೂಗಿನಲ್ಲಿ ಆಕ್ರಮ ಚಟುವಟಿಕೆ ‌ನಡೆಸಲಾಗುತ್ತಿದ್ದು ಇದಕ್ಕೆ ಕೂಡಲೆ ಕಡಿವಾಣ ಹಾಕುವಂತೆ ಹಾಗೂ ಅವರ ವಾಹನಗಳಲ್ಲಿ ಮೀಡಿಯಾ ಸ್ಟಿಕ್ಕರ್ ಬಳಕೆ‌ಮಾಡಿ‌ ದುರ್ಬಳಕೆ ಮಾಡದಂತೆ ಸೂಕ್ತ ಕ್ರಮಕೈಗೊಳ್ಳುವಂತೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ವತಿಯಿಂದ ಮಾ. 8ರಂದು ದೂರು ನೀಡಿಲಾಯಿತು.

ಕೆಲವೊಂದು ಯೂಟ್ಯೂಬರ್ಸ್ ಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯರಾಗಿರುವವರು ತಾವು ಪತ್ರಕರ್ತರು ಎಂದು ಹೇಳಿಕೊಂಡು ಸರಕಾರಿ ಅಧಿಕಾರಿಗಳಿಗೆ ಪೊಲೀಸರು ಹಾಗೂ ಜನಪ್ರತಿನಿಧಿಗಳ ಬಳಿ ಮಾಹಿತಿ ಪಡೆದು, ವ್ಯಾಪಾರಸ್ಥರಿಗೆ ಬೆದರಿಸುವ ಕೆಲಸ ಮಾಡುತ್ತಿರುವುದು ಸಂಘದ ಗಮನಕ್ಕೆ ಬಂದಿರುತ್ತದೆ.

ಪತ್ರಕರ್ತರೆಂದು ಬಿಂಬಿಸಿ ವಾಹನಗಳಲ್ಲಿ ತಿರುಗಾಡುವ ನಕಲಿ ಪತ್ರಕರ್ತರು, ಯೂಟ್ಯೂಬರ್‍ಸ್‌ಗಳು ಹಾಗೂ ಸಾಮಾಜಿಕ ಜಾಲತಾಣ ಖಾತೆ ನಿರ್ವಹಿಸುವವರು ಆಧಾರ ರಹಿತ ಸುದ್ದಿಗಳನ್ನು ಪ್ರಕಟಿಸಿ ಸಮಾಜದ ಸ್ವಾಸ್ಥ್ಯ ಕೆಡಿಸುವುದರ‌‌ ಜೊತೆಗೆ ಪತ್ರಕರ್ತರ ಘನತೆಯ ದಕ್ಕೆ ತರುವ ಕೆಲಸ ನಡೆಯುತ್ತಿದೆ.

Advertisements

ಅಲ್ಲದೆ ಆರ್‌ಎನ್‌ಐ ಅಥವಾ ಟ್ರಾಯ್‌ನ ಅಡಿಯಲ್ಲಿ ನೋಂದಾವಣೆಯಾದ ಮುದ್ರಣ ಮಾಧ್ಯಮ ಅಥವಾ ದೃಶ್ಯ ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸುವ ಅಧಿಕೃತ ಪತ್ರಕರ್ತರಿಗೆ ಮಾತ್ರ ವಾಹನಗಳಲ್ಲಿ ಹಾಗೂ ಗುರುತಿನ ಚೀಟಿ ಹೊಂದಿರುವ ಪತ್ರಕರ್ತರು ಮೀಡಿಯಾ ಎಂಬ ನಾಮಫಲಕ‌ ಅಳವಡಿಸಲು ರಾಜ್ಯ ಸಂಘದಿಂದ ಸೂಚನೆ ಇದ್ದು ಆದರೆ ಇಂದು ಯೂಟ್ಯೂಬರ್‍ಸ್ ಎಂಬ ನಕಲಿ ಪತ್ರಕರ್ತರು ಮೀಡಿಯಾ ಸ್ಟಿಕ್ಕರ್‌ನ್ನು ತಮ್ಮ ವಾಹನಗಳಲ್ಲಿ ಹಾಗೂ ತಮ್ಮ ಗುರುತಿನ ಚೀಟಿಯಲ್ಲಿ ಮೀಡಿಯಾ ಎಂಬ ಪದವನ್ನು ಬಳಸಿಕೊಂಡು ದುರುಪಯೋಗ ಮಾಡುತ್ತಿದ್ದಾರೆ. ಇದರಿಂದ ಅಸಲಿ ಹಾಗೂ ನಕಲಿ ಪತ್ರಕರ್ತರು ಯಾರೆಂಬುದು ತಿಳಿಯದೆ ಜನರು ಗೊಂದಲಕ್ಕೀಡಾಗುವ ಘಟನೆಗಳು ನಡೆಯುತ್ತಿದೆ. ನಕಲಿ ಪತ್ರಕರ್ತರು ತಮ್ಮ ವಾಹನ ಹಾಗೂ ಗುರುತಿನ ಚೀಟಿಯಲ್ಲಿ ಮೀಡಿಯಾ ಪದವನ್ನು ಬಳಸುವುದನ್ನು ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತ ಸಂಘವು ಖಂಡಿಸಿದ್ದು‌ ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ದೂರು ಸಲ್ಲಿಸಲಾಯಿತು.

ಈ ಬಗ್ಗೆ ಪ್ರತಿಕ್ರಿಯಿಸಿದ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ಡಾ ಅರುಣ್ ಕುಮಾರ್ ತಕ್ಷಣವೇ ನಕಲಿ ಪತ್ರಕರ್ತ ಬಗ್ಗೆ ಮಾಹಿತಿ ಕಲೆ ಹಾಕಿ ಕ್ರಮ ಕೈಗೊಳ್ಳುವ ದಾಗಿ ಭರವಸೆ ನೀಡಿದ್ದಾರೆ ಇದೇ ವೇಳೆ ನಗರ ಪಿಎಸ್ ಐ ಸಂದೀಪ್ ಶೆಟ್ಟಿಯವರಿಗೆ ಸೂಚನೆ ‌ನೀಡಿದ್ದಾರೆ. ಮುಂದೆಯೂ ಇದೇ ರೀತಿ ನಕಲಿ ಪತ್ರಕರ್ತರು ಮೀಡಿಯಾ ಪದವನ್ನು ಬಳಸಿದ್ದಲ್ಲಿ ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ನಕಲಿ ಪತ್ರಕರ್ತರ ಮಾಹಿತಿ ಪೊಲೀಸರಿಗೆ ನೀಡಲಿದ್ದು ಅಂತವರ ವಿರುದ್ಧ ಹೋರಾಟ ನಡೆಸಲಿದೆ.

ಈ ಸಂದರ್ಭದಲ್ಲಿ ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮಹಮ್ಮದ್ ಷರೀಫ್, ಉಪಾಧ್ಯಕ್ಷ ಹರೀಶ್ ಸಚ್ಚೇರಿಪೇಟೆ, ಜಿಲ್ಲಾ ಸಮಿತಿ ಸದಸ್ಯರಾದ ಉದಯ ಕುಮಾರ್, ಪ್ರಧಾನ ಕಾರ್ಯದರ್ಶಿ ಹರೀಶ್ ಆಚಾರ್ಯ, ಜತೆ ಕಾರ್ಯದರ್ಶಿ ವಾಸುದೇವ ಭಟ್, ಕೋಶಾಧಿಕಾರಿ ಕೆ.ಎಂ. ಖಲೀಲ್, ಸದಸ್ಯರಾದ ರಮಾನಂದ ಅಜೆಕಾರು, ಹರಿಪ್ರಸಾದ್ ನಂದಳಿಕೆ, ಸತೀಶ್ ಶೆಟ್ಟಿ, ಸಂಪತ್ ನಾಯಕ್ ಉಪಸ್ಥಿತರಿದ್ದರು.

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X