ಉಡುಪಿ ಜಿಲ್ಲೆಯ ಮಲ್ಪೆ ಕೆಮ್ಮಣ್ಣು ಬಳಿಯಲ್ಲಿ ಅಪರಿಚಿತ ಶವವೊಂದು ಕೊಳೆತ ರೀತಿಯಲ್ಲಿ ಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ.
ಕೆಮ್ಮಣ್ಣು ಬಳಿಯ ಕುದುರು ನೆಕ್ಸ್ಟ್ ಪಡು ತೋನ್ಸೆಯಲ್ಲಿ ಈ ಅಪರಚಿತ ಶವ ಪತ್ತೆಯಾಗಿದೆ. ಶವವನ್ನು ಅಲ್ವಿನ್, ಹರಿದಾಸ್, ನಿಖಿಲ್, ಸತ್ಯ ಶವವನ್ನು ಮೇಲಕ್ಕೆತ್ತಲು ಸಹಕರಿಸಿದರು. ಸಮಾಜ ಸೇವಕ ನಿತ್ಯಾನಂದ ಒಳಕಾಡು ಕೊಳೆತ ಶವವನ್ನು ಜಿಲ್ಲಾಸ್ಪತ್ರೆಗೆ ಸಾಗಿಸಿದರು.
ಮಲ್ಪೆ ಪೊಲೀಸ್ ಠಾಣೆಯ ಎ ಎಸ್ ಐ ವಿಶ್ವನಾಥ್, ನಾಗರಾಜ್ ಸ್ಥಳಕ್ಕೆ ಬಂದು ಮಹಜರು ಮಾಡಿದ್ದಾರೆ. ಪ್ರಾಥಮಿಕವಾಗಿ ದೊರೆತ ಮಾಹಿತಿಯಂತೆ ಮೃತಪಟ್ಟವರ ಹೆಸರು ಬಾಲು ನಾಯ್ಕ್ ಎಂದು ಹೇಳಲಾಗಿದೆ. ಈ ಬಗ್ಗೆ ಇನ್ನಷ್ಟೇ ಹೆಚ್ಚಿನ ಮಾಹಿತಿಯನ್ನು ಪೊಲೀಸರು ಕಲೆ ಹಾಕಬೇಕಿದೆ.
