ಕೋಲಾರದ ಕೆಜಿಎಫ್ ವಿಭಾಗಕ್ಕೆ ಪೊಲೀಸ್ ರಕ್ಷಣಾಧಿಕಾರಿಯಾಗಿ ಶಿವಾಂಶು ರಜಪೂತ್ ಅಧಿಕಾರ ವಹಿಸಿಕೊಂಡರು.
ನೂತನ ಎಸ್ಪಿ ಶಿವಾಂಶು ರಜಪೂತ್ ಅವರು ಕೆಜಿಎಫ್ ಎಸ್ಪಿ ಕೆ.ಎಂ ಶಾಂತರಾಜು ಅವರಿಂದ ಪ್ರಭಾರವನ್ನು ವಹಿಸಿಕೊಂಡರು. ಕೆ ಎಂ ಶಾಂತರಾಜು ರಾಜ್ಯ ಗುಪ್ತ ವಾರ್ತೆಗೆ ವರ್ಗಾವಣೆಯಾಗಿದ್ದಾರೆ. ನೂತನ ಎಸ್ಪಿ ಶಿವಾಂಶು ರಜಪೂತ್ ಈ ಹಿಂದೆ ಬೆಂಗಳೂರು ಎಸ್ ಸಿ ಆರ್ ಬಿ ಪೊಲೀಸ್ ಅಧೀಕ್ಷಕರಾಗಿದ್ದರು. ಪ್ರಸ್ತುತ ಕೆಜಿಎಫ್ ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡಿದ್ದಾರೆ.
ಪ್ರಭಾರ ವಹಿಸಿಕೊಂಡ ನಂತರ ಅಧೀನ ಅಧಿಕಾರಿಗಳಿಗಳೊಂದಿಗೆ ಮಾತನಾಡಿದ ಅವರು, “ಸಾಮಾನ್ಯ ನಾಗರಿಕರಿಗೆ ಅನ್ಯಾಯವಾಗದ ರೀತಿಯಲ್ಲಿ ನಿಷ್ಪಕ್ಷಪಾತವಾಗಿ ಮತ್ತು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಬೇಕು. ಜನ ಸಾಮಾನ್ಯರು ನಮ್ಮನ್ನು ಭೇಟಿಯಾಗಿ ತಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು. ಸಶಸ್ತ್ರ ಪೊಲೀಸ್ ಇನ್ಸ್ಪೆಕ್ಟರ್ ವಿ ಸೋಮಶೇಖರ್ ಮತ್ತು ಸಿಬ್ಬಂದಿ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಗೌರವ ರಕ್ಷೆ ನೀಡಿ ಆತ್ಮೀಯವಾಗಿ ಸ್ವಾಗತಿಸಿದರು.
ಇದನ್ನೂ ಓದಿ: ಕೋಲಾರ | ರೈತರ ಕೃಷಿ ಭೂಮಿ ತಂಟೆಗೆ ಸರ್ಕಾರ ಬರೋದು ಸರಿಯಲ್ಲ: ನಳಿನಿ ಗೌಡ
ಈ ಸಂದರ್ಭದಲ್ಲಿ ಡಿವೈಎಸ್ಪಿ ಪಾಂಡುರಂಗ ಹಾಗೂ ಕೆಜಿಎಫ್ ಎಲ್ಲಾ ಪೋಲಿಸ್ ಅಧಿಕಾರಿಗಳಿಗು ಉಪಸ್ಥಿತರಿದ್ದರು.