ಬೀದರ್‌ | ಖಂಡ್ರೆಯವರು ನೆಪಮಾತ್ರಕ್ಕೆ ಜನಸ್ಪಂದನೆ ನಡೆಸಿದ್ದಾರೆ: ಖೂಬಾ ಟೀಕೆ

Date:

Advertisements
  • ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆಯವರ ಆಡಳಿತದ ಮೇಲೆ ಜನ ವಿಶ್ವಾಸವಿಟ್ಟಿಲ್ಲ.
  • ಮಹಾತ್ಮಾ ಗಾಂಧಿ ಸಕ್ಕರೆ ಕಾರ್ಖಾನೆ ಮೇಲೆ ನೂರಾರು ಕೋಟಿ ರೂಪಾಯಿ ಸಾಲವಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವರು ಈಗಾಗಲೇ ಎಲ್ಲಾ ನೇಮಕಾತಿಗಳು ನನ್ನ ಗಮನಕ್ಕೆ ತಂದು ನೇಮಕಕೊಳ್ಳಿ ಎಂದು ಪತ್ರ ಬರೆದಿದ್ದು, ಮೇಲಿಂದ ಒಳ್ಳೆಯ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿದ್ದು ನೋಡಿ ಜನ ಇವರಿಗೆ ಹೆದರಿ ಜನಸ್ಪಂದನೆಗೆ ಬರಲಿಲ್ಲ. ಇವರು ನಡೆಸಿರುವ ಜನಸ್ಪಂದನೆ ಕೇವಲ ಔಪಚಾರಿಕವಾಗಿತ್ತು, ಜನರಿಗೆ 2-3 ಗಂಟೆಗಳು ಕಾಯಿಸಿ, ನೆಪಮಾತ್ರಕ್ಕೆ ಜನಸ್ಪಂದನೆ ನಡೆಸಿದ್ದಾರೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಟೀಕಿಸಿದ್ದಾರೆ.

“ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆಯವರ ಅಧ್ಯಕ್ಷತೆಯಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮಕ್ಕೆ ಜನರು ಬೇಸರಿಸಿರುವುದು, ಜನಸಂಖ್ಯೆ ಕಡಿಮೆ ಇದ್ದಿದ್ದು ನೋಡಿದರೆ, ಜನರು ಇವರ ಆಡಳಿತದ ಮೇಲೆ ವಿಶ್ವಾಸವಿಟ್ಟಿಲ್ಲ ಎಂಬುದು ಸಾಬಿತಾಗುತ್ತ್ತಿದ. ಜನಸ್ಪಂದನೆ ವಿಫಲರಾಗಿರುವುದನ್ನು ಸಮರ್ಥಿಸಿಕೊಳ್ಳಲು ನಮ್ಮ ಜಿಲ್ಲೆಯಲ್ಲಿ ಸಮಸ್ಯೆಗಳು ಕಡಿಮೆ ಇವೆ ಎಂದು ಹೇಳುತ್ತಿರುವುದು ನೋಡಿದರೆ, ನೆಲಕ್ಕೆ ಬಿದ್ದರೂ ಮಿಸೆ ಮಣ್ಣಾಗಿಲ್ಲಾ ಎನ್ನುವ ಗಾದೆ ಮಾತು ನೆನಪಿಗೆ ಬರುತ್ತಿದೆ” ಎಂದು ಕೇಂದ್ರ ನೂತನ ಹಾಗೂ ನವೀಕರಿಸಬಹುದಾದ ಇಂಧನ ಮೂಲ ಮತ್ತು ರಸಾಯನಿಕ ರಸಗೊಬ್ಬರ ಖಾತೆ ಸಹ ಸಚಿವ ಭಗವಂತ ಖೂಬಾರವರು ತಿಳಿಸಿದ್ದಾರೆ.

“ಈಗಾಗಲೆ ಭಾಲ್ಕಿಯಲ್ಲಿ ಪ್ರತಿ ಯೋಜನೆಯಡಿಯ ಫಲಾನುಭವಿಗಳನ್ನು ಉಸ್ತುವಾರಿ ಸಚಿವರು ತಾಲೂಕಿನ ವಯೋವೃದ್ದ ತಾಯಂದಿರು, ವಿಧವೆಯರು, ಅಂಗವಿಕಲರು, ರೈತರಿಗೆ ತನ್ನ ಮನೆಗೆ ಕರೆಯಿಸಿ, ಗಂಟೆ ಗಂಟಲೆ ಕಾಯಿಸಿ, ಅವರಿಗೆ ಹಕ್ಕುಪತ್ರ ಹಾಗೂ ಮುಂತಾದ ಸೌಕರ್ಯಗಳ ಪತ್ರ ನೀಡಿದ್ದಾರೆ, ಇದನ್ನು ನಾನು ಎಷ್ಟೋ ಸಲ ಖಂಡಿಸಿದ್ದೇನೆ ಮತ್ತು ಇಂತಹ ಕೆಲಸಗಳಿಗೆ ಸಹಕರಿಸಬಾರದು ಎಂದು ಅಧಿಕಾರಿಗಳಿಗೆ ತಾಕೀತು ಸಹ ಮಾಡಿರುವೆ. ಇಂತಹ ಕೆಲಸ ಮಾಡಿರುವ ಉಸ್ತುವಾರಿ ಸಚಿವರು ಇಂದು ಜನಸ್ಪಂದನೆ ಹೆಸರಿನಲ್ಲಿ ಹೊಸ ನಾಟಕ ಪ್ರಾರಂಭ ಮಾಡಿರುವುದು, ಜನತೆಯ ಉಪಯೋಗಕ್ಕಿಂತ ಅವರ ಪ್ರಚಾರಕ್ಕೆ ಸಿಮಿತವಾಗಿದೆ” ಎಂದು ಕೇಂದ್ರ ಸಚಿವ ಖೂಬಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisements

ಅನುದಾನ ಮತ್ತು ಮಂಜೂರಾತಿಗಾಗಿ ರಾಜ್ಯಕ್ಕೆ ನಿಯೋಗ ಅಗತ್ಯ:

“ಅಭಿವೃದ್ದಿಗೆ ಅಡ್ಡಗಾಲು ಹಾಕುವ ಬಗ್ಗೆ ಮಾತನಾಡಿರುವ ಉಸ್ತುವಾರಿ ಸಚಿವರು, ನಾವ್ಯಾರು ಇವರ ಅಭಿವೃದ್ದಿ ಕೆಲಸಗಳಿಗೆ ಅಡ್ಡಗಾಲು ಹಾಕುವುದಿಲ್ಲ, ಇವರು ಈ ಹಿಂದೆ ಉಸ್ತುವಾರಿ ಸಚಿವರಾಗಿದ್ದಾಗ ನಿಲ್ಲಿಸಿದ್ದ ಬೀದರ ಔಟರ್ ರಿಂಗ್ ರೋಡ್ ಕಾಮಗಾರಿ ಪುನರ್ ಪ್ರಾರಂಭ ಮಾಡಿಸಿದ್ದು ನಾನು. ಜೊತೆಗೆ ಕೇಂದ್ರ ಸರ್ಕಾರದಿಂದ ಹಾಗೂ ಹಿಂದಿನ
ನಮ್ಮ ರಾಜ್ಯ ಸರ್ಕಾರದಲ್ಲಿ ಮಂಜೂರಿಯಾದ ಅದೇಷ್ಟೋ ಕಾಮಗಾರಿಗಳು ನೆನೆಗುದಿಗೆ ಬಿದ್ದಿವೆ, ಈ ನಿಟ್ಟಿನಲ್ಲಿ ಉಸ್ತುವಾರಿ ಸಚಿವರು ನಮ್ಮೇಲ್ಲ ಜನಪ್ರತಿನಿಧಿಗಳ ಸಭೆ ತೆಗೆದುಕೊಂಡು, ಅಗತ್ಯ ಅನುದಾನ ಮತ್ತು ಮಂಜೂರಾತಿಗಾಗಿ ರಾಜ್ಯಕ್ಕೆ ನಿಯೋಗ ತೆಗೆದುಕೊಂಡು ಹೋಗಬೇಕೆಂದು” ಸಚಿವರಿಗೆ ಖೂಬಾ ಆಗ್ರಹಿಸಿದ್ದಾರೆ.

“ಈಗಾಗಲೇ ಅಭಿವೃದ್ದಿ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ನಾನು ನಿಮಗೆ ಕೆಲವೊಂದು ಪ್ರಶ್ನೆಗಳನ್ನು ಕೇಳಿದ್ದೆ, ಅವುಗಳಿಗೆ ಉತ್ತರಿಸದೆ ಜವಬ್ದಾರಿಯಿಂದ ಜಾರಿಕೊಂಡಿದ್ದಿರಿ, ಜೊತೆಗೆ ಯಾರೂ ಪ್ರಶ್ನೆಯನ್ನು ಕೇಳಲೆಬಾರದು ಎನ್ನುವ ಹಾಗೆ ಮಾತನಾಡುತ್ತಿದ್ದಿರಿ ಇದೇಷ್ಟು ಸೂಕ್ತ ಎಂದು ಭಗವಂತ ಖೂಬಾ ಖಂಡ್ರೆಯವರಿಗೆ ಪ್ರಶ್ನಿಸಿದ್ದಾರೆ, ಜನ ನಿಮಗೆ ಅಧಿಕಾರ ನೀಡಿದ್ದಾರೆ, ನೀವು ದಾರಿ ತಪ್ಪುತ್ತಿದ್ದರೆ, ನಿಮ್ಮನ್ನು ವಿರೋಧಿಸುವುದು ನಮ್ಮ ಜವಾಬ್ದಾರಿಯಾಗಿದೆ.
ಜನಸ್ಪಂದನದಲ್ಲಿ ಭ್ರಷ್ಟಾಚಾರ ಸಹಿಸುವುದಿಲ್ಲ ಎಂದು ಹೇಳಿರುವ ಉಸ್ತುವಾರಿ ಸಚಿವರು, ತಮ್ಮ ಪರಿವಾರದವರ
ಅಧ್ಯಕ್ಷತೆಯಲ್ಲಿ ನಡೆಯುತ್ತಿದ್ದ ಮಹಾತ್ಮಾ ಗಾಂಧಿ ಸಕ್ಕರೆ ಕಾರ್ಖಾನೆಯ ಮೇಲೆ ನೂರಾರು ಕೋಟಿ ರೂಪಾಯಿ ಸಾಲವಾಗಿದೆ, ಭ್ರಷ್ಟಾಚಾರ ನಡೆದಿದೆ, ಕಾರ್ಖಾನೆ ಎನ್.ಪಿ.ಎ ಆಗಿದೆ, ಇದರ ಕುರಿತು ತನಿಖೆ ಕೂಡಲೆ ಮಾಡಿಸಿ, ಆಗಿರುವ ಭ್ರಷ್ಟಾಚಾರವನ್ನು ಹೊರತಂದು, ಅವರ ಸಹೊದರನ ವಿರುದ್ಧ ಕ್ರಮ ಕೈಗೊಂಡು, ಹಣವನ್ನು ರಿಕವರಿ ಮಾಡಬೇಕು, ರೈತರ ಕಾರ್ಖಾನೆಯನ್ನು ಉಳಿಸಬೇಕೆಂದು” ಕೇಂದ್ರ ಸಚಿವ ಖೂಬಾ ಖಂಡ್ರೆಯವರಿಗೆ ಒತ್ತಾಯಿಸಿದ್ದಾರೆ.

ಸಕ್ಕರೆ ಕಾರ್ಖಾನೆ ಅಧ್ಯಕ್ಷ ವೈಜಿನಾಥ ಪಾಟೀಲ್ ಎಂಬುದು ಯಾರಿಗೂ ಗೊತ್ತೆಯಿಲ್ಲ:

“ತಾವುಗಳು ಹಿಂದೆ ಬಿ.ಎಸ್.ಎಸ್.ಕೆ ಅಧ್ಯಕ್ಷರಾಗಿದ್ದಾಗ, ಕಾರ್ಖಾನೆಯ ಮೇಲೆ ಸಾಲ ಮಾಡಿ, ದುಸ್ಥಿತಿಗೆ ತಂದು, ಕಾರ್ಖಾನೆಯ ಆಡಳಿತದಿಂದ ಹೊರಹೊದ ಮೇಲೆ, ಬಿ.ಎಸ್.ಎಸ್.ಕೆ ಮುಚ್ಚಿಹೊಗಿತ್ತು, ಅದರಂತೆ ಇಂದು ಮಹಾತ್ಮಾ ಗಾಂಧಿ ಸಕ್ಕರೆ ಕಾರ್ಖಾನೆಯೂ ಹಾಗೇ ಆಗಲಿದೆ, ಇದರಿಂದ ರೈತರು ಸಂಕಷ್ಟ ಅನುಭವಿಸಲಿದ್ದಾರೆ” ಎಂದು ಸಚಿವ ಖೂಬಾ ಆತಂಕ ವ್ಯಕ್ತಪಡಿಸಿದ್ದಾರೆ.

“ನಿಮ್ಮ ಸಹೊದರ, ಕಾರ್ಖಾನೆಯನ್ನು ಎನ್.ಪಿ.ಎ ಮಾಡಿ, ಮುಚ್ಚುವ ಹಂತಕ್ಕೆ ತಳ್ಳಿ ಪದತ್ಯಾಗ ಮಾಡಿದ್ದಾರಾ ಅಥವಾ ಅವರನ್ನು ಪದಚ್ಯುತಿಗೊಳಿಸಲಾಗಿದೆಯಾ ಎಂಬುದು ತಿಳಿಸಬೇಕು? ಜೊತೆಗೆ ಕಾರ್ಖಾನೆಯನ್ನು ಇಂತಹ ದುಸ್ಥಿತಿಗೆ ತಂದು ತನ್ನ ಹೇಡಿತನವನ್ನ ಪ್ರದರ್ಶಿಸಿದ್ದಾರೆ, ಇಲ್ಲಿ ಭ್ರಷ್ಟಾಚಾರ ನಡೆದಿರುವದು ಸ್ಪಷ್ಟವಾಗಿ ಕಂಡು ಬರುತ್ತಿದೆ. ಇದರ ಕುರಿತು ನೀವು ಉತ್ತರಿಸಬೇಕು” ಎಂದು ಒತ್ತಾಯಿಸಿದ್ದಾರೆ.

“ಕಾಂಗ್ರೇಸ್ ಪಕ್ಷದ ನಾಯಕರ ಮೇಲೆ ಭ್ರಷ್ಟಾಚಾರದ ಆರೋಪಗಳು ಬಂದಾಗ, ಅದನ್ನು ಎದುರಿಸದೆ ಬೇರೆಯವರಿಂದ
ಉತ್ತರಿಸುವುದು ಕಾಂಗ್ರೇಸ್ ಪಕ್ಷದ ಸಂಸ್ಕೃತಿಯಾಗಿದೆ, ಲೂಟಿ ಮಾಡುವುದು, ಲೂಟಿಯ ರಹಸ್ಯ ಹೊರಬಂದಾಗ, ಬೇರೆಯವರನ್ನ ಬಲಿಕೊಡುವುದು, ಬೇರೆಯವರಿಂದ ಹೇಳಿಕೆ ಕೊಡಿಸುವುದು ಕಾಂಗ್ರೇಸ್ಸಿಗರು ರೂಢಿ ಮಾಡಿಕೊಂಡಿದ್ದಾರೆ, ಅದರಂತೆ ಇಂದು ಜಿಲ್ಲೆಯಲ್ಲಿ ಉಸ್ತುವಾರಿ ಸಚಿವರ ಪರಿವಾರ ಸಹ ಅವರ ಕಾಂಗ್ರೇಸ್‌ ನಾಯಕರ ಹಾಗೂ ಕಾಂಗ್ರೇಸ್ ಪಕ್ಷದ ಸಂಸ್ಕೃತಿಯನ್ನೆ ಮುಂದುವರೆಸಿದ್ದಾರೆ. ಇಲ್ಲಿಯವರೆಗೆ ವೈಜಿನಾಥ ಪಾಟೀಲ್ ಎಮ್.ಜಿ.ಎಸ್.ಎಸ್.ಕೆ ಅಧ್ಯಕ್ಷ
ಎಂಬುದು ಯಾರಿಗೂ ಗೊತ್ತೆಯಿಲ್ಲಾ, ಸ್ವತಃ ಅವರೇ ಅಧ್ಯಕ್ಷ ಇದ್ದಾರೆ ಎಂದು ಹೇಳಿಕೊಳ್ಳುವ ಪರಿಸ್ಥಿತಿ ಯಾಕೆ ಬಂತು? ಹಾಗಾದರೆ ಅವರ ಸ್ಥಿತಿ 20 ಸಾವಿರ ಶೇರುದಾರರನ್ನ ಮೋಸ ಮಾಡಿದ ಹಾಗಲ್ಲವೇ? 20 ಸಾವಿರ ಶೇರುದಾರರಿಗೆ ಈ ವಿಷಯ ತಿಳಿಸಿದ್ದಿರಾ? ಎಂದು ಸಚಿವರು ವೈಜಿನಾಥ ಪಾಟೀಲ್ ರವರ ಅಸಹಾಯಕತೆಯನ್ನು ಸಹ ಪ್ರಶ್ನಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X