ನವದೆಹಲಿಯ ರಾಷ್ಟ್ರೀಯ ಏಡ್ಸ್ ನಿಯಂತ್ರಣ ಮಂಡಳಿಯಿಂದ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್‌ಷನ್ ಸೊಸೈಟಿ ಅಡಿಯಲ್ಲಿ ಮಂಜೂರಾಗಿರುವ ಮತ್ತು ಪ್ರಸ್ತುತ ಖಾಲಿ ಇರುವ ಡೆಸಿಗ್ನೇಟೆಡ್ ಎಸ್‌ಟಿಐ/ಆರ್‌ಟಿಐ ಕ್ಲಿನಿಕ್‌ಗಳಲ್ಲಿ ಖಾಲಿ ಇರುವ ಆಪ್ತಸಮಾಲೋಚಕರ ಹುದ್ದೆಗೆ ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ಸೂಚಿಸಲಾಗಿದ್ದು, ಆಪ್ತಸಮಾಲೋಚಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.
ಕೊಡಗಿನ ಮಡಿಕೇರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ಸತೀಶ್ ಕುಮಾರ್ ಅವರು ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದು, ಅರ್ಜಿ ಆಹ್ವಾನಿಸಿದ್ದಾರೆ.
ಹುದ್ದೆಯ ಹೆಸರು: ಆಪ್ತಸಮಾಲೋಚಕರ ಹುದ್ದೆ ಜಿಲ್ಲಾ ಆಸ್ಪತ್ರೆ, ಮಡಿಕೇರಿ. ಹುದ್ದೆಯ ಸಂಖ್ಯೆ: 1 (ಗುತ್ತಿಗೆ ಆಧಾರದ ಮೇಲೆ 1 ವರ್ಷ ಗುತ್ತಿಗೆ ಆಧಾರ)
ವೇತನಶ್ರೇಣಿ: ಸಂಚಿತ ಮೊತ್ತ ಮಾಸಿಕ ರೂ.21000, ಗರಿಷ್ಠ ವಯೋಮಿತಿ: 60 ವರ್ಷ
ಅರ್ಹತೆ : ಸಮಾಜ ಕಾರ್ಯ, ಮನೋವಿಜ್ಞಾನ, ಸಮಾಜಶಾಸ್ತ್ರ, ಮಾನವ ಶಾಸ್ತ್ರ, ಮಾನವ ಅಭಿವೃದ್ಧಿ, ನರ್ಸಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಹೊಂದಿದವರು ಅಥವಾ ಸಮಾಜ ಕಾರ್ಯ, ಮನೋವಿಜ್ಞಾನ, ಸಮಾಜಶಾಸ್ತ್ರ, ಮಾನವ ಶಾಸ್ತ್ರ, ಮಾನವ ಅಭಿವೃದ್ಧಿಯಲ್ಲಿ ಪದವಿ ಹೊಂದಿದವರು, ನರ್ಸಿಂಗ್-ಕೌನ್ಸೆಲಿಂಗ್‌ನಲ್ಲಿ 3 ವರ್ಷಗಳ ಅನುಭವದೊಂದಿಗೆ ಅಥವಾ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮದ ಅಡಿಯಲ್ಲಿ ಶಿಕ್ಷಣ ಹೊಂದಿದವರು, ಸಮಾಜ ಕಾರ್ಯ, ಮನೋವಿಜ್ಞಾನ ಸಮಾಜಶಾಸ್ತ್ರ, ಮಾನವ ಶಾಸ್ತ್ರ, ಮಾನವ ಅಭಿವೃದ್ಧಿಯಲ್ಲಿ ಪದವಿ ಹೊಂದಿದವರು, ನರ್ಸಿಂಗ್-ಕೌನ್ಸೆಲಿಂಗ್‌ನಲ್ಲಿ ಒಂದು ವರ್ಷದ ಅನುಭವದೊಂದಿಗೆ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮದ ಅಡಿಯಲ್ಲಿ ಶಿಕ್ಷಣ ಹೊಂದಿದವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿ ಹಾಗೂ ಅರ್ಜಿಗಾಗಿ: ಮಡಿಕೇರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ, ಓಂಕಾರೇಶ್ವರ ದೇವಸ್ಥಾನ ರಸ್ತೆ. ಈ ವಿಳಾಸವನ್ನು ಸಂಪರ್ಕಿಸಬಹುದು.
ಅರ್ಜಿಸಲ್ಲಿಸಲು ಕೊನೆಯ ದಿನಾಂಕ: ಇದೇ ಅಕ್ಟೋಬರ್ 30ರ ಸಂಜೆ 5 ಗಂಟೆಯೊಳಗೆ ಅರ್ಜಿ ಮತ್ತು ಮೂಲ ದಾಖಲಾತಿಗಳನ್ನು ಸಲ್ಲಿಸಬೇಕು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮಾಹಿತಿ ತಂತ್ರಜ್ಞರ ಸೇವೆ ಪಡೆಯಲು ಅರ್ಜಿ ಆಹ್ವಾನ
“ಈ ನೇಮಕಾತಿಯು ರಾಷ್ಟ್ರೀಯ ಏಡ್ಸ್ ನಿಯಂತ್ರಣ ಮಂಡಳಿ(ಎನ್‌ಎಸಿಒ) ನವದೆಹಲಿ ಇವರಿಂದ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್‌ಷನ್ ಸೊಸೈಟಿ ಎನ್‌ಎಸಿಪಿ-ವಿ ರ ಮಾರ್ಗಸೂಚಿ ಅನ್ವಯ ನೇಮಕಾತಿ ಪ್ರಕ್ರಿಯೆ ನಡೆಸಲಾಗುವುದು. ದೂರವಾಣಿ ಸಂಖ್ಯೆ: 08272-296708ನ್ನು ಸಂಪರ್ಕಿಸಬಹುದು” ಎಂದು ಮಡಿಕೇರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ಸತೀಶ್ ಕುಮಾರ್ ಅವರು ತಿಳಿಸಿದ್ದಾರೆಂದು ಇಲಾಖೆ ಮೂಲಗಳಿಂದ ಈ ದಿನ.ಕಾಮ್‌ಗೆ ಮಾಹಿತಿ ದೊರೆತಿದೆ.