ಕೊಡಗು ಜಿಲ್ಲೆ ಮಡಿಕೇರಿಯ ಕೇಂದ್ರ ಭಾಗದಲ್ಲಿರುವ ಜನರಲ್ ತಿಮ್ಮಯ್ಯ ಪ್ರತಿಮೆಗೆ ಕೆಎಸ್‌ಆರ್‌ಟಿಸಿ ಬಸ್ ಒಂದು ಢಿಕ್ಕಿಯಾಗಿದ್ದು, ಪ್ರತಿಮೆ ಉರುಳಿ ಬಿದ್ದಿರುವ ಘಟನೆ ನಡೆದಿದೆ.
ಚಾಲಕನ ನಿಯಂತ್ರಣ ತಪ್ಪಿ ಬಸ್ ಪ್ರತಿಮೆಗೆ ಢಿಕ್ಕಿಯಾಗಿದೆ. ಅಡ್ಡ ಬಂದ ಪಿಕಪ್ ವಾಹನವೊಂದನ್ನು ತಪ್ಪಿಸಲು ಹೋಗಿ ಬಸ್ ಢಿಕ್ಕಿಯಾಗಿದೆ. ಬಸ್ ಢಿಕ್ಕಿಯಾದ ರಭಸಕ್ಕೆ ವೀರ ಸೇನಾನಿಯ ಪ್ರತಿಮೆ ನೆಲಕ್ಕೆ ಉರುಳಿದೆ.
ಈ ಸುದ್ದಿ ಓದಿದ್ದೀರಾ? ಗುಜರಾತ್ ಮಾದರಿಗೆ ಪರ್ಯಾಯ ಮಾದರಿ ಸೃಷ್ಟಿಸುವ ಸಾಮರ್ಥ್ಯ ಕರ್ನಾಟಕಕ್ಕಿದೆ: ಯೋಗೇಂದ್ರ ಯಾದವ್
ಮಡಿಕೇರಿ ಡಿಪೋದಿಂದ ಬಸ್ ನಿಲ್ದಾಣದ ಕಡೆಗೆ ಹೊರಟಿದ್ದ ಬಸ್, ಪಿಕಪ್ ವಾಹನ ತಪ್ಪಿಸಲು ಹೋಗಿ ಅನಾಹುತ ಉಂಟಾಗಿದೆ. ಚಾಲಕ ಹಾಗೂ ನಿರ್ವಾಹಕರಿಗೆ ಸಣ್ಣ ಪುಟ್ಟಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಸ್ಸಿನಲ್ಲಿ ಬೇರೆ ಪ್ರಯಾಣಿಕರು ಇರಿಲಿಲ್ಲ. ಹಾಗಾಗಿ ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ.
ಮಡಿಕೇರಿ ನಗರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.