ಕೊಡಗು ಜಿಲ್ಲೆಯ ವಿರಾಜಪೇಟೆ ನಗರದ ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಶಾಸಕ ಎ ಎಸ್ ಪೊನ್ನಣ್ಣ ಹೇಳಿದರು.
ಜಿಲ್ಲೆಯ ವಿರಾಜಪೇಟೆ ಪುರಸಭೆಯಿಂದ ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ‘ಸ್ವಚ್ಚ ಭಾರತ್’ ಅಭಿಯಾನದ ಪ್ರಯುಕ್ತ ಹಮ್ಮಿಕೊಂಡಿದ್ದ ಸ್ವಚ್ಚತಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸ್ವಚ್ಚತಾ ಅಭಿಯಾನಕ್ಕೆ ಕೈಜೋಡಿಸಿದ ವಿರಾಜಪೇಟೆ ಶಾಸಕ ಎ ಎಸ್ ಪೊನ್ಬಣ್ಣ ಖಾಸಗಿ ಬಸ್ ನಿಲ್ದಾಣ ಹಾಗೂ ಒಣಮೀನು ಮಾರುಕಟ್ಟೆಯನ್ನು ಪರಿಶೀಲಿಸಿ, “ನಗರ ಪ್ರದೇಶಗಳಲ್ಲಿ ಹೆಚ್ಚಿನ ಜನಸಂಖ್ಯೆ ಇರುವುದರಿಂದ ಅತಿಹೆಚ್ಚು ಘನತ್ಯಾಜ್ಯ ನಿರ್ಮಾಣವಾಗುತ್ತದೆ. ಈ ತ್ಯಾಜ್ಯ ಎಲ್ಲಿ ಹೋಗುತ್ತದೆಂದು ಯಾರಿಗೂ ತಿಳಿಯದು. ಸಾರ್ವಜನಿಕರೂ ಕೂಡಾ ನಗರದ ಸ್ವಚ್ಛತೆಗೆ ಆಧ್ಯತೆ ನೀಡಬೇಕು. ಪೌರ ಕಾರ್ಮಿಕರ ಜೊತೆ ಕೈ ಜೋಡಿಸಬೇಕು. ಹಾಗಿದ್ದಲ್ಲಿ ಮಾತ್ರ ನಗರವು ಸ್ವಚ್ಛವಾಗಿರುತ್ತದೆ. ಪರಿಸರವೂ ಸ್ವಚ್ಛವಾಗಿರುತ್ತದೆ” ಎಂದು ಹೇಳಿದರು.
ಈ ಸುದ್ದು ಓದಿದ್ದೀರಾ? ಬೀದರ್ | ದಲಿತರ ಮೇಲೆ ನಿಲ್ಲದ ದೌರ್ಜನ್ಯ: ಭಾಲ್ಕಿ ಡಿವೈಎಸ್‌ಪಿ ವಿರುದ್ಧ ಕ್ರಮಕ್ಕೆ ಆಗ್ರಹ
ಪುರಸಭೆ ಅಧ್ಯಕ್ಷರು, ಸದಸ್ಯರು, ಸಿಬ್ಬಂದಿಗಳು, ಪೌರಕಾರ್ಮಿಕರು ಸೇರಿ ಖಾಸಗಿ ಬಸ್ ನಿಲ್ದಾಣದ ಸುತ್ತಮುತ್ತಲಿನ ಕಸ, ಗಿಡಗಂಟಿಗಳನ್ನು ತೆರವುಗೊಳಿಸಿದರು.
ಪುರಸಭೆ ಅಧ್ಯಕ್ಷ ಮನೆಯಪಂಡ ದೇಚಮ್ಮ ಕಾಳಪ್ಪ, ವಿರಾಜಪೇಟೆ ತಹಶೀಲ್ದಾರ್ ರಾಮಚಂದ್ರ, ಪುರಸಭೆ ಮುಖ್ಯಾಧಿಕಾರಿ ಚಂದ್ರಕುಮಾರ್, ಉಪಾಧ್ಯಕ್ಷೆ ಪಸಿಯಾ ತಬಸ್ಸಂ, ಸದಸ್ಯರಾದ ಸಿ ಕೆ ಪೃಥ್ವಿ ನಾಥ್, ಜಲೀಲ್ ಅಹ್ಮದ್, ರಜನಿಕಾಂತ್, ರಂಜಿ ಪೂಣಚ್ಚ, ರಾಜೇಶ್, ಪದ್ಮನಾಭ, ಮಹದೇವ್, ಆಗಸ್ಟೀನ್ ಬೆನ್ನಿ, ಮಹಮ್ಮದ್ ರಫಿ, ಸುನಿತಾ ಜುನಾ, ನಾಮ ನಿರ್ದೇಶನ ಸದಸ್ಯ ಶಬರೀಶ್ ಶೆಟ್ಟಿ ,ದಿನೇಶ್,ಅಮೀದ್, ಪುರಸಭೆ ಕಚೇರಿ ವ್ಯವಸ್ಥಾಪಕಿ ಸುಜಾತ, ಪ್ರಭಾರ ಆರೋಗ್ಯ ನಿರೀಕ್ಷಕಿ ಕೋಮಲ, ಪ್ರಥಮ ದರ್ಜೆ ಸಹಾಯಕಿ ಸುಲೇಖ ಸೇರಿದಂತೆ ಇತರರು ಇದ್ದರು. ಭಾಗಿಯಾಗಿದ್ದರು.