ಕೊಡಗು | ದೀಪಾರಿಂದ ಸೃಜನಾತ್ಮಕ ಅನುವಾದದ ಹೊಸ ಪಥ ಸೃಷ್ಟಿ : ಜ. ನಾ. ತೇಜಶ್ರೀ

Date:

Advertisements

ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕೊಡಗು ಜಿಲ್ಲಾ ಮಹಿಳಾ ಬರಹಗಾರರ ಸಂಘ ಮತ್ತು ಮಡಿಕೇರಿ ತಾಲೂಕು ಕಸಾಪ ಸಂಯುಕ್ತಾಶ್ರಯದಲ್ಲಿ ನಗರದ ರೆಡ್ ಬ್ರಿಕ್ಸ್ ನ ಸತ್ಕಾರ ಸಭಾಂಗಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಬೂಕರ್ ಪ್ರಶಸ್ತಿಗೆ ಪಾತ್ರರಾದ ದೀಪಾ ಭಾಸ್ತಿ ಅವರನ್ನು ಸನ್ಮಾನಿಸಿ ಮಾತನಾಡಿದ ಕವಿ ಹಾಗೂ ಅನುವಾದಕಿ ಜ. ನಾ. ತೇಜಶ್ರೀ ‘ ದೀಪಾರಿಂದ ಸೃಜನಾತ್ಮಕ ಅನುವಾದದ ಹೊಸ ಪಥ ಸೃಷ್ಟಿಯಾಗಿದೆ ‘ ಎಂದರು.

” ಬೂಕರ್ ಪ್ರಶಸ್ತಿ ವಿಜೇತೆ ದೀಪಾ ಭಾಸ್ತಿ ಅವರು ತಮ್ಮ ‘ ಹಾರ್ಟ್ ಲ್ಯಾಂಪ್ ‘ ಅನುವಾದ ಕೃತಿಯ ಮೂಲಕ, ಸಾಂಪ್ರದಾಯಿಕವಾದ ಅನುವಾದದ ಚೌಕಟ್ಟುಗಳನ್ನು ಮೀರಿ, ಸೃಜನಾತ್ಮಕವಾದ ಅನುವಾದದ ಹೊಸ ಪಥವನ್ನು ಸೃಷ್ಟಿಸಿದ್ದಾರೆ. ಕನ್ನಡದ ಖ್ಯಾತ ಸಾಹಿತಿ ಭಾನು ಮುಷ್ತಾಕ್ ಮತ್ತು ಅವರ ಕೃತಿ ‘ ಎದೆಯ ಹಣತೆ ‘ಯನ್ನು ‘ ಹಾರ್ಟ್ ಲ್ಯಾಂಪ್ ‘ ಆಗಿ ಅನುವಾದಿಸಿದ ದೀಪಾ ಭಾಸ್ತಿ ಕನ್ನಡದಿಂದ ಇಂಗ್ಲೀಷ್‌ಗೆ ಮಾಡಿರುವ ಅನುವಾದದಲ್ಲಿ ಕನ್ನಡದ ಭಾಷಾ ಸೌಂದರ್ಯದ ಚೆಲುವನ್ನು ಹಾಗೆಯೇ ಕಾಯ್ದುಕೊಂಡಿದ್ದಾರೆಂದು ” ಹೇಳಿದರು.

ಇಂಗ್ಲೀಷ್ ಭಾಷೆಗೆ ಅನುವಾದಿತ ಕೃತಿಗಳು ಇಲ್ಲಿಯವರೆಗೆ, ಆಯಾ ಭಾಷೆಗಳಲ್ಲಿನ ವಿಚಾರಗಳನ್ನು, ‘ ಇಟಾಲಿಕ್ಸ್ ‘ ಇಲ್ಲವೇ, ಶಬ್ಧದ ಅರ್ಥವನ್ನು ನೀಡುವ ಮೂಲಕ ಇಂಗ್ಲೀಷ್ ಓದುವ ಮಂದಿಗೆ ಅರ್ಥೈಸುವ ಪ್ರಯತ್ನವನ್ನು ಮಾಡುತ್ತಿರುವಂತೆ ಕಾಣುತಿತ್ತು. ದೀಪಾ ಭಾಸ್ತಿ ಅವರು, ಇಂತಹ ಅನುವಾದದ ಕಟ್ಟು ಪಾಡುಗಳನ್ನು ಬಿಡಾ ಬೀಸಾಗಿ ಮುರಿದು ಮುನ್ನುಗಿದ್ದಾರೆ. ಇವರ, ಅನುವಾದಿತ ಹಾರ್ಟ್ ಲ್ಯಾಂಪ್ ಕೃತಿ ಕನ್ನಡ ಕಂಪನ್ನು ಗಾಢವಾಗಿ ಆವರಿಸಿಕೊಂಡಿದೆ. ಇಂತಹ, ಅನುವಾದ ಕೃತಿ, ಅನುವಾದದ ಹೊಸ ಹಾದಿಯನ್ನು ಸೃಷ್ಟಿಸಿದೆ ಎಂದು ತಿಳಿಸಿದರು.

Advertisements

ಕರ್ನಾಟಕ ಸಂಸ್ಕೃತ ವಿಶ್ವ ವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ. ಪದ್ಮಾ ಶೇಖರ್ ಮಾತನಾಡಿ ” ಭಾನು ಮುಷ್ತಾಕ್ ಅವರ ಕೃತಿಯನ್ನು ಹಾರ್ಟ್ ಲ್ಯಾಂಪ್ ಆಗಿ ಇಂಗ್ಲೀಷ್‌ಗೆ ಅನುವಾದಿಸಿ ಬೂಕರ್ ಪ್ರಶಸ್ತಿಯನ್ನು ಪಡೆದ ದೀಪಾ ಭಾಸ್ತಿ ಅವರು ಅನುವಾದ ಸಾಹಿತ್ಯದ ಮಿನುಗುತಾರೆಯಾಗಿ, ನಾಳಿನ ಭರವಸೆಯ ಬೆಳಕಾಗಿ ಮೂಡಿಬಂದಿದ್ದಾರೆ. ಇಂತಹ ಭರವಸೆಯ ಬೆಳಕನ್ನು ಆರದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರದು. ಭಾನು ಮುಷ್ತಾಕ್ ಮತ್ತು ದೀಪಾ ಭಾಸ್ತಿ ಅವರು ವಿವಿಧ ಪ್ರದೇಶಗಳ ಪ್ರತ್ಯೇಕ ಸಮುದಾಯಗಳಿಗೆ ಸೇರಿದವರು. ಭಾನು ಮುಷ್ತಾಕ್ ಅವರ ಕೃತಿಗಳಲ್ಲಿನ ಮುಸ್ಲಿಂ ಸಮುದಾಯದ ಸಾಂಸ್ಕೃತಿಕ, ಸಾಮಾಜಿಕ ಹಿನ್ನೆಲೆಯ ಸೂಕ್ಷ್ಮಗಳನ್ನು ಅರಿತು, ಅವರ ಮನಸ್ಥಿತಿಗಳ ಅಧ್ಯಯನದ ಮೂಲಕ ದೀಪಾ ಭಾಸ್ತಿ ಪರಕಾಯ ಪ್ರವೇಶ ಮಾಡುವ ಮೂಲಕ ಸಾಹಿತ್ಯದ ಪುನರ್ ಸೃಷ್ಟಿಯನ್ನೇ ಮಾಡಿದ್ದಾರೆ.

ಅನುದಾದ ಸಾಹಿತ್ಯವೆನ್ನುವುದು ದೇಶ, ಭಾಷೆಯ ಮಿತಿಗಳನ್ನು ಮೀರಿ ಎರಡು ಭಾಷೆಗಳ ನಡುವೆ ಸಂವಹನವನ್ನು ಸೃಷ್ಟಿಸುವ ಕ್ರಿಯೆ. ಇಂತಹ ಸಾಧ್ಯತೆಯ ಹಣತೆಯನ್ನು ಕನ್ನಡ ಕೃತಿಯನ್ನು ಇಂಗ್ಲೀಷ್‌ಗೆ ಅನುವಾದ ಮಾಡಿ, ಬೂಕರ್ ಪ್ರಶಸ್ತಿಗೆ ಪಾತ್ರರಾಗುವ ಮೂಲಕ ದೀಪಾ ಭಾಸ್ತಿ ಅವರು ಮಾಡಿದ್ದಾರೆ. ಹಾರ್ಟ್ ಲ್ಯಾಂಪ್ ಇಂಗ್ಲೀಷ್ ಅನುವಾದ ಕೃತಿ ಯಾವುದೇ ಒಂದು ಕಥಾ ಸಂಕಲನಕ್ಕೆ ದೊರೆತ ಮೊಟ್ಟ ಮೊದಲ ಬೂಕರ್ ಪ್ರಶಸ್ತಿಯೇ ಆಗಿದೆ. ಕನ್ನಡ ಸಾಹಿತ್ಯದಲ್ಲಿ ಪಂಪನಿಂದ ಕುವೆಂಪುವರೆಗೆ ಅಸಂಖ್ಯ ಸಾಹಿತ್ಯ ಕೃತಿಗಳು ರಚಿತವಾಗಿದ್ದು, ಇವುಗಳು ವಿಶ್ವ ಸಾಹಿತ್ಯವನ್ನೇ ಮೀರಿ ಗೆಲ್ಲುವ ಚೈತನ್ಯವನ್ನು ಹೊಂದಿರುವಂತಹದು. ಹೀಗಿದ್ದೂ, ಇಂತಹ ಕನ್ನಡ ಕೃತಿಗಳು ಇಂಗ್ಲೀಷ್‌ಗೆ ಅನುವಾದ ಆಗದಿರುವುದರತ್ತ ಬೊಟ್ಟು ಮಾಡಿದರು. “

ಸನ್ಮಾನ ಸ್ವೀಕರಿಸಿ ಮಾತನಾಡಿದ ದೀಪಾ ಭಾಸ್ತಿಯವರು ” ಕನ್ನಡ ಮತ್ತು ವಸಾಹತುಶಾಹಿ ಭಾಷೆಯಾದ ಇಂಗ್ಲೀಷ್ ನಡುವಿನ ಸಂಬಂಧಗಳನ್ನು ಬೆಳೆಸಿಕೊಳ್ಳುವ ಬಗೆ ಮತ್ತು ಕನ್ನಡದ ಮೂಲ ನೆಲೆಯನ್ನು ಇಂಗ್ಲೀಷ್ ಸಾಹಿತ್ಯದಲ್ಲಿ ಪ್ರತಿಬಿಂಬಿಸುವ ಮೂಲಕ, ಕನ್ನಡ ಭಾಷೆಯ ಬಗ್ಗೆಯೂ ಇಂಗ್ಲೀಷ್ ಭಾಷಾ ಓದುಗರಿಗೆ ತಿಳಿಸುವ ಪ್ರಯತ್ನವಾಗಿ, ಕನ್ನಡದ ಪದಗಳನ್ನು ಯಥಾವತ್ತಾಗಿ ಅನುವಾದದಲ್ಲಿ ಬಳಸಿಕೊಂಡಿದ್ದೇನೆ. ಅನುವಾದಗಳ ಸಂದರ್ಭ ಇಲ್ಲಿನ ಪದಗಳನ್ನು ಇಂಗ್ಲೀಷ್‌ನಲ್ಲಿ ಅರ್ಥೈಸುವ ಗೊಜಲುಗಳಿಗೆ ಬದಲಾಗಿ, ಇಲ್ಲಿರುವ ಪದಗಳನ್ನು ಬಳಸಿರುವುದಾಗಿ ತಿಳಸಿದರಲ್ಲದೆ, ಇಂಗ್ಲೀಷ್‌ನ ಸುಪೀರಿಯರ್ ಮನಸ್ಥಿತಿಯನ್ನು ಕಳೆಯಲು ಸಾಕಷ್ಟು ಅನುವಾದ ಕೃತಿಗಳ ಅಗತ್ಯತೆ ಇರುವುದಾಗಿ ನುಡಿದರು. “

ಹಿರಿಯ ಪತ್ರಕರ್ತ ಜಿ. ಚಿದ್ವಿಲಾಸ್ ಮಾತನಾಡಿ, ಬೂಕರ್ ಪ್ರಶಸ್ತಿಗೆ ಪಾತ್ರರಾದ ದೀಪಾ ಭಾಸ್ತಿ ಅವರಿಗೆ ಮುಂದಿನ ಕನ್ನಡ ಸಾಹಿತ್ಯ ಪರಿಷತ್ ಸೇರಿದಂತೆ ರಾಷ್ಟ್ರ ಮಟ್ಟದ ಪ್ರಶಸ್ತಿಗಳನ್ನು ದೊರಕಿಸಿಕೊಡುವ ಕಾರ್ಯವಾಗಬೇಕೆಂಬ ಆಶಯವನ್ನು ವ್ಯಕ್ತಪಡಿಸಿದರು.

ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ಬೂಕರ್ ಪ್ರಶಸ್ತಿಯ ಮೂಲಕ ಕನ್ನಡ ಭಾಷೆ ವಿಶ್ವ ಮಟ್ಟದಲ್ಲಿ ತಲೆ ಎತ್ತಿ ನಿಲ್ಲುವಂತೆ ತಮ್ಮ ಅನುವಾದ ಕೃತಿಯ ಮೂಲಕ ದೀಪಾ ಭಾಸ್ತಿ ಅವರು ಮಾಡಿದ್ದಾರೆಂದು ಮೆಚ್ಚುಗೆಯ ನುಡಿಗಳನ್ನಾಡಿದರು.

ಸಭಾಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ಮಾತನಾಡಿ, ಎರಡೂವರೆ ಸಾವಿರ ವರ್ಷದ ಶ್ರೀಮಂತ ಭಾಷಾ ಸಂಸ್ಕೃತಿಯನ್ನು ಕನ್ನಡ ಹೊಂದಿದ್ದು, 8 ಜ್ಞಾನ ಪೀಠ ಪ್ರಶಸ್ತಿಗಳನ್ನು ಪಡೆದುಕೊಂಡಿದೆಯಾದರೂ, ಕನ್ನಡದ ಮಹತ್ವದ ಕೃತಿಗಳು ಅನುವಾದವಾಗಿಲ್ಲವೆಂದು ನುಡಿದರಲ್ಲದೆ, ಭಾನು ಮುಷ್ತಾಕ್ ಅವರ ಕನ್ನಡದ ಕೃತಿಯ ಅನುವಾದದ ಮೂಲಕ ಬೂಕರ್ ಪ್ರಶಸ್ತಿ ಬಂದಿರುವುದು ಇದೇ ಮೊದಲೆಂದು ತಿಳಿಸಿದರು.

ಈ ಸುದ್ದಿ ಓದಿದ್ದೀರಾ?ಮೈಸೂರು | ಅಗಲಿದ ಪತ್ರಕರ್ತರಿಗೆ ಸ್ನೇಹ ಕೂಟದಿಂದ ಶ್ರದ್ದಾಂಜಲಿ

ವೇದಿಕೆಯಲ್ಲಿ ಕೊಡಗು ಜಿಲ್ಲಾ ಮಹಿಳಾ ಬರಹಗಾರರ ಸಂಘದ ಅಧ್ಯಕ್ಷೆ ಪುದಿಯನೆರವನ ರೇವತಿ ರಮೇಶ್, ಮಡಿಕೇರಿ ತಾಲೂಕು ಕಸಾಪ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಎಸ್.ಐ. ಮುನೀರ್ ಅಹಮ್ಮದ್, ಸಾಹಿತಿ ಸುಬ್ರಾಯ ಸಂಪಾಜೆ ಡಾ. ಕಾವೇರಿ ಪ್ರಕಾಶ್, ಶಿಕ್ಷಕಿ ಕೆ.ಜಿ.ರಮ್ಯಾ, ವಿನೋದ್ ಮೂಡಗದ್ದೆ ಸೇರಿದಂತೆ ಇನ್ನಿತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಸೆ.3ರಂದು ಬಸವ ಸಂಸ್ಕೃತಿ ಅಭಿಯಾನ : ರಂಗೋಲಿ, ಬಾಲ ಶರಣರ ವೇಷಧಾರಿ ಸ್ಪರ್ಧೆ

ಬಸವ ಸಂಸ್ಕೃತಿ ಅಭಿಯಾನದ ಅಂಗವಾಗಿ ಅಭಿಯಾನ ಸಮಿತಿ ವತಿಯಿಂದ ಬೀದರ್ ನಗರದಲ್ಲಿ...

ಬೀದರ್‌ | ಎಫ್‌ಆರ್‌ಎಸ್ ಕ್ರಮ ಖಂಡಿಸಿ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಅಂಗನವಾಡಿ ಕಾರ್ಯಕರ್ತೆಯರ ಮುಖಚರ್ಯೆ ಗುರುತಿಸುವ ಕ್ರಮಕ್ಕೆ (ಎಫ್ಆರ್‌ಎಸ್) ತಡೆ ಹಾಗೂ ಐಸಿಡಿಎಸ್...

ಯೂಟ್ಯೂಬರ್ ಸಮೀರ್ ಎಂ.ಡಿ. ಮನೆ ಸುತ್ತುವರಿದ ಖಾಕಿ ಪಡೆ, ತಾಯಿಯ ವಿಚಾರಣೆ

ಯೂಟ್ಯೂಬರ್ ಸಮೀರ್.ಎಂ.ಡಿ ಬಂಧನಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿರುವ ಸಮೀರ್ ಅವರ ಮನೆಯನ್ನು ಧರ್ಮಸ್ಥಳ...

Download Eedina App Android / iOS

X