ಮಾರ್ಚ್ 8 ರಂದು ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳ ಆಯೋಜನೆ ಮಾಡಲಾಗಿದೆ.
ಕೊಡಗು ಜಿಲ್ಲೆಯ 18 ರಿಂದ 35 ವರ್ಷದೊಳಗಿನ ಯುವಕ, ಯುವತಿಯರು ಪಾಲ್ಗೊಂಡು ಪ್ರಯೋಜನ ಪಡೆಯಬಹುದು. ಮಾರ್ಚ್ 8 ರ ಬೆಳಗ್ಗೆ 10 ಗಂಟೆಯಿಂದ ಮಡಿಕೇರಿಯ ಜಿಲ್ಲಾ ಸರ್ಕಾರಿ ಕೈಗಾರಿಕಾ ತರಭೇತಿ ಸಂಸ್ಥೆಯಲ್ಲಿ ನಡೆಯಲಿದೆ. ನಿಗದಿತ ಸಮಯದಲ್ಲಿ ಸಂದರ್ಶನ ನಡೆಯಲಿದ್ದು ಅಭ್ಯರ್ಥಿಗಳು ದಾಖಲೆಯೊಡನೆ ಹಾಜರಾಗುವಂತೆ
ಕೋರಲಾಗಿದೆ.
ಸಂಜೀವಿನಿ ಕೆ ಎಸ್ ಆರ್ ಎಲ್ ಪಿ ಎಸ್ ನ ಡಿಡಿಯುಜಿಕೆವೈ ಯೋಜನೆಯಡಿ ಉದ್ಯೋಗ ಮೇಳ ನಡೆಯುತ್ತಿದ್ದು, ಕೊಡಗು ಜಿಲ್ಲಾದ್ಯಂತ ಕನಿಷ್ಠ 800 ಅಭ್ಯರ್ಥಿಗಳಿಗೆ ಉದ್ಯೋಗದಾತ ಸಂಸ್ಥೆಗಳಿಂದ ಸ್ಥಳದಲ್ಲಿಯೇ ಉದ್ಯೋಗ ಕಲ್ಪಿಸುವ ಗುರಿಯನ್ನು ಹೊಂದಿದೆ.
ಈ ಸುದ್ದಿ ಓದಿದ್ದೀರಾ? ಮೈಸೂರು | ಮನುಸ್ಮೃತಿಯಿಂದಲೇ ಇಂದು ದ್ವೇಷ ಸಂಸ್ಕೃತಿ ಬೆಳೆದಿದೆ : ಚಿಂತಕ ರಂಜಾನ್ ದರ್ಗಾ
ಕೊಡಗು ಜಿಲ್ಲಾ ಪಂಚಾಯತ್ ಆಯೋಜಿತ ಉದ್ಯೋಗ ಮೇಳದಲ್ಲಿ ಹಲವಾರು ಪ್ರತಿಷ್ಠಿತ ಕಂಪನಿಗಳು ಭಾಗವಹಿಸಲಿದ್ದು, ಅರ್ಹ ಅಭ್ಯರ್ಥಿಗಳನ್ನು ತರಭೇತಿಗೆ ಆಯ್ಕೆ ಮಾಡಿಕೊಳ್ಳಲಿದೆ ಎಂದು ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಆನಂದ್ ಪ್ರಕಾಶ್ ಮೀನಾ ಮಾಹಿತಿ ನೀಡಿದ್ದಾರೆ.

