ನಿಷೇಧಿತ ಮಾದಕ ವಸ್ತುಗಳಾದ ಎಂಡಿಎಂಎ, ಗಾಂಜಾವನ್ನು ಮಾರಾಟ ಮತ್ತು ಸರಬರಾಜು ಮಾಡುತ್ತಿದ್ದ ಪ್ರಕರಣವನ್ನು ಕೊಡಗು ಜಿಲ್ಲೆಯ ವಿರಾಜಪೇಟೆ ಪೊಲೀಸರು ಭೇದಿಸಿದ್ದು, ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಕೇರಳ ರಾಜ್ಯದ ಮೂವರು ಆರೋಪಿಗಳೊಂದಿಗೆ, ಕೊಡಗು ಜಿಲ್ಲೆಯ ಇಬ್ಬರು ಆರೋಪಿಗಳನ್ನು ಬಂಧಿಸಿ ಮಾಲು ಹಾಗೂ ಕೃತ್ಯಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ವಿರಾಜಪೇಟೆ ಉಪವಿಭಾಗದ ಡಿವೈಎಸ್‌ಪಿ ಮೋಹನ್ ಕುಮಾರ್, ವೃತ್ತ ನಿರೀಕ್ಷಕ ಪಿ ಅನೂಪ್ ಮಾದಪ್ಪ, ವಿರಾಜಪೇಟೆ ನಗರ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಪ್ರಮೋದ್ ಮತ್ತು ಸಿಬ್ಬಂದಿಗಳನ್ನು ಒಳಗೊಂಡ ತನಿಖಾ ತಂಡ ಈ ಕಾರ್ಯಾಚರಣೆ ನಡೆಸಿದೆ.
ವಿರಾಜಪೇಟೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಆರ್ಜಿ ಗ್ರಾಮದ ಕಿರುಮಕ್ಕಿ, ಕಂಡಿಮಕ್ಕಿ ಜಂಕ್ಷನ್‌ನಲ್ಲಿ ನಿಷೇಧಿತ ಎಂಡಿಎಂಎ ಮಾದಕ ವಸ್ತು ಹಾಗೂ ಗಾಂಜಾ ಮಾರಾಟ, ಸರಬರಾಜು ಮಾಡುತ್ತಿದ್ದ ಬಗ್ಗೆ ಪೊಲೀಸ್ ತನಿಖಾ ತಂಡಕ್ಕೆ ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಆರೋಪಿಗಳಾದ ಕೇರಳ ಮೂಲದ ಎಂ ಕೆ ಸುಜೇಶ್(44), ಪಿಣರಾಯಿ ಜಂಶೀರ್(37), ತಲಚೇರಿ ಜಿಲ್ಲೆಯ ಇರನ್ನೋಳಿ ಗ್ರಾಮದ ಸಿ ವಿ ಶಮ್ಮಾಸ್(32), ವಿರಾಜಪೇಟೆ ತಾಲೂಕು ಮರೂರು ಗ್ರಾಮದ ಯು ವೈ ಜಬ್ಬಾರ್(38) ಮತ್ತು ಮೊಹಮ್ಮದ್ ಕುಂಞಿ(48) ಬಂಧಿತ ಆರೋಪಿಗಳು.
ಈ ಸುದ್ದಿ ಓದಿದ್ದೀರಾ? ಚಾಮರಾಜನಗರ | ಇನ್ಫೋಸಿಸ್ ಸಮಾನ ಶಿಕ್ಷಣ ಹಂಚುವ ಜವಾಬ್ದಾರಿ ಹೊಂದಿದೆ: ಸಂತೋಷ್ ಅನಂತಪುರ
ಆರೋಪಿಗಳಿಂದ 84 ಗ್ರಾಂ ಮಾದಕ ವಸ್ತು, 7 ಗ್ರಾಂ. ಗಾಂಜಾ, ಒಂದು ಬಲೆನೋ ಕಾರು, ಒಂದು ಡಿಜಿಟಲ್ ತೂಕದ ಯಂತ್ರ ಹಾಗೂ ಮಾದಕ ವಸ್ತು ಸೇವನೆಗೆ ಬಳಸುವ ಉಪಕಾರಣಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.