ವಿದ್ಯಾಭ್ಯಾಸದ ಜತೆಗೆ ಪೂರ್ವ ನಿಯೋಜಿತ ಗುರಿ ಸಾರ್ಥಕ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ಶಾಸಕ ಎ ಎಸ್ ಪೊನ್ನಣ್ಣ ವಿದ್ಯಾರ್ಥಿಗಳಿಗೆ ತಿಳಿಸಿದರು.
ವಿರಾಜಪೇಟೆಯಲ್ಲಿ ದಿ. ಎ ಕೆ ಸುಬ್ಬಯ್ಯ ಮತ್ತು ಪೊನ್ನಮ್ಮ ದತ್ತಿನಿಧಿ ಪ್ರೋತ್ಸಾಹ ಧನ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿ, “ಪ್ರತಿಯೊಬ್ಬ ವಿಧ್ಯಾರ್ಥಿಯೂ ತಮ್ಮ ಬದುಕಿನುದ್ದಕ್ಕೂ, ವಿದ್ಯೆಯ ಜೊತೆಗೆ ಜೀವನದ ಗುರಿ, ಮುಂದಿನ ದೃಢವಾದ ಆಲೋಚನೆ, ಸಮಾಜಕ್ಕಾಗಿ ದುಡಿಯುವ ಮನಸ್ಸು, ತನ್ನಿಂದ ಜನರಿಗಾಗಿ ಏನೆಲ್ಲ ಮಾಡಬಹುದೆನ್ನುವ ಕನಸನ್ನು ಈಗಿನಿಂದಲೇ ರೂಢಿಸಿಕೊಳ್ಳುವುದು ಬಹುಮುಖ್ಯ” ಎಂದು ಹೇಳಿದರು.
“ಅರ್ಥಿಕ ಸಂಕಷ್ಟದಿಂದಾಗಿ ವಿದ್ಯಾರ್ಥಿಗಳು ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸುತ್ತಿದ್ದಾರೆ. ಇನ್ನು ಪೋಷಕರ ಅಸಹಾಯಕತೆ ಪರಿಸ್ಥಿತಿ ಏನೂ ಮಾಡಲು ಸಾಧ್ಯವಿರದಾಗಿದೆ. ಇಂತಹ ಬಡ ಕುಟುಂಬದ ಮಕ್ಕಳಿಗೆ ಆರ್ಥಿಕವಾಗಿ ನೆರವಿನ ಅಗತ್ಯತೆವಿದೆ. ಸಮಾಜದಲ್ಲಿ ಸಮಾನ ಮನಸ್ಥಿತಿ ಉಳ್ಳವರು ಸಹಾಯ ಹಸ್ತ ಚಾಚಬೇಕಿದೆ” ಎಂದರು.
“ವಿದ್ಯಾರ್ಥಿಗಳು ಉದ್ಯೋಗ ಗಿಟ್ಟಿಸಿಕೊಳ್ಳುವುದಷ್ಟೇ ಅಲ್ಲದೆ, ಸಮಾಜಿಕ ಬದುಕು ಮತ್ತು ಮಾನವೀಯ ಗುಣಗಳನ್ನು ಹೊಂದಬೇಕು. ಗುರಿ ಸಾಧಿಸಲು ಶ್ರಮಿಸಬೇಕು. ಸಮಾಜ ನಮಗೆಲ್ಲವನ್ನೂ ನೀಡಿದೆ, ನಮ್ಮಿಂದ ಸಮಾಜಕ್ಕೆ ನೆರವಾಗುವಂತಹ ಕೆಲಸ ಮಾಡಬೇಕು” ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿ ಶಕ್ತಿ ದಿನಪತ್ರಿಕೆ ಪ್ರಧಾನ ಸಂಪಾದಕ ಚಿದ್ವಿಲಾಸ್ ಮಾತನಾಡಿ, “ವಿದ್ಯಾ ದಾನಂ ಮಹಾದಾನಂ’ ಎಂಬಂತೆ ಶಾಸಕರು ಸೇರಿದಂತೆ ಕುಟುಂಬ ಪೋಷಕರ ಹೆಸರಿನಲ್ಲಿ ದತ್ತಿ ನಿಧಿ ಸ್ಥಾಪಿಸಿ ಪ್ರತಿಭಾನ್ವಿತ ವಿಧ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡುತ್ತಿರುವುದು ಪ್ರಶಂಸಾನಾರ್ಹ. ರಾಜಕೀಯದ ಕೆಲವು ವ್ಯಕ್ತಿಗಳು ಗಳಿಕೆಯನ್ನು ಮಾಡಿ ತಮ್ಮೋರಿಗೆ ಮಾತ್ರ ವಿನಿಯೋಗ ಮಾಡುತ್ತಾರೆ. ಆದರೆ ಶಾಸಕ ಎ ಎಸ್ ಪೊನ್ನಣ್ಣ ಸಮಾಜ ಸೇವೆ, ವಿದ್ಯಾರ್ಥಿಗಳ ಜೀವನ ಸುಧಾರಣೆ, ಸಮಾಜದ ಒಳಿತಿಗಾಗಿ ಮನ ಮಿಡಿಯುತ್ತಿರುವುದು ಶ್ಲಾಘನೀಯ” ಎಂದರು.
ಈ ಸುದ್ದಿ ಓದಿದ್ದೀರಾ? ಹಿರಿಯ ಪತ್ರಕರ್ತ ಕುವೇಂಡ ವೈ ಹಂಝತುಲ್ಲಾರಿಗೆ ಬ್ಯಾರಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಗೌರವ
ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ನರೇನ್ ಕಾರ್ಯಪ್ಪ, ಹಿರಿಯರಾದ ಗಂಗಮ್ಮ ಸುಬ್ರಮಣಿ, ಚಂದಲೇ ಕಾರ್ಯಪ್ಪ, ಶಿಕ್ಷಕ ಮಂಜುನಾಥ್ ಸೇರಿದಂತೆ ಹಲವರು ಇದ್ದರು.