ಬಿಸಿಲಿನ ತಾಪಕ್ಕೆ ನಲುಗಿದ್ದ ಇಳೆಗೆ ಮಳೆರಾಯ ತಂಪೆರೆದಿದ್ದಾನೆ. ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಹಲವೆಡೆ ಗುಡುಗು ಸಹಿತ ಮಳೆಯಾಗಿದೆ.
ಸಂಜೆ ಸಮಯಕ್ಕೆ ಗುಡುಗು, ಮಿಂಚು ಸಮೇತ ವರ್ಷದ ಮೊದಲ ಮಳೆ ಸುರಿದಿದೆ. ಕೊಡಗು ತಂಪು ಪ್ರದೇಶವಾದರೂ ಬೇಸಿಗೆಗೂ ಮುನ್ನ ಬಿಸಿಲ ಝಳಕ್ಕೆ ಕಾಫಿ ಹೂ ಮಾಸುತಿತ್ತು. ಇದೀಗ ಮೊದಲ ಮಳೆಯು ಕಾಫಿ ಕೃಷಿಕರ ಮುಖದಲ್ಲಿ ಮಂದಹಾಸ ಮೂಡಿಸಿದೆ.
ಆದರೆ ಕೆಲವು ಕಡೆ ಇನ್ನೂ ಕಾಫಿ ಕೊಯ್ಲು ಮುಗಿದಿಲ್ಲ. ಹಾಗೆ ಒಣ ಹಾಕಿದ್ದ ಕಾಫಿ, ಮೆಣಸು ಅಕಾಲಿಕ ಮಳೆಗೆ ತೊಯ್ದು ನಷ್ಟದ ಜೊತೆಗೆ ಆತಂಕವನ್ನುಂಟು ಮಾಡಿದೆ.
ಈ ಸುದ್ದಿ ಓದಿದ್ದೀರಾ? ಕೊಡಗು | ಗಾಂಜಾ ಮಾರಾಟ; ಇಬ್ಬರ ಬಂಧನ
ನಾಪೋಕ್ಲು ಬಳಿಯ ಕಕ್ಕಬ್ಬೆ, ಯುವಕಪಾಡಿ, ಕುಂಜಿಲ ಸೇರಿದಂತೆ ಹಲವೆಡೆ ಸುಮಾರು 1.5 ಇಂಚು ಮಳೆ ದಾಖಲಾಗಿದೆ.
