ಸುಂಟಿಕೊಪ್ಪ ಕೊಡಗು ಜಿಲ್ಲೆಯ ಸುಂಟಿಕೊಪ್ಪದ ಸಮೀಪದ ಗರಂಗದೂರಿನ ಮೊರಾರ್ಜಿ ದೇಸಾಯಿ ವಸತಿ ಪಿಯು ಕಾಲೇಜಿನ ಸಮೀಪ ಶನಿವಾರ ತಡರಾತ್ರಿ ಚಿರತೆ ದಾಳಿಗೆ ಕುರಿಯೊಂದು ಮೃತಪಟ್ಟಿದೆ.
ಚಿರತೆ ದಾಳಿಗೆ ಕುರಿ ಮೃತಪಟ್ಟಿರುವುದರಿಂದ ಸ್ಥಳೀಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳಲ್ಲಿ ಆತಂಕ ಮೂಡಿಸಿದೆ.
“ಕಾಲೇಜಿನ ಭದ್ರತಾ ಸಿಬ್ಬಂದಿ ಉಮರ್ ಖಾನ್ ಎಂಬುವವರಿಗೆ ಸೇರಿದ ಕುರಿ ಚಿರತೆ ದಾಳಿಗೆ ಸಿಲುಕಿದೆ. ಸ್ಥಳದಲ್ಲಿ ಚಿರತೆಯ ಹೆಜ್ಜೆ ಗುರುತುಗಳು ಪತ್ತೆಯಾಗಿವೆ” ಎಂದು ಸ್ಥಳೀಯರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಯಾದಗಿರಿ | ಕಾರ್ಮಿಕರ ಸಂಖ್ಯೆ ಕಡಿತಗೊಳಿಸುವ ಆದೇಶ ಹಿಂಪಡೆಯಲು ಆಗ್ರಹ
ಮೊರಾರ್ಜಿ ದೇಸಾಯಿ ಪಿಯು ವಸತಿ ಕಾಲೇಜಿನಲ್ಲಿ ಒಟ್ಟು 170 ಮಂದಿ ವಿದ್ಯಾರ್ಥಿಗಳು ಇದ್ದಾರೆ. ಚಿರತೆ ದಾಳಿಯಿಂದ ಆತಂಕಕ್ಕೀಡಾಗಿದ್ದಾರೆ ಎನ್ನಲಾಗಿದೆ.