ಕೊಡಗು ಜಿಲ್ಲೆಯ ಗೋಣಿಕೊಪ್ಪಲು ತಾಲೂಕಿನ ಮಾಯಾಮುಡಿ ಗ್ರಾಮದ ಚೆನ್ನಂಗೊಲ್ಲಿಯ ಕಾಫಿ ತೋಟದಲ್ಲಿ ಇತ್ತೀಚೆಗೆ ಕಾಡಾನೆ ದಾಳಿಯಿಂದ ಮೃತಪಟ್ಟ ಜಾನಕಿಯವರ ಮನೆಗೆ ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯಾದ್ಯಕ್ಷ ಬೆಳಗಾಮಿ ಡಾ. ಮೊಹಮ್ಮದ್ ಸಾದ್ ಭೇಟಿ ನೀಡಿ, ಸಾಂತ್ವನ ಹೇಳಿದ್ದು, ಮೃತರ ಪತಿ ರಾಧಾಕೃಷ್ಣ ಅವರಿಗೆ ಪರಿಹಾರ ವಿತರಿಸಿದರು.
“ವನ್ಯ ಪ್ರಾಣಿಗಳು ವಾಸಿಸುವ ಇಂತಹ ಪ್ರದೇಶಗಳಲ್ಲಿ ಜನರು ಜಾಗೃತರಾಗಿರಬೇಕು. ಇತ್ತೀಚೆಗೆ ಕೊಡಗಿನಲ್ಲಿ ಆನೆ-ಮಾನವ ಸಂಘರ್ಷದಿಂದ ತುಂಬಾ ಜನರು ಪ್ರಾಣ ಕಳೆದುಕೊಂಡಿದ್ದು ದುರದೃಷ್ಟಕರ” ಎಂದು ಬೇಸರ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಗ್ರಾಮೀಣ ಪ್ರದೇಶಗಳ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಎನ್‌ಎಸ್ಎಸ್ ಪಾತ್ರ ಅಪಾರ: ಕುಲಪತಿ ಶಾಂತಾದೇವಿ ಟಿ
ಮೈಸೂರು ವಲಯ ಸಂಚಾಲಕ ಯೂ ಅಬ್ದುಲ್ ಸಲಾಮ್ ಗೋಣಿಕೊಪ್ಪ ಸ್ಥಾನೀಯ ಅದ್ಯಕ್ಷ ತನ್ವೀರ್ ಅಹಮದ್, ಸದಸ್ಯ ಮೆಹಮೊದ್ ಹಾಗೂ ಜಿಲ್ಲಾ ಪಂಚಾಯತ್ ಸದಸ್ಯರುಗಳಾದ ಕೆ ಕೆ ಶಬರೀಶ್ ನಾಧಿರಾ, ಎಂ ಪಿ ಮೀನಾ, ಮಾಜಿ ಸದಸ್ಯರುಗಳಾದ ವಿನ್ಸೆಂಟ್ ಬಾಬು ಅಬೂಟಿ ಸ್ಥಳೀಯ ಗ್ರಾಮಸ್ಥರಾದ ಅನ್ಸಾರ್ ಅದ್ದು ಅಝೀಝ್, ಜನಾರ್ಧನ ಹಾಗೂ ಪ್ರಮೋದ್ ಇದ್ದರು.