ಉದ್ಯಮಿ ಅನೀಶ್ ಮಾದಪ್ಪ ಅವರ ಮನೆ ಮೇಲೆ ಗುಂಡಿನ ದಾಳಿ ನಡೆದಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಗೋಣಿಕೊಪ್ಪಲಿನಲ್ಲಿ ನಡೆದಿದೆ.
ಅನೀಶ್ ಅವರ ಪುತ್ರ ಆಯುಷ್ ಮನೆಯ ಹೊರಗೆ ಸೈಕಲಿಂಗ್ ಮಾಡುವಾಗ ದಾಳಿ ನಡೆದಿದೆ. ಅದೃಷ್ಟವಶಾತ್ ಗುಂಡು ಬೇರೆಡೆಗೆ ಹಾರಿದ್ದರಿಂದ, ಆತ ಅಪಾಯದಿಂದ ಪಾರಾಗಿದ್ದಾನೆ. ಆದರೆ, ಗುಂಡುಗಳು ಮನೆಯ ಹೊರಗಿನ ಶೆಡ್‌ನಲ್ಲಿದ್ದ ನಾಯಿಗಳಿಗೆ ತಗುಲಿದ್ದು, ಒಂದು ನಾಯಿ ಮೃತಪಟ್ಟಿದೆ. ಉಳಿದೆರಡು ನಾಯಿಗಳ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದಿಬಂದಿದೆ.
ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅನೀಶ್ ಅವರು ತಮ್ಮ ನೆರೆಮನೆಯ ಎ.ಟಿ ಸೋಮಣ್ಣ ಎಂಬವರ ವಿರುದ್ಧ ದೂರು ನೀಡಿದ್ದಾರೆ. ಕೊಲೆ ಪ್ರಯತ್ನದ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯ ಪತ್ತೆಗಾಗಿ ಶೋಧ ನಡೆಸುತ್ತಿದ್ದಾರೆ.