ಸೆಪ್ಟೆಂಬರ್ 10ರಂದು ಕೊಡಗು ಜಿಲ್ಲಾ ಪ್ರಗತಿಪರ ಜೇನು ಕೃಷಿಕರ ಸಂಘದ ನಿರ್ದೇಶಕ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಆದರೆ, ಹಾಲಿ ಆಡಳಿತ ಮಂಡಳಿಯು ರಾಜಕೀಯ ದ್ವೇಷದಿಂದ ಸುಮಾರು 40 ಮಂದಿ ಸದಸ್ಯರನ್ನು ಮತಪಟ್ಟಿಯಿಂದ ಕೈಬಿಟ್ಟಿತ್ತು. ಇದೀಗ ಅವರೆಲ್ಲರಿಗೂ ಮತದಾನಕ್ಕೆ ಅವಕಾಶ ನೀಡುವಂತೆ ಹೈಕೋರ್ಟ್ ಆದೇಶ ನೀಡಿದೆ ಎಂದು ಸಂಘದ ಸದಸ್ಯರು ಹೇಳಿದ್ದಾರೆ.
ಮತಪಟ್ಟಿಯಿಂದ ಸದಸ್ಯರನ್ನು ಕೈಬಿಡಲಾಗಿದ್ದ ಬಗ್ಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ವಿರಾಜಪೇಟೆ ಶಾಸಕರ ಎ.ಎಸ್ ಪೊನ್ನಣ್ಣ ಅವರ ಗಮನಕ್ಕೆ ತರಲಾಗಿತ್ತು. ಅವರು ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದರು.
ವಿಧಾನ ಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ನವರ ಗಮನಕ್ಕೆ ತಂದ ಮೇರೆಗೆ ಕರ್ನಾಟಕ ರಾಜ್ಯ ಹೈಕೋರ್ಟ್ ನಲ್ಲಿ ದಾವೆ ಹೂಡಿದ್ದರು. “ಭಾಗಮಂಡಲದ ಕೊಡಗು ಪ್ರಗತಿಪರ ಜೇನು ಕೃಷಿಕರ ಸಂಘದ ಸದಸ್ಯರ ಮತದಾನದ ಹಕ್ಕು ಕಸಿದುಕೊಳ್ಳಲಾಗಿದೆ. ಆ ಮೂಲಕ ಆಡಳಿತ ಮಂಡಳಿಯು ಕಾನೂನನನ್ಉ ಉಲ್ಲಂಘಿಸಿದೆ” ಎಂದು ಕೋರ್ಟ್‌ನಲ್ಲಿ ವಕೀಲೆ ಲೀಲಾ ದೇವಾಡಿಗ ಅವರು ನ್ಯಾಯಾಲಯಕ್ಕೆ ತಿಳಿಸಿದ್ದರು.
ವಾದ ಆಲಿಸಿದ ನ್ಯಾಯಾಲಯ, “ಎಲ್ಲ ಸದಸ್ಯರಿಗೂ ಮತಧಾನಕ್ಕೆ ಅವಕಾಶ ನೀಡಬೇಕು” ಎಂದು ಹೇಳಿದೆ. ಸಂಘದ ನಿಭಂದಕರು, ಉಪ ನಿಭಂದಕರು ಹಾಗೂ ಸಂಭಂದಪಟ್ಟ ಅಧಿಕಾರಿಗಳು ಆದೇಶವನ್ನು ತಕ್ಷಣವೇ ಪಾಲಿಸುವಂತೆ ಸೂಚನೆಯನ್ನು ನೀಡಿದೆ ಎಂದು ವಿವರಿಸಿದೆ.
“ಹೈಕೋರ್ಟ್ ಆದೇಶವು ಕೊಡಗಿನ ಅನೇಕ ಸಹಕಾರ ಸಂಘಗಳು ರಾಜಕೀಯ ದುರುದ್ದೇಶದಿಂದ ಮತದಾನದ ಹಕ್ಕು ಕಸಿಯುವ ಪ್ರವೃತ್ತಿಗೆ ಕಡಿವಾಣ ಹಾಕಿದೆ” ಎಂದು ಸಂಘದ ಸದಸ್ಯರು ಹೇಳಿದ್ದಾರೆ.