ಪಾದಚಾರಿಯೊಬ್ಬರಿಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಕಾರು ಅಪಘಾತಕ್ಕೀಡಾಗಿದ್ದು,. ಆಟೋ ಗ್ಯಾರೇಜ್ ಮಾಲೀಕರೊಬ್ಬರು ಮೃತಪಟ್ಟಿರುವ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ಬಳಿ ನಡೆದಿದೆ.
ರಾಣಿಪೇಟೆಯಿಂದ ಮಡಿಕೇರಿಗೆ ಬರುತ್ತಿದ್ದ ಕಾರು ಅಪಘಾತಕ್ಕೀಡಾಗಿದೆದೆ. ಆಟೊ ಗ್ಯಾರೇಜ್ ಮಾಲೀಕ ಭಾಸ್ಕರ್ (62) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ.
ಭಾಸ್ಕರ್ ಅವರು ಕಾರಿನಲ್ಲಿ ತೆರಳುವಾಗ ಪಾದಚಾರಿಯೊಬ್ಬರತ್ತ ಕಾರು ನುಗ್ಗಿದೆ. ಅವರಿಗೆ ಢಿಕ್ಕಿ ಹೊಡೆಯುವದನ್ನು ತಪ್ಪಿಸಲು ಹೋಗಿ, ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ ಹೊಡೆದು, ಬಳಿಕ ಮನೆಯೊಂದರ ಕಾಂಪೌಂಡ್‌ಗೆ ಗುದ್ದಿದೆ. ಪರಿಣಾಮ ಭಾಸ್ಕರ್ ಮತ್ತು ಕಾರಿನಲ್ಲಿದ್ದ ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಇಬ್ಬರನ್ನೂ ಮಡಿಕೇರಿ ಜಿಲ್ಲಾಸ್ಪತ್ರೆಗೆ ಸಾಗಿಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಭಾಸ್ಕರ್ ಮೃತಪಟ್ಟಿದ್ದಾರೆ. ಮತ್ತೊಬ್ಬ ವ್ಯಕ್ತಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಮಡಿಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.