ಜನರನ್ನು ಬಾಧಿಸುತ್ತಿರುವ ರೋಗಳಲ್ಲಿ ಒಂದು ಡೆಂಘಿ ವಿರುದ್ಧ ಕೊಡಗು ಜಿಲ್ಲಾಡಳಿತ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೊಡುಗು ಜಿಲ್ಲೆಯಾದ್ಯಂತ ಜಾಗೃತಿ ಜಾಥಾ ನಡೆಸುತ್ತಿವೆ.
ರಾಷ್ಟೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮದ ಅಡಿಯಲ್ಲಿ ಜಾಗೃತಿ ಜಾಥಾ ನಡೆಯುತ್ತಿದೆ. ಪೊನ್ನಂಪೇಟೆ, ಕಣಂಗಾಲ, ಮಲ್ದಾರೆ, ಚನ್ನಯನಕೋಟೆ, ತಿತಿಮತಿ ಪ್ರಾಥಮಿಕ ಅರೋಗ್ಯ ಕೇಂದ್ರಗಳು, ಸಿದ್ದಾಪುರ, ಹಾಗೂ ಪಾಲಿಬೆಟ್ಟದ ಸಮುದಾಯ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿರುವ ಎಲ್ಲ ಗ್ರಾಮಗಳಲ್ಲಿ ಡೆಂಗ್ಯೂ ಜಾಗೃತಿ ರಥ ಸಂಚರಿಸಿದೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಜಾಥಾದಲ್ಲಿ ಡೆಂಘಿ, ಮಲೇರಿಯಾ, ಚಿಕೂನ್ ಗುನ್ಯಾ, ಆನೆಕಾಲು ರೋಗ, ಮೆದುಳು ಜ್ವರಗಳ ಬಗ್ಗೆ ಸಾರ್ವಜನಿಕರಿಗೆ ದ್ವನಿ ವರ್ಧಕ ಹಾಗೂ ಕರಪತ್ರಗಳನ್ನು ಹಂಚುವುದರ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ.
ಪೊನ್ನಂಪೇಟೆಯಲ್ಲಿ ನಡೆದ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯ ನಿರೀಕ್ಷಣಾ ಅಧಿಕಾರಿ ಶಶಿಕಾಂತ, ವೈದ್ಯಾಧಿಕಾರಿಗಳು, ಆಶಾ ಕಾರ್ಯಕರ್ತೆಯರು ಹಾಗೂ ವೈದ್ಯಕೀಯ ಸಿಬ್ಬಂದಿಗಳು ಇದ್ದರು.