ಕರ್ನಾಟಕವೂ ಸೇರಿದಂತೆ ದೇಶದಲ್ಲಿ ನಿರುದ್ಯೋಗದ ಸಮಸ್ಯೆ ಹೆಮ್ಮರವಾಗಿದೆ. ಉದ್ಯೋಗಗಳ ಕೊರತೆ ಮತ್ತು ಉದ್ಯೋಗಾಕಾಂಕ್ಷಿಗಳ ಹೆಚ್ಚಳದಿಂದ ಉದ್ಯೋಗಿಗಳಿಗೆ ವೇತನವೂ ಅಗತ್ಯಕ್ಕಿಂತ ಕಡಿಮೆಯೇ ಇದೆ. ಕೂಲಿ ಕೆಲಸ ಮಾಡುವವರೂ ಕೂಡ ಶ್ರಮಕ್ಕೆ ತಕ್ಕ ಕೂಲಿ ಸಿಗದೆ ಬೇಸತ್ತಿದ್ದಾರೆ. ಹೀಗಾಗಿ, ಶ್ರಮಕ್ಕೆ ತಕ್ಕ ಪ್ರತಿಫಲ ಅರಸಿ ವಲಸೆ ಹೋಗುತ್ತಿದ್ದಾರೆ. ಇಂತಹ ವಲಸೆ ಕೊಡಗು ಜಿಲ್ಲೆಯಲ್ಲೂ ನಡೆದಿದ್ದು, ಸ್ಥಳೀಯ ಕಾಫಿ ತೋಟಗಳಲ್ಲಿ ಕೆಲಸ ಮಾಡಲು ಕೂಲಿಕಾರರೇ ಇಲ್ಲದಂತಾಗಿದೆ. ಕಾಫಿ ಎಸ್ಟೇಟ್ ಮಾಲೀಕರು ಕೂಲಿ ಕಾರ್ಮಿಕರಿಗಾಗಿ ಹುಡುಕಾಡುತ್ತಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಕಾಫಿ ಬೀಜಗಳ ಕೊಯ್ಲಿಗೆ ಕಾರ್ಮಿಕರು ಸಿಗದೆ, ಎಸ್ಟೇಟ್ ಮಾಲೀಕರೊಬ್ಬರು ಹೆಚ್ಚು ವೇತನ ಹಾಗೂ ಓವರ್ ಟೈಮ್ (ಓಟಿ) ಕೆಲಸಕ್ಕೆ ಹೆಚ್ಚುವರಿ ವೇತನ ನೀಡುವುದಾಗಿ ಜಾಹೀರಾತು ಹಿಡಿದು ರಸ್ತೆ ಬದಿಯಲ್ಲಿ ನಿಂತಿರುವುದು ಕಂಡುಬಂದಿದೆ. ಅವರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಜಾಹೀರಾತು ಹಿಡಿದಿರುವ ಕಾಫಿ ತೋಟದ ಮಾಲೀಕ ತನ್ನ ಜಾಹೀರಾತಿನಲ್ಲಿ, ‘ಕೆಲಸಗಾರರು ಬೇಕಾಗಿದ್ದಾರೆ! ರೊಬೊಸ್ಟಾ ಪಿಕಿಂಗ್ – ಕೆ.ಜಿಗೆ 4.22 ರೂ. ಮಹಿಳಾ ಕಾರ್ಮಿಕರಿಗೆ ದಿನಕ್ಕೆ 415+OT ವೇತನ, ಪುರುಷ ಕಾರ್ಮಿಕರಿಗೆ 615+OT ವೇತನ’ ನೀಡುವುದಾಗಿ ಬರೆದುಕೊಂಡಿದ್ದಾರೆ.
ಅವರ ಚಿತ್ರವನ್ನು ಕೊಡಗು ಕನೆಕ್ಟ್ ಎಂಬ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಚಿತ್ರದ ಜೊತೆಗೆ, “ಕೂಲಿ ಹೆಚ್ಚಿದ್ದರೂ ಕಾಫಿ ಕೊಯ್ಲು ಮಾಡಲು ಕಾರ್ಮಿಕರು ಸಿಗುತ್ತಿಲ್ಲ. ಕಾರ್ಮಿಕರ ಕೊರತೆ ಹೆಚ್ಚಾಗಿದೆ. ಕೊಡಗಿನ ಕಾಫಿ ಬೆಳೆಗಾರರೊಬ್ಬರು ವಿನೂತನ ಜಾಹೀರಾತು ನೀಡಿ ಕಾರ್ಮಿಕರನ್ನು ಸೆಳೆಯುತ್ತಿದ್ದಾರೆ” ಎಂದು ಬರೆಯಲಾಗಿದೆ.
Despite high wages, workers are not available for coffee picking. There is a severe shortage of manpower this season.
As the situation goes from bad to worse, a coffee grower in Kodagu takes the innovative approach to lure workers by advertising his rates.
PC: @gopalgowda16 pic.twitter.com/59HKlGpF8T
— Kodagu Connect (@KodaguConnect) January 4, 2024
“ಕರ್ನಾಟಕವೂ ಸೇರಿದಂತೆ ದೇಶದಲ್ಲಿ ನಿರುದ್ಯೋಗದ ಸಮಸ್ಯೆ ಹೆಮ್ಮರವಾಗಿದೆ.” ಇದು ನಿಮ್ಮ ಬರಹದ ಮೊದಲನೇ ಸಾಲು.
ವಿಪರ್ಯಾಸವೆಂದರೆ, ಹೆಚ್ಚು ವೇತನ ಕೊಟ್ಟರು ಜನರು ಕೆಲಸಕ್ಕೆ ಬಾರದಿರುವುದು. ಅಂದರೆ ಜನರಿಗೆ, ಕೆಲಸ ಮಾಡುವ ಆಸೆ ಇಲ್ಲಾ ಅಥವಾ ನಿರುದ್ಯೋಗ ಇಲ್ಲಾ. ಎರಡೂ ಒಟ್ಟಿಗೆ ಇರಲು ಹೇಗೆ ಸಾಧ್ಯ!!??