ಆಸ್ತಿ ವಿವಾದದ ಹಿನ್ನೆಲೆ ಆರಂಭವಾದ ಗುಂಪು ಘರ್ಷಣೆಯು ಆಶ್ರಮದ ಸ್ವಾಮೀಜಿಯೊಬ್ಬರ ಕೊಲೆಯಲ್ಲಿ ಅಂತ್ಯ ಕಂಡಿದೆ.
ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮೈಲಾಂಡಳ್ಳಿ ಸಮೀಪದ ಸಂತಳ್ಳಿಯಲ್ಲಿರುವ ಆನಂದ ಮಾರ್ಗ ಆಶ್ರಮದ ಆಚಾರ್ಯ ಚಿನ್ಮಯಾನಂದ ಸ್ವಾಮೀಜಿ(70) ಕೊಲೆಯಾದವರು.
ಸಂತಳ್ಳಿ ಗ್ರಾಮದ ನಾಲ್ಕು ಎಕರೆ ಜಾಗದಲ್ಲಿ ಆಶ್ರಮವಿದ್ದು, ಹಲವು ವರ್ಷಗಳಿಂದ ಜಾಗಕ್ಕಾಗಿ ಆಶ್ರಮದ ಸ್ವಾಮೀಜಿಗಳ ನಡುವೆ ವಿವಾದ ನಡೆಯುತ್ತಿತ್ತು. ಶನಿವಾರ ಬೆಳಿಗ್ಗೆ ಆಚಾರ್ಯ ಧರ್ಮ ಪ್ರಾಣಾನಂದ ಅವರ ಗುಂಪು ಶೌಚಾಲಯದಲ್ಲಿದ್ದ ಚಿನ್ಮಯಾನಂದ ಸ್ವಾಮೀಜಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದೆ.
ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿದ್ದ ಚಿನ್ಮಯಾನಂದ ಅವರನ್ನು ಆರ್ ಎಲ್ ಜಾಲಪ್ಪ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸ್ವಾಮೀಜಿ ಮೃತಪಟ್ಟಿದ್ದಾರೆ.
ಕೊಲೆ ಸಂಬಂಧ ಆಚಾರ್ಯ ಧರ್ಮ ಪ್ರಾಣಾನಂದ(45), ಪ್ರಾಣೇಶ್ವರಾನಂದ(48) ಹಾಗೂ ಅರುಣ್ ಕುಮಾರ್(55) ಎಂಬುವವರನ್ನು ಮಾಲೂರು ಪೊಲೀಸರು ಬಂಧಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಪೆಟ್ರೋಲ್–ಡೀಸೆಲ್ ಬೆಲೆ ಇಳಿಕೆಗೆ ಟ್ರಕ್ ಅಸೋಸಿಯೇಷನ್ ಆಗ್ರಹ
ಸ್ಪ್ರೇ ಸಿಂಪಡಿಸಿ ಹಲ್ಲೆ : ಬೆಳಿಗ್ಗೆ ಶೌಚಾಲಯದಲ್ಲಿದ್ದ ಚಿನ್ಮಯಾನಂದ ಸ್ವಾಮೀಜಿ ಅವರ ಮೇಲೆ ಆಚಾರ್ಯ ಧರ್ಮ ಪ್ರಾಣಾನಂದ ಅವರ ಗುಂಪು ಸ್ಪ್ರೇ ಸಿಂಪಡಿಸಿ ದೊಣ್ಣೆಗಳಿಂದ ಹಲ್ಲೆ ನಡೆಸಿದೆ. ಮೊಬೈಲ್ ಮತ್ತು ಕೀ ಕಸಿದುಕೊಂಡಿದ್ದಾರೆ ಎನ್ನಲಾಗಿದೆ.
