ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ತೀರ ಹಿಂದುಳಿದ ಪರಿಶಿಷ್ಟ ಜಾತಿಯ ಅಲೆಮಾರಿ ಚನ್ನದಾಸರ ಸಮುದಾಯ ಹೊಟ್ಟೆಪಾಡಿಗಾಗಿ ಕಲೆಯನ್ನೇ ಅವಲಂಬಿಸಿ ಅಲೆಮಾರಿಗಳಾಗಿ ಜೀವನ ನಡೆಸುತ್ತಿದ್ದಾರೆ. ಅವರಿಗೆ ಜಾತಿಪ್ರಮಾಣ ಪತ್ರವನ್ನು ಹಾಗೂ ವಾಸಸ್ಥಳ ಪ್ರಮಾಣಪತ್ರವನ್ನು ನೀಡುವ ಮೂಲಕ ಅವರಿಗೆ ನೆಲೆಯಲ್ಲಿ ಕಲ್ಪಿಸುವುದು ಇಂದಿನ ತುರ್ತಾಗಿದೆ ಎಂದು ಕರ್ನಾಟಕ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ ಜಿ ಅಭಿಪ್ರಾಯ ವ್ಯಕ್ತಪಡಿಸಿದರು.
ಕೋಲಾರದ ಮಾಲೂರು ತಾಲೂಕಿನ ಓಬಟ್ಟಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಅಲೆಮಾರಿ ಚನ್ನದಾಸರ್ ಸಮುದಾಯದ ಕುಂದುಕೊರತೆಗಳ ಸಭೆಯಲ್ಲಿ ಮಾತನಾಡಿದ ಅವರು, “ಜಿಲ್ಲೆಯಲ್ಲಿ ಎರಡು ದಿನಗಳ ಕಾಲ ಗ್ರಾಮೀಣ ಕಾಲೋನಿಗಳು ಹಾಗೂ ನಗರಪ್ರದೇಶದ ಸ್ಲಂಗಳಲ್ಲಿ ವಾಸಿಸುವ ಅಲೆಮಾರಿ ಸಮುದಾಯಗಳ ಕುಂದುಕೊರತೆಗಳನ್ನು ಆಲಿಸುವುದರೊಂದಿಗೆ ಅಂತಿಮವಾಗಿ ಜಿಲ್ಲಾಡಳಿತದ ಜೊತೆ ಪ್ರಗತಿಪರಿಶೀಲನೆ ನಡೆಸಲು ಇರುವ ಅಧ್ಯಕ್ಷರು ಮಾಲೂರು ಮುಖಾಂತರ ಜಿಲ್ಲೆಯಲ್ಲಿ ತಮ್ಮ ಪ್ರವಾಸ ಪ್ರಾರಂಭಿಸಿದ್ದಾರೆ. ಚನ್ನದಾಸರ್ ಸಮುದಾಯ ರಾಜ್ಯದಲ್ಲಿ ಸಾಮಾಜಿಕ ಶೈಕ್ಷಣಿಕ ಆರ್ಥಿಕ ಸಾಮಾಜಿಕವಾಗಿ ಹಿಂದುಳಿದಿದ್ದಾರೆ. ಈ ಸಮುದಾಯದ ಪರವಾಗಿ ಧ್ವನಿ ಎತ್ತಿ ಸಾಮಾಜಿಕ ನ್ಯಾಯ ಒದಗಿಸುವುದು ಸರ್ಕಾರವನ್ನು ಒತ್ತಾಯಿಸಿ ಕೆಲವು ಸಮಸ್ಯೆಗಳನ್ನು ಬಗೆಹರಿಸುವುದು ನನ್ನ ಕೆಲಸವಾಗಿದೆ ನಿಗಮದ ಅಧ್ಯಕ್ಷರಾಗಿ ಎಸ್‌ಸಿ/ ಎಸ್‌ಟಿ ಅಲೆಮಾರಿಗಳ ಹಿತಾಸಕ್ತಿಯನ್ನು ಕಾಪಾಡುವುದು ಹೊಟ್ಟೆಪಾಡಿಗಾಗಿ ವೃತ್ತಿಯನ್ನು ಜೀವನಕ್ಕಾಗಿ ಅವಲಂಬಿಸಿಕೊಂಡವರನ್ನು ಅವಕಾಶ ವಂಚಿತವರನ್ನು ತೋರಿಸಿಕೊಂಡು ಅಲೆ ಮಾರಿಗಳನ್ನು ಬಳಸಿಕೊಳ್ಳುವ ಸೋದರ ಸಂಘಟನೆಗಳು ನಿಸ್ವಾರ್ಥ ಮನೋಭಾವದಿಂದ ಅವರಿಗೆ ಸವಲತ್ತುಗಳ ಬಗ್ಗೆ ಜಾಗೃತಿ ಮೂಡಿಸಬೇಕು” ಎಂದರು.
“ಚನ್ನದಾಸರ್ ಸಮುದಾಯದ ರಾಜ್ಯಾಧ್ಯಕ್ಷ ವಿ ಚಲಪತಿಯವರು ಹಲವು ಬಾರಿ ನನ್ನನ್ನು ಭೇಟಿ ಮಾಡಿ ಚೆನ್ನ ದಾಸರ್ ಸಮುದಾಯದ ಸಮಸ್ಯೆಗಳ ಬಗ್ಗೆ ಗಮನಕ್ಕೆ ತಂದಿದ್ದಾರೆ ಜಾತಿ ಪ್ರಮಾಣ ಪತ್ರ ಪಡೆಯಲು ಇರುವ ಅಡೆತಡೆಗಳು ಅಧಿಕಾರಿಗಳ ಬಳಿ ಚರ್ಚಿಸುತ್ತೇನೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನೀಡಿರುವ ಸಂವಿಧಾನದ ಫಲಾನುಭವಿಗಳು ನಾವಾಗಿದ್ದು ಎಲ್ಲರೂ ಒಗ್ಗಟ್ಟಾಗಿ ಸಂಘಟನೆ ಹೆಸರಲ್ಲಿ ಹೋರಾಟದ ಪ್ರತಿಫಲ ಪಡೆಯಬೇಕಾಗಿದೆ ಅಲೆಮಾರಿ ನಿಗಮ ಮಂಡಳಿ ನಿಮ್ಮ ಬಳಿ ಬಂದು ಸಮಸ್ಯೆಗಳನ್ನು ಆಲಿಸಿ ಬಗೆಹರಿಸುವ ಕೆಲಸ ಮಾಡುತ್ತಿದೆ ಅವಕಾಶ ವಂಚಿತರು ಅಲೆಮಾರಿಗಳು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಾಗಿದ್ದು ರಾಜ್ಯದಲ್ಲಿ ೫೧ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳಿಗೆ ಇವೆಲ್ಲವೂ ಒಂದೇ ತಾಯಿ ಮಕ್ಕಳು ಬಳ್ಳಿಗಳಾಗಿದ್ದಾರೆ ಅಲೆಮಾರಿ ಜನಾಂಗವನ್ನು ಒಗ್ಗೂಡಿಸಿ ನಿಗಮದ ಸೌಲತ್ತುಗಳನ್ನು ತಲುಪಿಸಲು ೨೭ ಜಿಲ್ಲೆಗಳ ೨೦೭ ತಾಲ್ಲೂಕುಗಳಲ್ಲಿ ಪ್ರವಾಸ ಕೈಗೊಳ್ಳಲಾಗಿದೆ ಬೆಳಗಾವಿ ಜಿಲ್ಲೆಯಲ್ಲಿ ಚನ್ನ ದಾಸರಸಮುದಾಯದ ಹೆಚ್ಚಿನ ಸಂಖ್ಯೆಯಲ್ಲಿರುವ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮ ವಾಸ್ತವ್ಯವನ್ನು ಸಹ ಮಾಡಿ ಸಮಸ್ಯೆಗಳನ್ನು ಆಲಿಸಿ ಬಗೆಹರಿಸಲಾಗಿದೆ ನಿಗಮ ಮಂಡಳಿಯ ಸೌಲತ್ತುಗಳ ಬಗ್ಗೆ ಅರಿವು ಮೂಡಿಸಲಾಗಿದೆ” ಎಂದರು.
“ಅಲೆಮಾರಿಗಳ ಪರ ಪ್ರವಾಸ ಹೋರಾಟ ಅಲೆಮಾರಿಗಳು ಅಲೆಯುವುದನ್ನು ತಪ್ಪಿಸಲು ಅವರ ಸಮಸ್ಯೆಗಳನ್ನು ಆಲಿಸಿ ನಿಗಮ ಮಂಡಳಿ ಮೂಲಕ ಅನುಕೂಲ ಕಲ್ಪಿಸಲು ಸರ್ಕಾರ ಮುಂದಾಗಿದೆ ಇಲ್ಲಿನ ಗ್ರಾಮದಲ್ಲಿ ಚೆನ್ನ ದಾಸರ್ ಸಮುದಾಯದ ಮಕ್ಕಳ ಶಿಕ್ಷಣಕ್ಕಾಗಿ ಸವಲತ್ತುಗಳನ್ನು ಪಡೆಯಲು ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆಯಲು ಮೂಲ ದಾಖಲಾತಿಗಳನ್ನು ಅಧಿಕಾರಿಗಳು ಕೇಳುತ್ತಿದ್ದು ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುವುದರಿಂದ ಇವರ ಅಸ್ತಿತ್ವ ನೆಲೆ ಸಿಗುತ್ತದೆ ಅವರ ಮಕ್ಕಳಿಗೆ ಶಿಕ್ಷಣ ನೀಡಲು ಆರ್ಥಿಕವಾಗಿ ಸ್ವಾವಲಂಬಿಗಳಾಗಿ ಸ್ವಾಭಿಮಾನ ಜೀವನ ನಡೆಸಲು ಸಾಧ್ಯವಾಗುತ್ತದೆ. ಜಿಲ್ಲೆ ಹಾಗೂ ತಾಲೂಕಿನಲ್ಲಿ ಚನ್ನ ದಾಸರ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಲು ಇರುವ ಅಡೆತಡೆಗಳನ್ನು ಅಧಿಕಾರಿಗಳ ಬಳಿ ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗುವುದು ಧಾರ್ಮಿಕ ಸಾಂಸ್ಕೃತಿಕ ರಾಯಭಾರಿಗಳಾದ ಚನ್ನ ದಾಸರ ಸಮುದಾಯ ಭಿಕ್ಷಾಟನೆ ಪದಕ್ಕೆ ಮಾರಕವಾಗಿದೆ ಇದನ್ನು ಹೋಗಲಾಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ ಕಂದಾಯ ಇಲಾಖೆಯ ಅಧಿಕಾರಿಗಳು ಚನ್ನ ದಾಸರ್ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಮೂಲ ದಾಖಲೆಗಳು ಇಲ್ಲದಿದ್ದಲ್ಲಿ ಸ್ಥಳಕ್ಕೆ ಭೇಟಿ ನೀಡಿ ಮಹಜರ್ ನಡೆಸಿ ಅಫಿಡೆವಿಟ್ ಪಡೆದು ಅವರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಬೇಕು” ಎಂದು ತಿಳಿಸಿದರು.
“ಭಾಷೆ ಧಾರ್ಮಿಕ ಪದ್ಧತಿ ವೃತ್ತಿ ಆಧರಿಸಿ ಜಾತಿ ಪ್ರಮಾಣ ಪತ್ರ ನೀಡುವ ಅವಕಾಶವಿದೆ ಮೀಸಲಾತಿ ದುರುಪಯೋಗವಾಗಬಾರದು. ಹಾಗೇನಾದರೂ ದುರುಪಯೋಗ ಆದರೆ ಕಾನೂನಿನ ಉಲ್ಲಂಘನೆಯಾದಂತೆ ಶಿಕ್ಷೆಯಾಗಲಿ, ನೈಜ ಅಲೆಮಾರಿಗಳಿಗೆ ಜಾತಿ ಪ್ರಮಾಣ ಪತ್ರ ಸಿಗಬೇಕು ಸರ್ಕಾರಿ ಆದೇಶ ಉಲ್ಲಂಘನೆ ಮಾಡದೆ ಇಚ್ಛಾಶಕ್ತಿಯಿಂದ ತಹಶೀಲ್ದಾರ್ ಅವರು ವಿಶೇಷ ಶಿಬಿರ ಕೈಗೊಂಡು ಸಮಗ್ರ ವರದಿ ನೀಡಲು ಅಧಿಕಾರಿಗಳು ಸಮುದಾಯಕ್ಕೆ ಸಹಕಾರ ನೀಡಬೇಕು. ರಾಜ್ಯ ಸರ್ಕಾರ ಅಲೆಮಾರಿ ಜನಗಳ ಅಭಿವೃದ್ಧಿಗಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮ ಸ್ಥಾಪಿಸಿದ್ದು, ಅಲೆಮಾರಿ ನಿಗಮ ಮಂಡಳಿಯಿಂದ ಅಲೆಮಾರಿ ಜಾತಿಗಳ ಜನರು ಸರ್ಕಾರಿ ಸವಲತ್ತುಗಳನ್ನು ಪಡೆದುಕೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗಿ ಸಮಾಜದ ಮುಖ್ಯ ವಾಹಿನಿಗೆ ಬರುವಂತೆ ಕರೆ ನೀಡದರು” ಎಂದರು.
ಇದನ್ನೂ ಓದಿ: ಕೋಲಾರ | ರಾಜ್ಯ ಸರ್ಕಾರ ಪರಿಶಿಷ್ಟರ ಹಣ ಪರಿಶಿಷ್ಟರಿಗೆ ಮಾತ್ರ ಬಳಸಬೇಕು; ದಸಂಸ ಆಗ್ರಹ
ಕರ್ನಾಟಕ ಚನ್ನ ದಾಸರ್ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ವಿಚಲಪತಿ ಮಾತನಾಡಿ, “ನೂರಾರು ವರ್ಷಗಳಿಂದ ತಂಬೂರಿ ಗುಮಾಡಿ ಭಿಕ್ಷೆ ಬೇಡಿ ಚಾವಡಿ ವಠಾರಗಳಲ್ಲಿ ತಮ್ಮ ಜೀವನ ನಡೆಸಿಕೊಳ್ಳುತ್ತಿದ್ದು ಸರ್ಕಾರದಿಂದ ಒಂದು ಕಡೆ ನೆಲೆಸಿ ಅಸ್ತಿತ್ವ ಉಳಿಸಿಕೊಳ್ಳಲು ಸವಲತ್ತುಗಳನ್ನು ಒದಗಿಸಬೇಕು 1500 ಜನಸಂಖ್ಯೆ ಇರುವ ಸಮುದಾಯವು ತಮ್ಮ ಮಕ್ಕಳಿಗೆ ಶಿಕ್ಷಣವನ್ನು ನೀಡಲು ಮುಂದಾಗಿದೆ ಆದರೆ ಜಾತಿ ಪ್ರಮಾಣ ಪತ್ರ ಸಮಸ್ಯೆ ಇದ್ದು ಹಿಂದೆ ಪಾಸಿಲ್ದಾರ್ ಅವರು ಸಭೆ ನಡೆಸಿ ಕೈಬರ ಜಾತಿ ಪ್ರಮಾಣ ಪತ್ರ ನೀಡಿದ್ದರು ನಂತರದಲ್ಲಿ ಬಂದ ಅಧಿಕಾರಿಗಳು ಸಮುದಾಯದವರನ್ನು ತಪ್ಪು ದಾರಿಗೆ ಎಳೆದು ತಾಲೂಕು ಇಲಾಖೆಯ ಅಧಿಕಾರಿಗಳು ದಾಸರು ಎಂದು ಜಾತಿ ಪ್ರಮಾಣ ಪತ್ರವನ್ನು ನೀಡಿದ್ದಾರೆ ಆದರೆ ಪರಿಶಿಷ್ಟ ಜಾತಿಯಿಂದ ವಂಚಿತರಾಗಿದ್ದು ಈ ಸಮುದಾಯದ ಕುಂದುಕೊರತೆಗಳು ಹೋಗಲಾಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಸಾಮಾಜಿಕ ಆರ್ಥಿಕ ಪರಿಸ್ಥಿತಿ ಉತ್ತಮವಾಗಿಲ್ಲ ಇನ್ನೂ ಹೆಚ್ಚಿನವರು ಗುಡಿಸಲು ಮತ್ತು ಹೆಚ್ಚಿನ ಹೆಂಚಿನ ಮನೆಗಳಲ್ಲಿ ವಾಸವಾಗಿದ್ದು ಇವರಿಗೆ ನಿವೇಶನ ಹಾಗೂ ಮನೆಗಳ ಅವಶ್ಯಕತೆ ಇದೆ ಜಾತಿ ಪ್ರಮಾಣ ಪತ್ರ ಇಲ್ಲದೆ ಇರುವುದರಿಂದ ಸರ್ಕಾರಿ ಸವಲತ್ತುಗಳಿಂದ ವಂಚಿತರಾಗಿದ್ದು ಶಿಕ್ಷಣ ಪಡೆಯಲು ಸಾಧ್ಯವಾಗುತ್ತಿಲ್ಲ ನೈಜ ಚನ್ನ ದಾಸರು ಸಮುದಾಯಕ್ಕೆ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂಶೋಧನಾ ಕೇಂದ್ರವೂ ಸಹ ಸರ್ಕಾರದಿಂದ ನಡುವಳಿ ಮಾಡಿಸಿದ್ದಾರೆ ಸಾಮಾಜಿಕ ಅಧ್ಯಯನ ಸಹ ನಡೆಸಲಾಗಿದೆ ಸರ್ಕಾರಿ ದಾಖಲೆಗಳು ಚನ್ನ ದಾಸರ್ ಸಮುದಾಯ ಪರಿಶಿಷ್ಟ ಜಾತಿ ಎಂದು ಇದೆ ಅಧಿಕಾರಿಗಳು ಚನ್ನ ದಾಸರ್ ಜಾತಿ ಪ್ರಮಾಣ ಪತ್ರ ನೀಡಲು ಹಿಂದೇಟು ಆಗುತ್ತಿತ್ತು ಈ ಸಮಸ್ಯೆಯನ್ನು ನಿಗಮ ಮಂಡಳಿ ಅಧ್ಯಕ್ಷರಾದ ಪಲ್ಲವಿ ಅವರು ಬಗೆಹರಿಸಿ ಕೊಡಬೇಕು” ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾಲೂರು ತಹಶೀಲ್ದಾರ್ ಎಂ.ವಿ.ರೂಪ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಶ್ರೀನಿವಾಸ, ಸಹಾಯಕ ನಿರ್ದೇಶಕ ಶಿವಕುಮಾರ್, ನಿಗಮದ ಕಾರ್ಯದರ್ಶಿ ಆನಂದ್, ಗ್ರಾಮ ಪಂಚಾಯಿತಿ ಸದಸ್ಯ ಸೂರ್ಯ ನಾರಾಯಣರಾವ್, ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಸಂಚಾಲಕ ಎಸ್.ಎಂ ವೆಂಕಟೇಶ್, ಅನುಷ್ಠಾನ ಸಮಿತಿ ಸದಸ್ಯ ನಾಗರಾಜ್, ಮೋಹನ್ ರೆಡ್ಡಿ, ಕಂದಾಯ ಅಧಿಕಾರಿ ನಾರಾಯಣಸ್ವಾಮಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೆಂಕಟೇಶ್, ಜೆಡಿಎಸ್ ಮುಖಂಡ ಎಂ.ಆರ್. ಸುರೇಶ್, ಚನ್ನದಾಸರ್ ಸಮುದಾಯದ ಮುಖಂಡ ವಕೀಲ ಓಬ್ಬಟ್ಟಿ ನಾಗರಾಜ್, ಚನ್ನದಾಸರ್ ತಾಲೂಕು ಸಂಘದ ಅಧ್ಯಕ್ಷ ಪ್ರಕಾಶ್, ಉಪಾಧ್ಯಕ್ಷ ರಮೇಶ್, ನಾಗರಾಜ್, ನಾರಾಯಣಸ್ವಾಮಿ, ಮುನಿಯಪ್ಪ, ಲಕ್ಷ್ಮೀನಾರಾಯಣ್, ತ್ಯಾಗರಾಜ್, ಸತೀಶ್, ವೆಂಕಟಾಚಲ, ಶಿವಾನಂದ್, ಮುನಿಸ್ವಾಮಿ, ರಾಘವೇಂದ್ರ, ಬಾಲಕೃಷ್ಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.