ಕೋಲಾರ | ಸಮಾಜ ಕಲ್ಯಾಣ ಇಲಾಖೆಯ ಶ್ರೀನಿವಾಸನ್ ನಿಯೋಜನೆ ರದ್ದು ದಲಿತ ಸಂಘಟನೆಗಳ ಸಂಯುಕ್ತರಂಗದ ಹೋರಾಟಕ್ಕೆ ಸಂದ ಜಯ

Date:

ದಲಿತ ವಿರೋಧಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಶ್ರೀನಿವಾಸನ್ ಅವರ ನಿಯೋಜನೆಯನ್ನು ರದ್ದು ಮಾಡಿದ್ದು ದಲಿತ ಸಂಘಟನೆಗಳ ಸಂಯುಕ್ತ ರಂಗದ ಹೋರಾಟಕ್ಕೆ ಸಂದ ಜಯವಾಗಿದೆ ಎಂದು ಮಂಗಳವಾರ ನಗರದ ನಚಿಕೇತನ ನಿಲಯದಲ್ಲಿ ಸಂಘಟನೆಯ ಮುಖಂಡರು ಹರ್ಷ ವ್ಯಕ್ತಪಡಿಸಿ ಶ್ರೀನಿವಾಸನ್ ವಿರುದ್ದದ ಇಲಾಖೆಯಲ್ಲಿನ ಭ್ರಷ್ಟಾಚಾರವನ್ನು ಕೂಡಲೇ ಉನ್ನತ ಮಟ್ಟದ ಅಧಿಕಾರಿಗಳಿಂದ ತನಿಖೆ ನಡೆಸುವಂತೆ ಒತ್ತಾಯಿಸಿದರು.

- Advertisement -

ಈ ಸಂದರ್ಭದಲ್ಲಿ ದಮನಿತರ ಸೇವಾ ಸಮಿತಿಯ ರಾಜ್ಯ ಅಧ್ಯಕ್ಷ ಮೇಡಿಹಾಳ ಮುನಿಅಂಜಿನಪ್ಪ ಮಾತನಾಡಿ ಜಾಗೃತಿ ಸಮಿತಿಯ ನಿಯಮಗಳನ್ನು ಉಲ್ಲಂಘಿಸಿ ಕಾನೂನು ಬಾಹಿರವಾಗಿ ಆಯ್ಕೆ ಮಾಡಿದ ದಲಿತ ವಿರೋಧಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಶ್ರೀನಿವಾಸನ್ ಅವರ ನಿಯೋಜನೆ ರದ್ದು ಮಾಡಿದ್ದು ಜಿಲ್ಲೆಯ ದಲಿತ ಸಂಘಟನೆಗಳ ಶಕ್ತಿಗೆ ಸಂದ ಜಯವಾಗಿದೆ ಇಲಾಖೆಗೆ ಹೊಸದಾಗಿ ನೇಮಕವಾಗಿರುವ ನೂತನ ಅಧಿಕಾರಿ ಜವಾಬ್ದಾರಿ ತೆಗೆದುಕೊಳ್ಳಬಾರದು ಎಂದು ಕೆಲವರು ಬೆದರಿಕೆ, ಧಮ್ಕಿ ಹಾಕಿದ್ದು ಅಂತರವನ್ನು ಪತ್ತೆ ಹಚ್ಚಿ ಅವರ ವಿರುದ್ದ ಕಾನೂ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಳಗಾವಿ | ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಕಬ್ಬು ಬೆಂಕಿಗಾಹುತಿ:...

ಬರಗಾಲದಿಂದ ಬೆಳೆ ನಷ್ಟ ಅನುಭವಿಸಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಇದೀಗ ವಿದ್ಯುತ್‌ ಶಾರ್ಟ್ ಸರ್ಕ್ಯೂಟ್ ಮತ್ತೊಂದು ಹೊಡೆತ ನೀಡಿದೆ. ವರ್ಷವಿಡೀ ಕಷ್ಟಪಟ್ಟು ಬೆಳೆಸಿದ ಕಬ್ಬು ಕಟಾವಿಗೆ ಬರುವ ಹೊತ್ತಿನಲ್ಲಿ ಬೆಂಕಿಗೆ ಆಹುತಿಯಾಗಿದ್ದು,...

ಹಾವೇರಿ | ಡಿಜಿಟಲ್ ಜನನ ಪ್ರಮಾಣ ಪತ್ರ ಗೊಂದಲ:...

ಹಳೆ ಮಾದರಿಯ ಕೈಬರಹ ಜನನ ಪ್ರಮಾನ ಪತ್ರದ ವಿಧಾನವನ್ನು ಬಿಟ್ಟು, ಡಿಜಿಟಲ್ ಜನನ ಪ್ರಮಾಣ ಪತ್ರ ನಿಯಮ ಜಾರಿಗೊಳಿಸಿದ್ದರಿಂದ ಹಲವು ಸಮಸ್ಯೆಗಳು ಎದುರಾಗಿದ್ದು, ಹದಿನಾರು ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಆಧಾರ್ ಕಾರ್ಡ್ ತಿದ್ದುಪಡಿ...

ವಲಸೆ ಹಳ್ಳಿಗರಿಗೆ ಮಾತ್ರವೇ? ಉದ್ಯೋಗಕ್ಕಾಗಿ ನಗರ ಸೇರುವ ಯುವಜನರೂ...

ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ. ಹೆಚ್ಚುತ್ತಿರುವ ಜನಸಂಖ್ಯೆಯೊಂದಿಗೆ ಆಹಾರ, ಶಿಕ್ಷಣ, ಆರೋಗ್ಯ, ವಸತಿ ಮತ್ತು ಉದ್ಯೋಗದ ಬೇಡಿಕೆಯೂ ಹೆಚ್ಚುತ್ತಿದೆ. ದೇಶದ ಅಭಿವೃದ್ಧಿಗೆ ಮಾನವ ಸಂಪನ್ಮೂಲವೇ ದೊಡ್ಡ ಶಕ್ತಿಯಾಗಿದ್ದರೂ, ಆ...

ದಲಿತರ ಬಗ್ಗೆ ಕಾಳಜಿ, ಗೌರವ ಇಲ್ಲದ ಶ್ರೀನಿವಾಸನ್ ನಿಯೋಜನೆ ರದ್ದು ಮಾಡಿದ ಅಧಿಕಾರಿಗಳಿಗೆ ಹಾಗೂ ಸರ್ಕಾರಕ್ಕೆ ಧನ್ಯವಾದಗಳು, ತೋಟಗಾರಿಕೆ ಇಲಾಖೆಯಿಂದ ಪ್ರಭಾರಿಯಾಗಿ ಸಮಾಜ ಕಲ್ಯಾಣ ಇಲಾಖೆಗೆ ನಿಯೋಜನೆಯಾಗಿ ಬಂದಾಗಿನಿಂದ ದಲಿತರ ಕುಂದುಕೊರತೆಗಳನ್ನು ನಿವಾರಿಸಲಿಲ್ಲ ರಾಜಕೀಯ ಪಕ್ಷಗಳ ಏಜೆಂಟ್ ರೀತಿಯಲ್ಲಿ ಕೆಲಸ ಮಾಡಿದ್ದಾರೆ ಅವರು ಯಾವತ್ತೂ ದಲಿತರ ಪರವಾಗಿ ಇರಲಿಲ್ಲ ಜಾಗೃತಿ ಸಮಿತಿ ಆಯ್ಕೆಯ ನಿಯಮಗಳನ್ನು ಉಲ್ಲಂಘನೆ ಮಾಡಿ ಆಯ್ಕೆ ಮಾಡಿದ ಅಧಿಕಾರಿಯಿಂದ ದಲಿತರ ಅಭಿವೃದ್ಧಿ ಸಾಧ್ಯವಿಲ್ಲ ಎಂದರು.

ಈ ಸಂದರ್ಭದಲ್ಲಿ ದಲಿತ ಸಂಘಟನೆಗಳ ಸಂಯುಕ್ತ ರಂಗದ ಅಧ್ಯಕ್ಷ ಡಿಪಿಎಸ್ ಮುನಿರಾಜು ಮಾತನಾಡಿ ದಲಿತ ವಿರೋಧಿಯನ್ನು ಸಮಾಜ ಕಲ್ಯಾಣ ಇಲಾಖೆಗೆ ನೇಮಕ ಮಾಡಿದ್ದೇ ದೊಡ್ಡ ತಪ್ಪು, ದಲಿತರ ಬಗ್ಗೆ ಕಾಳಜಿ ಇರುವ ನಿಷ್ಠಾವಂತ ಅಧಿಕಾರಿಯನ್ನು ನೇಮಕ ಮಾಡುವಂತೆ ಸಂಘಟನೆಯ ಬೇಡಿಕೆಯಾಗಿತ್ತು ಜಿಲ್ಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯು ದಲಿತರ ಅಭಿವೃದ್ಧಿಗೆ ಇರುವ ಪ್ರಮುಖ ಇಲಾಖೆಯಾಗಿದ್ದು ಪ್ರಭಾರಿ ಅಧಿಕಾರಿಯನ್ನು ನೇಮಕ ಮಾಡುವುದನ್ನು ಬಿಟ್ಟು ಪೂರ್ಣಪ್ರಮಾಣದ ಅಧಿಕಾರಿಯನ್ನು ನೇಮಕ ಮಾಡಿ ದಲಿತರಿಗೆ ನಿತ್ಯ ಸಿಗುವಂತೆ ಮಾಡಬೇಕು ಎಂದು ಒತ್ತಾಯಿಸಿದರು.

ಇದನ್ನು ಓದಿದ್ದೀರಾ..? ಕೋಲಾರ | ಎಸ್ಐಆರ್ ನೋಂದಣಿಗೆ ಸಮಯಾವಕಾಶ ನೀಡುವಂತೆ ಡಿಸಿಗೆ ಜನಪರ ಸಂಘಟನೆಗಳ ಒತ್ತಾಯ

ಈ ಸಂದರ್ಭದಲ್ಲಿ ದಲಿತ ಸಂಘಟನೆಗಳ ಮುಖಂಡರಾದ ದಲಿತ್ ನಾರಾಯಣಸ್ವಾಮಿ, ಗಾಂಧಿನಗರ ರಾಜಕುಮಾರ್, ಮೋಚಿಪಾಳ್ಳ ನಾಗೇಶ್, ಅಂಬೇಡ್ಕರ್ ನಗರ ಮಂಜುನಾಥ್, ಮತ್ತಿಕುಂಟೆ ಕೃಷ್ಣ, ಚೇತನ್ ಬಾಬು, ನರಸಾಪುರ ಎಸ್ ನಾರಾಯಣಸ್ವಾಮಿ, ಹರಳಕುಂಟೆ ರಾಜು, ಮಹಿಳಾ ಘಟಕದ ಗಿರಿಜಾ, ಗಂಗಮ್ಮನಪಾಳ್ಯ ಚಂದ್ರು, ಮುಂತಾದವರು ಇದ್ದರು.

eedina
ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ರೈತರ ಸಮಸ್ಯೆಗಳಿಗೆ ಸ್ಪಂದಿಸಿ, ಕೂಡಲೇ ಸಾಲಮನ್ನಾ ಮಾಡಿ: ನರಸಿಂಗ್‌ರಾವ್‌ ಸರರ್ಕಿಲ್‌ ಆಗ್ರಹ

ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಬಡ ಜನರಿಗೆ ಸುಳ್ಳು ಭರವಸೆಗಳನ್ನು ನೀಡುತ್ತಾ...

ಕೋಲಾರ | ಜಾನಪದ ಗಾಯಕ ಗೋ.ನಾ. ಸ್ವಾಮಿಗೆ ಕಲಾದರ್ಪಣ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ

ಜಿಲ್ಲೆಯ ಸುಗಟೂರು ಗ್ರಾಮದ ಅಂತರರಾಷ್ಟ್ರೀಯ ಜಾನಪದ ಗಾಯಕ ಹಾಗೂ ಜಾನಪದ ಸಂರಕ್ಷಣಾ...