ಆಂಧ್ರದಿಂದ ಪ್ರತಿನಿತ್ಯ ಬೆಂಗಳೂರಿಗೆ ಬರುವ ಸಿಮೆಂಟ್ ಲಾರಿ ಡ್ರೈವರ್‌ಗಳು ನಡು ರಸ್ತೆಯಲ್ಲಿ ಸಿಮೆಂಟ್ ಕದ್ದು ಅರ್ಧ ರೇಟಿಗೆ ಮಾರಾಟ ಮಾಡುವ ದೃಶ್ಯಗಳು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ತಾಡಿಗೋಳ್ ಕ್ರಾಸ್ ಸಮೀಪದ ಹೈವೇ ರಸ್ತೆಯಲ್ಲಿ ಕಂಡುಬಂದಿವೆ.
ಆಂಧ್ರ ಪ್ರದೇಶದಿಂದ ಪ್ರತಿ ನಿತ್ಯ ನೂರಾರು ಸಿಮೆಂಟ್ ತುಂಬಿದ ಲಾರಿಗಳು ಬೆಂಗಳೂರಿಗೆ ಹೋಗುತ್ತವೆ. ಲಾರಿ ಡ್ರೈವರ್ ಗಳು ಹೈವೇ ರಸ್ತೆಯಲ್ಲಿ ಬರುವ ಕೆಲ ಅಂಗಡಿಗಳ ಜೊತೆ ಹೊಂದಾಣಿಕೆ ಮಾಡಿಕೊಂಡು ಸಿಮೆಂಟ್ ಕದ್ದು ಅರ್ಧ ರೇಟ್ ಗೆ ಮಾರಾಟ ಮಾಡಿ ಸಿಮೆಂಟ್ ಕಂಪನಿಗೆ ಟೋಪಿ ಹಾಕುತ್ತಿದ್ದಾರೆ. ವಿವಿಧ ಕಂಪನಿಗಳ ಸಿಮೆಂಟ್ ಚೀಲಕ್ಕೆ ತುಂಬಿ ಮಾರಾಟ ಮಾಡುತ್ತಿದ್ದಾರೆ ಎಂದು ಸ್ಥಳಿಯರು ಗಂಭೀರ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: ಕೋಲಾರ | ಹುತ್ತೂರು ವ್ಯಾಪ್ತಿಯಲ್ಲಿ ಅರಣ್ಯ–ಕಂದಾಯ ಜಂಟಿ ಸರ್ವೆ; ರೈತರಲ್ಲಿ ಅನುಮಾನ, ಆತಂಕ
ಈ ಕೂಡಲೇ ಇದಕ್ಕೆ ಸಂಬಂಧಪಟ್ಟವರು ಸಿಮೆಂಟ್ ಕದ್ದು ಮಾರಾಟ ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮ ಜರುಗಿಸಿ ಸಿಮೆಂಟ್ ಕದಿಯುತ್ತಿರುವ ದಂಧೆಯನ್ನು ನಿಲ್ಲಿಸಬೇಕೆಂದು ಒತ್ತಾಯಿಸಿದ್ದಾರೆ.