ಕೋಲಾರ | ಹುತ್ತೂರು ವ್ಯಾಪ್ತಿಯಲ್ಲಿ ಅರಣ್ಯ–ಕಂದಾಯ ಜಂಟಿ ಸರ್ವೆ; ರೈತರಲ್ಲಿ ಅನುಮಾನ, ಆತಂಕ

Date:

ಕೋಲಾರ ತಾಲೂಕಿನ ಹುತ್ತೂರು ಹೋಬಳಿಯ ವ್ಯಾಪ್ತಿಯಲ್ಲಿ ಅರಣ್ಯ ಮತ್ತು ಕಂದಾಯ ಇಲಾಖೆಗಳ ವತಿಯಿಂದ ಜಂಟಿ ಸರ್ವೆ ಕಾರ್ಯ ನಡೆಯುತ್ತಿದೆ. ಆದರೆ ಸರಿಯಾಗಿ ನಡೆಯುತ್ತಿದೆಯೇ ಎಂಬ ಅನುಮಾನ ಈ ಭಾಗದ ರೈತರಿಗೆ ಕಾಡುತ್ತಿದೆ ಎಂದು ರೈತ ಮುಖಂಡ ಶ್ರೀನಿವಾಸನ್ ತಿಳಿಸಿದರು.

- Advertisement -

ನಗರದ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಅರಣ್ಯ ಇಲಾಖೆಯ ಹತ್ತಿರವಿರುವ ದಾಖಲೆ ‌ಪತ್ರಗಳ ಬಗ್ಗೆಯೇ ಅನುಮಾನವಿದೆ. ಕಂದಾಯ ಇಲಾಖೆಯಲ್ಲಿ ಪುರಾವೆಗಳೇ ಇಲ್ಲ. ಆದರೆ, ರೈತರ ಬಳಿ ಸೂಕ್ತವಾದ ದಾಖಲೆಗಳು ಇದ್ದರೂ ವಿನಾಕಾರಣ ಅರಣ್ಯ ಇಲಾಖೆ, ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ತೊಂದರೆ ಕೊಡುತ್ತಿವೆ. ಹೋಬಳಿಯ ಶಿಲ್ಲಂಗೆರೆಯಿಂದ ಅಬ್ಬಣಿಯವರೆಗೆ ಮೂಲ ಅರಣ್ಯ ಎಂದು ಹೇಳುತ್ತಿದ್ದು, ಕಂದಾಯ, ಸರ್ವೆ, ಪೊಲೀಸ್ ಇಲಾಖೆ ರೈತರನ್ನು ಯಾಮಾರಿಸುತ್ತಿವೆ. ಆರ್ ಟಿಸಿಯಲ್ಲಿ ಗೋಮಾಳ‌ ಎಂದಿದೆ ಅದರಿಂದ ರೈತರಿಗೆ ತೊಂದರೆ ಕೊಟ್ಟಿದ್ದರಿಂದಾಗಿ ಅರಣ್ಯ ಇಲಾಖೆಯ ಸರಿನಾ ಸಿಕ್ಕಲಿಗರ್, ಮಹೇಶ್, ಪುಷ್ಪಲತಾ ಅವರ ಮೇಲೆ ದೌರ್ಜನ್ಯ ಕೇಸ್ ಹಾಕಿದ್ದೇವೆ. ಈ ಭಾಗದಲ್ಲಿ ಹಿಡುವಳಿ ಜಮೀನು ಇದ್ದು ಅರಣ್ಯ ಇಲಾಖೆ ನಕಲಿ ನಕ್ಷೆ ಮಾಡಿಕೊಂಡಿದ್ದಾರೆ ಮಾತು ಎತ್ತಿದರೆ ರಿಯಲ್ ಎಸ್ಟೇಟ್ ಎನ್ನುತ್ತಾರೆ ರೈತರನ್ನು ಅವಮಾನ ಮಾಡತ್ತಾರೆ” ಎಂದು ಆರೋಪಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಕತ್ತಲೆಯಿಂದ ಬೆಳಕಿನತ್ತ ಸೌಜನ್ಯ ಹೋರಾಟ: ಸುಪ್ರೀಂ ಆದೇಶದೊಂದಿಗೆ ಮೂಡಿದ...

ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣವು ಕೇವಲ ಒಂದು ಕಾನೂನು ಪ್ರಕ್ರಿಯೆಯಾಗಿ ಉಳಿಯದೆ, ಸಾರ್ವಜನಿಕ ಜಾಗೃತಿ ಮತ್ತು ನ್ಯಾಯದ ಪರವಾದ ಗಟ್ಟಿಯಾದ ಧ್ವನಿಯಾಗಿ ಮಾರ್ಪಟ್ಟಿದೆ. ಸುಪ್ರೀಂ ಕೋರ್ಟ್‌ನ ಈ ಹೊಸ ಆದೇಶವು ಸೌಜನ್ಯ ಕುಟುಂಬಕ್ಕೆ...

ವಿಜಯಪುರ | ಮಳೆ ಕೊರತೆಯಿಂದ ಮೇವಿಗೂ ಬರ: ಜಾನುವಾರು...

ಹಸಿರು ಮೇವು ಕಡಿಮೆಯಾಗಿ, ಸಂಗ್ರಹಿತ ಒಣಮೇವು ಖಾಲಿಯಾಗುತ್ತಿರುವುದರಿಂದ ಹೈನುಗಾರಿಕೆ ಮತ್ತು ಕುರಿ-ಮೇಕೆ ಸಾಕಾಣಿಕೆ ಅವಲಂಬಿತ ಕುಟುಂಬಗಳ ಆದಾಯಕ್ಕೆ ಹೊಡೆತ ಬೀಳುವ ಭೀತಿ ಎದುರಾಗಿದೆ. ಬೋರ್‌ವೆಲ್‌ಗಳಲ್ಲಿನ ನೀರಿನ ಮಟ್ಟ ಕುಸಿತ ಮತ್ತು ಹೊರ ಜಿಲ್ಲೆ/ರಾಜ್ಯಗಳಿಂದ...

ತುಳುವಿಗೆ ಅಧಿಕೃತ ಮಾನ್ಯತೆ | ಭಾಷಾ ಬೆಳವಣಿಗೆಗೆ ಇಷ್ಟೇ...

ತುಳು ಭಾಷೆಗೆ ಸಿಗುವ ಹೊಸ ಸ್ಥಾನಮಾನ ಭಾಷಾ ಹೋರಾಟದ ಅಂತಿಮ ಗುರಿಯಾಗಬಾರದು. ಬದಲಾಗಿ ಅದೊಂದು ಹೊಸ ಅಧ್ಯಾಯದ ಆರಂಭವಾಗಬೇಕು. ಸರ್ಕಾರಿ ಯೋಜನೆಗಳು, ಶೈಕ್ಷಣಿಕ ಪೋಷಣೆ ಮತ್ತು ಸ್ಥಳೀಯ ಆರ್ಥಿಕತೆಯ ಬೆಂಬಲ ಸಿಕ್ಕಾಗ ಮಾತ್ರವೇ...

ಇದನ್ನೂ ಓದಿ: ಕೋಲಾರ | ಹೈನುಗಾರಿಕೆ ಗ್ರಾಮೀಣ ಜನರ ಬದುಕಿಗೆ ಆಸರೆ: ಚೆಲುವನಹಳ್ಳಿ ನಾಗರಾಜ್

ಅರಣ್ಯ ಇಲಾಖೆಯ 1931ರ ನೋಟಿಫಿಕೇಷನ್ ದಾಖಲೆ ಸರಿ ಇಲ್ಲ. ಇದು ನಕಲಿ ಎಂಬ ಅನುಮಾನ ಇದೆ. ಈ ಬಗ್ಗೆ ತನಿಖೆ ‌ನಡೆಸಬೇಕು. ರೈತರ ಮೇಲೆ ದಬ್ಬಾಳಿಕೆ ‌ಮಾಡಬಾರದು. ಅರಣ್ಯ ಇಲಾಖೆ‌ ಜಾಗಕ್ಕೆ ನಂಬರ್ ಕೊಟ್ಟು ದುರಸ್ತಿ ಮಾಡಬೇಕು ಜಂಟಿ ಸರ್ವೆಯಲ್ಲಿ ಮೊದಲು ಅರಣ್ಯ ಜಮೀನು ಎಷ್ಟಿದೆ ಎಂಬುದನ್ನು ಸ್ಕೆಚ್‌ ಮಾಡಿ, ನಂಬರ್ ಕೊಟ್ಟು ದುರಸ್ತಿ ಮಾಡಬೇಕು” ಎಂದು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ರೈತರಾದ ಹರಟಿ ಪ್ರಕಾಶ್, ಶಿಲ್ಲಂಗೆರೆ ಮಂಜುನಾಥ್, ಅರವಿಂದ್, ವೆಂಕಟರಣಪ್ಪ ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು | ರೇಬೀಸ್ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಅಗತ್ಯ ಡಾ.ಗುರುಶಾಂತಪ್ಪ 

ರೇಬೀಸ್ ಖಾಯಿಲೆ ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಕಾಣಸಿಗುವಂತಹದ್ದು. ಜಗತ್ತಿನಲ್ಲಿ ಸುಮಾರು 60,000...

ಚಿಕ್ಕಮಗಳೂರು | ಶಿಕ್ಷಣದೊಂದಿಗೆ ಸಂಸ್ಕಾರವನ್ನು ಮೈಗೂಡಿಸಿಕೊಳ್ಳಿ; ಡಾ.ಭೀಮೇಶ್ವರ ಜೋಷಿ

ಕಳಸ ತಾಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ...

ಚಿಕ್ಕಮಗಳೂರು | ಕುಡಿತ ಚಟ: ಹೆತ್ತ ತಂದೆಯನ್ನೇ ಹತ್ಯೆಗೈದ ಮಗ 

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ತರೀಕೆರೆ ತಾಲೂಕಿನ ವಡ್ಡರದಿಬ್ಬ ಗ್ರಾಮದಲ್ಲಿ ಕುಡಿತದ...