ಕೋಲಾರ | ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಗೆ ಅಗತ್ಯ ದಾಖಲೆಗಳನ್ನು ರಾಜ್ಯ ಸರಕಾರ ಜನತೆಗೆ ಒದಗಿಸುವಂತೆ ಸಿಪಿಐಎಂ ಆಗ್ರಹ

Date:

ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯು ಪಶ್ಚಿಮ ಬಂಗಾಳದಂತೆ ಆಗದಿರಲು ರಾಜ್ಯ ಕಾಂಗ್ರೆಸ್‌ ಸರಕಾರವು ಪ್ರತಿಯೊಬ್ಬರಿಗೂ ಪರಿಷ್ಕರಣೆಗೆ ಅಗತ್ಯವಿರುವ ದಾಖಲಾತಿಗಳನ್ನು ತುರ್ತಾಗಿ ಒದಗಿಸಲು ಮುಂದಾಗಬೇಕೆಂದು ಸಿಪಿಐಎಂ ರಾಜ್ಯ ಕಾರ್ಯದರ್ಶಿ ಡಾ.ಕೆ.ಪ್ರಕಾಶ್‌ ಆಗ್ರಹಿಸಿದರು.

- Advertisement -

ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಎಸ್‌ ಐ ಆರ್‌ ಸಾಧಕ ಬಾಧಕಗಳ ಕುರಿತಂತೆ ಏರ್ಪಡಿಸಿದ್ದ ದುಂಡು ಮೇಜಿನ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

137 ಜೀವ ರಕ್ಷಕ ಕ್ಯಾನ್ಸರ್ ಔಷಧಗಳ ದರ ಶೇ.70ರಷ್ಟು...

ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ವೆಚ್ಚದಿಂದ ಕಂಗೆಟ್ಟಿರುವ ರೋಗಿಗಳಿಗೆ ಕೇಂದ್ರ ಸರ್ಕಾರದಿಂದ ಕೊಂಚ ನಿರಾಳತೆಯ ಸುದ್ದಿಯೊಂದಿದೆ! 137 ಜೀವರಕ್ಷಕ ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯಿದ್ದು, ಕೆಲವು ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ ಶೇ.70ರವರೆಗೆ...

‘ದೇಶ್ ಕೋ ಬಿಕನೇ ನಹೀ ದೂಂಗಾ’ ಎಂದು ನವಮಂಗಳೂರು...

​ರೈಲ್ವೆ, ವಿಮಾನ ನಿಲ್ದಾಣ, ಟೆಲಿಕಾಂ ಸೇರಿದಂತೆ ದೇಶದ ಪ್ರಮುಖ ಜಯಶೀಲ ಸಾರ್ವಜನಿಕ ವಲಯಗಳನ್ನು ಈಗಾಗಲೇ ಆಯ್ದ ಕಾರ್ಪೊರೇಟ್ ಕುಳಗಳಿಗೆ ಒಪ್ಪಿಸಿರುವ ಮೋದಿ ಸರ್ಕಾರ, ಈಗ ತನ್ನ ದೃಷ್ಟಿಯನ್ನು ಕಡಲತೀರಗಳತ್ತ ಹರಿಸಿದೆ. ದೇಶದ ಆಮದು-ರಫ್ತು...

SIRನ ಒಳನೋಟ: ಸೇರ್ಪಡೆಗಿಂತ ಹೊರಗಿಡುವುದಕ್ಕೆ ಆದ್ಯತೆ ನೀಡಿದಾಗ ಏನಾಗುತ್ತದೆ?

SIR ಕರಡು ಪಟ್ಟಿಯಲ್ಲಿರುವ ಮತದಾರರ ಸಂಖ್ಯೆಯು ನೈಜ ವಯಸ್ಕ ಜನಸಂಖ್ಯೆಯ ಅಂದಾಜಿಗಿಂತ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕಡಿಮೆಯಾಗಿರುವುದಕ್ಕೆ ಕಾರಣವೇನು? ಈ ಕಾಣೆಯಾದ ಮತದಾರರೆಲ್ಲ ಯಾರು? ಅವರು ಮತದಾರರ ಪಟ್ಟಿಯಲ್ಲಿ ಬಿಟ್ಟು ಹೋಗಿದ್ದು ಹೇಗೆ?...

ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಯಲ್ಲಿ ಯಾವುದೇ ಅರ್ಹ ಮತದಾರರು ಮತದಾರರ ಪಟ್ಟಿಯಿಂದ ಕೈಬಿಟ್ಟು ಹೋಗದಂತೆ ಮಾಡಲು ಪರಿಷ್ಕರಣೆಗೆ ಅಗತ್ಯವಿರುವ ಜನನ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ ಹಾಗೂ ವಂಶವೃಕ್ಷ ಪ್ರಮಾಣ ಪತ್ರ ದಾಖಲೆಗಳನ್ನು ಚುನಾವಣಾ ಮಾದರಿಯಲ್ಲಿ ಅರ್ಜಿ ಸಲ್ಲಿಸಿದ ದಿನವೇ ಜನತೆಗೆ ಸಿಗುವಂತೆ ರಾಜ್ಯ ಕಾಂಗ್ರೆಸ್‌ ಸರಕಾರ ಕ್ರಮಕೈಗೊಳ್ಳಬೇಕೆಂದು ಅವರು ಸಲಹೆ ನೀಡಿದರು.

ಇಲ್ಲವಾದಲ್ಲಿ ಪಶ್ಚಿಮ ಬಂಗಾಳದಂತೆ 91 ಲಕ್ಷಕ್ಕೂ ಅಧಿಕ ಮತದಾದರು ಪಟ್ಟಿಯಿಂದ ಹೊರ ಹೋಗುವ ಸಾಧ್ಯತೆ ಇದೆ, ರಾಜ್ಯದಲ್ಲಿ ಈವರೆವಿಗೂ ನಡೆದಿರುವ ಮ್ಯಾಪಿಂಗ್‌ ಮ್ಯಾಚಿಂಗ್‌ ಪ್ರಕ್ರಿಯೆಯಲ್ಲಿ ಶೇ.10 ರಷ್ಟು ಹೆಸರುಗಳು ಹೊಂದಾಣಿಕೆಯಾಗಿಲ್ಲ ಎನ್ನುವುದನ್ನು ರಾಜ್ಯ ಸರಕಾರವು ಗಂಭೀರವಾಗಿ ಪರಿಗಣಿಸಬೇಕಾಗಿದೆ ಎಂದು ಹೇಳಿದರು.

ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಗೆ ಯಾರದೂ ವಿರೋಧ ಇಲ್ಲ, ಆದರೆ, ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಯ ತಾರ್ಕಿಕ ವ್ಯತ್ಯಾಸಗಳನ್ನು ಆಧಾರವಾಗಿಟ್ಟುಕೊಂಡು 91 ಲಕ್ಷ ಮಂದಿಯನ್ನು ಹೊರಗಿಡಲಾಗಿದೆ, ಈ ಪೈಕಿ ವಲಸಿಗರು ಎಷ್ಟು ಮಂದಿ ಎಂಬ ಅಂಕಿ ಅಂಶವನ್ನು ಬಹಿರಂಗಪಡಿಸುತ್ತಿಲ್ಲ, ಈಗ ಕರ್ನಾಟಕದಲ್ಲಿಯೂ ಇಂತದ್ದೇ ಪ್ರಕ್ರಿಯೆಯಲ್ಲಿ ಪರಿಷ್ಕರಣೆ ನಡೆಯುತ್ತಿರುವುದನ್ನು ಸರಕಾರ ಮತ್ತು ಜನತೆ ಗಂಭೀರವಾಗಿ ಪರಿಗಣಿಸಬೇಕಾಗಿದೆ ಎಂದು ಹೇಳಿದರು.

ಮ್ಯಾಪಿಂಗ್‌ ಹಾಗೂ ಮ್ಯಾಚಿಂಗ್‌ ಆಗಿರುವ ಹೆಸರುಗಳ ಪೈಕಿಯು ತಂದೆ ತಾಯಿ ಹೆಸರು ಇನ್ಷಿಯಲ್‌ ಹೊಂದಾಣಿಕೆಯಾಗದಿರುವುದು, 45 ವರ್ಷ ಮೇಲ್ಪಟ್ಟವರು ಮತದಾರರ ಪಟ್ಟಿಗೆ ಸೇರ್ಪಡೆಯಾಗುವಂತೆ ಅರ್ಜಿ ಸಲ್ಲಿಸಿದರೆ ಪರಿಗಣಿಸದಿರುವುದು, ಆರನೇ ಮಗ ಮಗಳಾಗಿದ್ದರೆ ಪರಿಗಣೆಗೆ ಬಾರದಿರುವುದು, ಪೋಷಕರಿಗೂ ಮಕ್ಕಳ ನಡುವೆ 15 ವರ್ಷಕ್ಕಿಂತ ಕಡಿಮೆ ಅಂತರ ಇರುವುದನ್ನು ತಾರ್ಕಿಕ ವ್ಯತ್ಯಾಸಗಳೆಂದು ಗುರುತಿಸಲಾಗುತ್ತಿದೆ ಎಂದು ಅವರು ವಿವರಿಸಿದರು.

ಕೇಂದ್ರ ಬಿಜೆಪಿ ಸರಕಾರವು ಹಾಗೂ ಚುನಾವಣಾ ಆಯೋಗವು ನಿರ್ದಿಷ್ಟ ಸಮುದಾಯ ಹಾಗೂ ವ್ಯಕ್ತಿಗಳನ್ನು ಗುರಿಯಾಗಿಟ್ಟುಕೊಂಡು ನಡೆಸುತ್ತಿರುವ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಯಿಂದಾಗಿ ದೇಶಾದ್ಯಂತ ಸುಮಾರು 10 ಕೋಟಿ ಮಂದಿ ಮತದಾರರ ಪಟ್ಟಿಯಿಂದ ಹೊರಗುಳಿಯುವ ಅಪಾಯವಿದೆ ಎಂದು ಎಚ್ಚರಿಸಿದ ಅವರು, ಈ ಕುರಿತು ಜನತೆ ಧ್ವನಿ ಎತ್ತಿ ಹೋರಾಟ ನಡೆಸಬೇಕಾಗಿದೆ ಎಂದರು.

ಹಿರಿಯ ಪತ್ರಕರ್ತ ಕೆ.ಎಸ್‌.ಗಣೇಶ್‌ ಮಾತನಾಡಿ, ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಯ ಲೋಪದೋಷಗಳ ವಿರುದ್ಧ ಪ್ರತಿಯೊಬ್ಬರೂ ಸಹಕರಿಸಿ ಕೈಜೋಡಿಸಿ ಧ್ವನಿ ಎತ್ತಿ ಹೋರಾಟ ರೂಪಿಸಬೇಕು, ಇಲ್ಲವಾದಲ್ಲಿ ವ್ಯಕ್ತಿಗತ ಅಸ್ತಿತ್ವಗಳ ಜೊತೆಗೆ ದೇಶದ ಮೂಲ ಸಂವಿಧಾನದ ಆಶಯವು ಅಲುಗಾಡಲಿದೆಯೆಂದು ಎಚ್ಚರಿಸಿದರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ಕಾರ್ಮಿಕ ಮುಖಂಡ ಗಾಂಧಿನಗರ ನಾರಾಯಣಸ್ವಾಮಿ ಮಾತನಾಡಿ, ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಕುರಿತಂತೆ ಸರ್ವ ಪಕ್ಷಗಳ ಸಹಕಾರ ಹಾಗೂ ಸಾರ್ವಜನಿಕರ ಹಿತಾಸಕ್ತಿಯಿಂದ ಹೋರಾಟ ರೂಪಿಸುವ ಮೊದಲ ಹಂತವಾಗಿ ಜೂ.8 ರಂದು ಸೋಮವಾರ ಜಿಲ್ಲಾಧಿಕಾರಿಗಳಿಗೆ ತಮ್ಮ ಬೇಡಿಕೆಯನ್ನು ಒತ್ತಾಯಿಸಿ ಮನವಿ ಸಲ್ಲಿಸಲಾಗುವುದು ಎಂದು ಪ್ರಕಟಿಸಿದರು.

ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎನ್‌.ಮುನಿಸ್ವಾಮಿ ಮಾತನಾಡಿ, ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯ ಮೂಲಕ ಬಿಜೆಪಿ ಸರಕಾರವು ಪ್ರಜಾಪ್ರಭುತ್ವದ ಕೊರಳಿಗೆ ಉರುಳು ಬಿಗಿದಿದೆ, ಜನತೆ ಬಿಜೆಪಿಯ ಹುನ್ನಾರಗಳನ್ನು ಅರ್ಥ ಮಾಡಿಕೊಂಡು ಎಚ್ಚೆತ್ತುಕೊಳ್ಳಬೇಕಾಗಿದೆ, ನಮ್ಮನ್ನು ನಾವು ಕಾಪಾಡಿಕೊಳ್ಳುವ ಜೊತೆಗೆ ದೇಶವನ್ನು ಕಾಪಾಡಬೇಕಿದೆ ಎಂದರು.

ಜೆಡಿಎಸ್‌ ಮುಖಂಡ ಸಿಎಂಆರ್‌ ಶ್ರೀನಾಥ್‌ ಮಾತನಾಡಿ, ಯಾವುದೇ ಅರ್ಹ ವ್ಯಕ್ತಿ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಮತ್ತು ಯಾವುದೇ ಅನರ್ಹ ವ್ಯಕ್ತಿ ಮತದಾರರ ಪಟ್ಟಿಗೆ ಸೇರ್ಪಡೆಯಾಗಬಾರದು, ಯಾರ ಹಕ್ಕುಗಳು ಮೊಟಕುಗೊಳ್ಳಬಾರದು ಎಂಬಂತೆ ಮತದಾರರ ಪಟ್ಟಿ ಪರಿಷ್ಕರಣೆ ನಡೆಯಲಿ ಎಂದರು.

ಅಲ್ಪಸಂಖ್ಯಾತ ಮುಖಂಡ ಅನ್ವರ್‌ ಪಾಷಾ ಮಾತನಾಡಿ, ಎಸ್‌. ಐ. ಆರ್‌ ಎಂದರೆ ಸ್ಪೆಷಲ್‌ ಇಂಟೆನ್ಸಿವ್‌ ಆಫ್‌ ರಿವೈಸಿಂಗ್ ವೋಟರ್ ರೋಲ್‌ ಅಲ್ಲ ಬಿಜೆಪಿ ಮತ್ತು ಚುನಾವಣಾ ಆಯೋಗವು ಇದನ್ನು ಸೆಲೆಕ್ಟಿವ್‌ ಅಂಡ್‌ ಇಂಟೆನ್ಷನಲ್‌ ರಿಮೋವಲ್‌ ಆಫ್‌ ವೋಟರ್ಸ್‌ ಫ್ರಂ ವೋಟರ್ ಲಿಸ್ಟ್‌ ಎಂಬಂತೆ ಅರ್ಥೈಸಿಕೊಂಡು ಕಾರ್ಯರೂಪಕ್ಕೆ ತರುತ್ತಿದೆ ಎಂದು ವ್ಯಾಖ್ಯಾನ ನೀಡಿದರು.

ಜನವಾದಿ ಮಹಿಳಾ ಸಂಘಟನೆಯ ಮುಖಂಡರಾದ ವಿ.ಗೀತಾ ಮಾತನಾಡಿ, ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಕುರಿತಂತೆ ಸಿಪಿಐಎಂ ಪಕ್ಷವು ಕಳೆದ ಒಂದು ತಿಂಗಳಿನಿಂದಲೂ ರಾಜ್ಯದಲ್ಲಿ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ, ಆದರೆ, ಯಾವುದೇ ರಾಜಕೀಯ ಪಕ್ಷಗಳು ಈ ಪ್ರಕ್ರಿಯೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ, ಸಿಪಿಎಂ ಪಕ್ಷವು ಜನಹಿತಕ್ಕಾಗಿ ಸದಾ ಹೋರಾಡುತ್ತಿರುತ್ತದೆ ಎಂದರು.

ಇದನ್ನು ಓದಿದ್ದೀರಾ..? ಕೋಲಾರ | ಜಮೀರ್ ನಸೀರ್ ಗೆ ಉನ್ನತ ರಾಜಕೀಯ ಸ್ಥಾನಮಾನಕ್ಕೆ ಒತ್ತಾಯಿಸಿ ಮುಸ್ಲಿಂಮರಿಂದ ಪ್ರತಿಭಟನೆ

ಕಾರ್ಯಕ್ರಮದಲ್ಲಿ ಟಿ.ವಿಜಯಕುಮಾರ್‌, ಹಾರೋಹಳ್ಳಿ ರವಿ, ಅಬ್ಬಣಿ ಶಿವಪ್ಪ, ಪಿ.ಶ್ರೀನಿವಾಸ್, ಎನ್.ಎನ್.ಶ್ರೀರಾಮ್, ಪಾತಕೋಟೆ ನವೀನ್ ಕುಮಾರ್, ವೀರಭದ್ರ, ಅಂದ್ರಹಳ್ಳಿ ಗಮನ ಮಹಿಳಾ ಸಂಘದ ಶಾಂತಮ್ಮ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಿಂದ ಮುಖಂಡರು, ಕಾರ್ಯಕರ್ತರು ಭಾಗವಹಿಸಿ ವಿಜಯಕೃಷ್ಣ ಸ್ವಾಗತಿಸಿ, ತಂಗರಾಜು ವಂದಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹುಬ್ಬಳ್ಳಿ | ಮಾಂಜಾ ದಾರಕ್ಕೆ ಮಹಿಳೆ ಬಲಿ

ಗಾಳಿಪಟದ ಮಾಂಜಾ ದಾರ ಮತ್ತೊಂದು ಜೀವವನ್ನು ಬಲಿ ಪಡೆದಿರುವ ಹೃದಯವಿರ್ಧಾವಕ  ಘಟನೆ...

ವಿಜಯಪುರ | ವಿಜಯಪುರಕ್ಕೆ 371(ಜೆ) ಮೀಸಲಾತಿ ನೀಡಲು ಆಗ್ರಹ; ಎಸ್.ಕೆ. ಬೆಳ್ಳುಬ್ಬಿ

ವಿಜಯಪುರ ಜಿಲ್ಲೆಯನ್ನು 371(ಜೆ) ಮೀಸಲಾತಿಯಿಂದ ಹೊರಗಿಟ್ಟಿರುವುದು ದೊಡ್ಡ ಅನ್ಯಾಯವಾಗಿದ್ದು, ರಾಜ್ಯ ಸರ್ಕಾರ...

ಹಾವೇರಿ | ಪಶ್ಚಿಮ ಪದವೀಧರರ ಕ್ಷೇತ್ರ ಚುನಾವಣೆ: ಕಾಂಗ್ರೆಸ್ ಬೆಂಬಲಿಸಲು ಡಿವೈಎಫ್ಐ-ಎಸ್ಎಫ್ಐ ಕರೆ

"ಅಕ್ಟೋಬರ್ 23 ರಂದು ನಡೆಯಲಿರುವ ರಾಜ್ಯ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ...

ರಾಯಚೂರು | ವಿಬಿಜಿರಾಮ್‌ಜಿ ಯೋಜನೆಯಡಿ ಕೂಲಿಕಾರ್ಮಿಕರಿಗೆ ಕಡಿಮೆ ಕೂಲಿ ಪಾವತಿ ಆರೋಪ: ತಾಂತ್ರಿಕ ಅಧಿಕಾರಿಗಳ ಅಮಾನತಿಗೆ ಆಗ್ರಹ

ರಾಯಚೂರು ತಾಲೂಕಿನ ಬಿಜನಗೇರಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿಬಿಜಿರಾಮ್‌ಜಿ ಯೋಜನೆಯಡಿ ಕೆಲಸ...