ಗುಬ್ಬಿ | ವಿಶ್ವ ಪರಿಸರ ದಿನಾಚರಣೆ ಆಚರಿಸಿದ ಬಿಜೆಪಿ ಯುವಮೋರ್ಚಾ

Date:

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಬಿಜೆಪಿ ತಾಲ್ಲೂಕು ಘಟಕ ಹಾಗೂ ಯುವ ಮೋರ್ಚಾ ಸಹಕಾರದಲ್ಲಿ ಪಟ್ಟಣದ ತೊರೆಮಠದ ಆವರಣದಲ್ಲಿ ಸಸಿ ನೆಡುವ ಮೂಲಕ ಪರಿಸರ ದಿನಾಚರಣೆ ನಡೆಸಲಾಯಿತು.

- Advertisement -

ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಶಶಿಕಿರಣ್ ಮಾತನಾಡಿ ಹಸಿರು ಉಸಿರು ಎಂಬ ಘೋಷಣೆ ಪ್ರಸ್ತುತ ದಿನಮಾನದಲ್ಲಿ ಅನುಷ್ಠಾನಕ್ಕೆ ಬರಬೇಕಿದೆ. ಅರಣ್ಯ ಸಂಪತ್ತು ಈಗಾಗಲೇ ಕ್ಷೀಣಿಸಿ ಜಾಗತಿಕ ಉಷ್ಣತೆ ಹೆಚ್ಚಾಗಿದೆ. ಪರಿಸರದ ಮೇಲೆ ಬೀರುತ್ತಿರುವ ದುಷ್ಪರಿಣಾಮ ಮನುಷ್ಯ ಕುಲಕ್ಕೆ ಮಾರಕ ಆಗಲಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಪ್ರಜೆ ಎರಡು ಗಿಡ ನೆಟ್ಟು ಪೋಷಿಸಿದರೆ ಹಸಿರು ಕ್ರಾಂತಿಗೆ ಮುನ್ನುಡಿ ಬರೆಯಬಹುದು ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

137 ಜೀವ ರಕ್ಷಕ ಕ್ಯಾನ್ಸರ್ ಔಷಧಗಳ ದರ ಶೇ.70ರಷ್ಟು...

ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ವೆಚ್ಚದಿಂದ ಕಂಗೆಟ್ಟಿರುವ ರೋಗಿಗಳಿಗೆ ಕೇಂದ್ರ ಸರ್ಕಾರದಿಂದ ಕೊಂಚ ನಿರಾಳತೆಯ ಸುದ್ದಿಯೊಂದಿದೆ! 137 ಜೀವರಕ್ಷಕ ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯಿದ್ದು, ಕೆಲವು ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ ಶೇ.70ರವರೆಗೆ...

‘ದೇಶ್ ಕೋ ಬಿಕನೇ ನಹೀ ದೂಂಗಾ’ ಎಂದು ನವಮಂಗಳೂರು...

​ರೈಲ್ವೆ, ವಿಮಾನ ನಿಲ್ದಾಣ, ಟೆಲಿಕಾಂ ಸೇರಿದಂತೆ ದೇಶದ ಪ್ರಮುಖ ಜಯಶೀಲ ಸಾರ್ವಜನಿಕ ವಲಯಗಳನ್ನು ಈಗಾಗಲೇ ಆಯ್ದ ಕಾರ್ಪೊರೇಟ್ ಕುಳಗಳಿಗೆ ಒಪ್ಪಿಸಿರುವ ಮೋದಿ ಸರ್ಕಾರ, ಈಗ ತನ್ನ ದೃಷ್ಟಿಯನ್ನು ಕಡಲತೀರಗಳತ್ತ ಹರಿಸಿದೆ. ದೇಶದ ಆಮದು-ರಫ್ತು...

SIRನ ಒಳನೋಟ: ಸೇರ್ಪಡೆಗಿಂತ ಹೊರಗಿಡುವುದಕ್ಕೆ ಆದ್ಯತೆ ನೀಡಿದಾಗ ಏನಾಗುತ್ತದೆ?

SIR ಕರಡು ಪಟ್ಟಿಯಲ್ಲಿರುವ ಮತದಾರರ ಸಂಖ್ಯೆಯು ನೈಜ ವಯಸ್ಕ ಜನಸಂಖ್ಯೆಯ ಅಂದಾಜಿಗಿಂತ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕಡಿಮೆಯಾಗಿರುವುದಕ್ಕೆ ಕಾರಣವೇನು? ಈ ಕಾಣೆಯಾದ ಮತದಾರರೆಲ್ಲ ಯಾರು? ಅವರು ಮತದಾರರ ಪಟ್ಟಿಯಲ್ಲಿ ಬಿಟ್ಟು ಹೋಗಿದ್ದು ಹೇಗೆ?...

ತೊರೆ ಮಠಾಧ್ಯಕ್ಷ ಶ್ರೀ ಅಟವಿ ಚನ್ನಬಸವ ಸ್ವಾಮೀಜಿ ಮಾತನಾಡಿ ಕೈಗಾರಿಕಾ ಕ್ರಾಂತಿ ನಂತರದಲ್ಲಿ ಕೃಷಿ ಚಟುವಟಿಕೆ ಕೂಡಾ ಮಂಕಾಗಿದೆ. ಅರಣ್ಯ ಸಂಪತ್ತು ಲೂಟಿ ಮಾಡಿದ ಹಿನ್ನಲೆ ವನ್ಯ ಜೀವಿಗಳು ನಾಡಿನತ್ತ ಬರುತ್ತಿವೆ. ಮನುಕುಲ ಸ್ವಾರ್ಥ ಸಾಧನೆಗಾಗಿ ನಿರಂತರ ಅತ್ಯಾಚಾರ ಪರಿಸರದ ಮೇಲೆ ಮಾಡುತ್ತಿದ್ದಾನೆ. ಇದರ ಫಲ ಮಾರಕ ರೋಗಗಳ ಸರಮಾಲೆ ಮನುಷ್ಯನ ಜೀವ ಪಡೆಯುತ್ತಿವೆ. ಕರೋನಾ, ಡೆಂಗ್ಯೂ, ಹಂದಿ ಜ್ವರ ಹೀಗೆ ಅನೇಕ ವೈರಸ್ ನಮ್ಮಗಳ ಮಧ್ಯೆ ಕಾಣಿಸಿಕೊಂಡಿರುವುದು ಪರಿಸರ ನಾಶದಿಂದ ಎಂಬ ಸತ್ಯ ಅರಿತು ಪ್ರತಿಯೊಬ್ಬರೂ ಗಿಡಗಳನ್ನು ನೆಟ್ಟು ಪೋಷಿಸಬೇಕು ಎಂದು ಕರೆ ನೀಡಿದರು.

ಬಿಜೆಪಿ ತಾಲ್ಲೂಕು ಅಧ್ಯಕ್ಷ ಬಲರಾಮಯ್ಯ ಮಾತನಾಡಿ ಹದಗೆಟ್ಟ ವಾತಾವರಣ ಜೊತೆಗೆ ವಾಯುಮಾಲಿನ್ಯ, ಜಲಮಾಲಿನ್ಯ ನಮ್ಮ ಪರಿಸರ ನಾಶಕ್ಕೆ ಮೂಲವಾಗಿದೆ. ಹಸಿರು ಮರಗಳ ಮಾರಣಹೋಮ ಮಾಡುವವರ ಮಧ್ಯೆ ಪರಿಸರ ಕಾಪಾಡುವ ಪ್ರತಿಜ್ಞೆ ಎಲ್ಲರೂ ಮಾಡಬೇಕಿದೆ. ನಮ್ಮ ಗ್ರಾಮ, ಊರು ಮೊದಲು ಸ್ವಚ್ಛವಾಗಿಟ್ಟು ದಾರಿ ಬದಿ, ಸರ್ಕಾರಿ ಜಾಗಗಳು, ಉದ್ಯಾನವನ, ದೇವಸ್ಥಾನ ಆವರಣ ಹೀಗೆ ಅನೇಕ ಸ್ಥಳದಲ್ಲಿ ಗಿಡಗಳನ್ನು ನೆಟ್ಟು ಪೋಷಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪಂಚಾಕ್ಷರಿ, ಓಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಗಂಗಣ್ಣ, ಜಿಪಂ ಮಾಜಿ ಸದಸ್ಯ ಪಿ.ಬಿ.ಚಂದ್ರಶೇಖರಬಾಬು, ಎಚ್.ಟಿ.ಭೈರಪ್ಪ, ಎಸ್.ನಂಜೇಗೌಡ, ಎಚ್.ಎಲ್.ಬಸವರಾಜು, ಬಿಜೆಪಿ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ವಿದ್ಯಾಸಾಗರ, ಯುವಮೋರ್ಚಾ ತಾಲ್ಲೂಕು ಅಧ್ಯಕ್ಷ ವಿಶ್ವನಾಥ ಸೇರಿದಂತೆ ಬಿಜೆಪಿ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗುಬ್ಬಿ | ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ರದ್ದತಿಗೆ ರೈತಸಂಘ ಒತ್ತಾಯ

 ಹೇಮಾವತಿ ನದಿ ತುಮಕೂರು ಜಿಲ್ಲೆಯ ರೈತರ ಬದುಕಿನ ಆಧಾರವಾಗಿದ್ದು, ಅದರ ನೀರನ್ನು...

ಗುಬ್ಬಿ ಸಮೀಪ ಚಿರತೆ ಓಡಾಟ: ಆತಂಕದಲ್ಲಿ ನಾಗರಿಕರು

ಗುಬ್ಬಿ ಪಟ್ಟಣದ ಹೊರವಲಯದ ರಾಯವಾರ ಗ್ರಾಮದ ಮನೆಯೊಂದರ ಬಳಿ ಚಿರತೆ ಓಡಾಡಿರುವ...

ಗುಬ್ಬಿ | ಚೇಳೂರು ಪ್ರಜಾಸೇವಾ ಅಭಿಯಾನದಲ್ಲಿ ವಿಕಲಚೇತನರು, ಹಿರಿಯ ನಾಗರಿಕರ ಪರದಾಟ :ಅರ್ಜಿ ನೀಡಲು ಮೆಟ್ಟಿಲು ಹತ್ತಲಾಗದೆ ವಾಪಸ್‌

 ಗ್ರಾಮೀಣ ಜನರ ಸಮಸ್ಯೆಗಳನ್ನು ಸ್ಥಳದಲ್ಲೇ ಆಲಿಸಿ, ವಿವಿಧ ಸರ್ಕಾರಿ ಸೇವೆಗಳನ್ನು ತ್ವರಿತವಾಗಿ...

ಗುಬ್ಬಿ | ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ವಲಯ ಅರಣ್ಯಾಧಿಕಾರಿ

ಗುತ್ತಿಗೆದಾರರಿಂದ ಲಂಚದ ಹಣ ಪಡೆಯುತ್ತಿದ್ದ ಆರೋಪದ ಮೇರೆಗೆ ಗುಬ್ಬಿ ವಲಯ ಅರಣ್ಯಾಧಿಕಾರಿ...