ತಂದೆಯಿಂದಲೇ ಮಗಳ ಮೇಲೆ ನಿರಂತರ ಅತ್ಯಾಚಾರ ನಡೆದಿದ್ದು, ಇದೀಗ ಆಕೆ ಗರ್ಭಿಣಿಯಾಗಿರುವ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ.
ಅಪ್ಪಯ್ಯಪ್ಪ ಎನ್ನುವ ವ್ಯಕ್ತಿ ತನ್ನ 20 ವರ್ಷದ ಮಗಳ ಮೇಲೆ 5 ತಿಂಗಳಿನಿಂದ ನಿರಂತರ ಅತ್ಯಾಚಾರ ಎಸಗಿದ್ದಾನೆ. ಇದರ ಪರಿಣಾಮ ಮಗಳು ಗರ್ಭಿಣಿಯಾಗಿದ್ದಾಳೆ. ಯುವತಿ ಹೊಟ್ಟೆ ನೋವೆಂದು ಆಸ್ಪತ್ರೆಗೆ ಹೋದಾಗ ತಂದೆಯ ವಿಕೃತಿ ಬಯಲಾಗಿದೆ.
ಅಪ್ಪಯ್ಯಪ್ಪಗೆ ಮೂವರು ಹೆಣ್ಣುಮಕ್ಕಳು ಒಬ್ಬ ಮಗನಿದ್ದು, ತಾಯಿ ಇಲ್ಲದ ಮಕ್ಕಳನ್ನು ತಾನೇ ನೋಡಿಕೊಳ್ಳುತ್ತಿದ್ದ. ಮೊದಲ ಇಬ್ಬರು ಹೆಣ್ಣುಮಕ್ಕಳನ್ನು ಮದುವೆ ಮಾಡಿದ್ದಾನೆ. ಆದರೆ, 20 ವರ್ಷದ ಮೂರನೇ ಮಗಳ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ್ದು, ಈಗ ಆಕೆ ಗರ್ಭಿಣಿಯಾಗಿದ್ದಾಳೆ.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ಮಹಾ ಕುಂಭಮೇಳದ ಕಾಲ್ತುಳಿತ ಪ್ರಕರಣ; ಮೃತರ ಕುಟುಂಬಗಳಿಗೆ ತಲಾ ₹25 ಲಕ್ಷ ಪರಿಹಾರ ಬಿಡುಗಡೆ
ಅಪ್ಪಯ್ಯಪ್ಪನ ವಿರುದ್ಧ ದೂರು ನೀಡಿದ್ದು, ಈ ದೂರಿನ ಮೇರೆಗೆ ಕಾಮಸಮುದ್ರ ಪೊಲೀಸರು ಅಪ್ಪಯ್ಯಪ್ಪನನ್ನು ಬಂಧಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಈ ದಿನ.ಕಾಮ್ ಕಾಮಸಮುದ್ರ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದೆ. ಆದರೆ ಸಿಬ್ಬಂದಿಗಳು ಕರೆಗೆ ಲಭ್ಯವಾಗಿರುವುದಿಲ್ಲ.