ನಗರದ ಹೊರವಲಯದ ಕಾಳಸ್ತಿಪುರ ಗೇಟ್ ಬಳಿ ಇರುವ ಐಶರ್ ಮಾರಾಟ ಸೇವೆ ಹಾಗೂ ಬಿಡಿ ಭಾಗಗಳ ಕಛೇರಿಯಲ್ಲಿನ ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಕಛೇರಿ ಮುಂದೆಯೇ ಐಶರ್ ವಾಹನಗಳನ್ನು ಅಡ್ಡಗಟ್ಟಿ ಮಾಲೀಕರು ಹಾಗೂ ಚಾಲಕರು ಬುಧವಾರ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಚಾಲಕ ಪುರುಷೋತ್ತಮ ಮಾತನಾಡಿ ಹೊಸದಾಗಿ ತೆಗೆದುಕೊಂಡ ವಾಹನಗಳಿಗೆ ವ್ಯಾರಂಟಿ ಇದ್ದರು ವಾಹನಗಳನ್ನು ರಿಪೇರಿ ಮಾಡದೆ ನಿರ್ಲಕ್ಷ್ಯ ತೋರಿದ್ದಾರೆ ತಿಂಗಳಿಗೆ ಸುಮಾರು 1.80 ಲಕ್ಷ ಇಎಂಐ ಕಟ್ಟಬೇಕು ಇಲ್ಲಿ ವಾಹನ ರಿಪೇರಿಗೆ ಚಿಕ್ಕ ಕೆಲಸಕ್ಕೆ ಕನಿಷ್ಠ ಒಂದು ವಾರ ತೆಗೆದುಕೊಳ್ಳತ್ತಾರೆ ಸಮಸ್ಯೆಗಳನ್ನು ದೂರದ ಬೆಂಗಳೂರಿನರ ಮೇಲೆ ಬೆಟ್ಟು ಮಾಡಿ ತೋರಿಸುತ್ತಾರೆ ಕೆಲಸ ಮಾಡಕ್ಕೆ ಆಗದೆ ಹೋದರೆ ಕಛೇರಿ ಯಾಕೆ ಬೇಕು ಎಂದು ಪ್ರಶ್ನೆ ಮಾಡಿದರು.
ಇದನ್ನು ಓದಿದ್ದೀರಾ..?ಕೋಲಾರ | ಮಾದಕ ವಸ್ತುಗಳ ಪಿಡುಗನ್ನು ನಿಲ್ಲಿಸಿ ಯುವಕರನ್ನು ರಕ್ಷಸಿ, ನೂತನ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ಕೋಲಾರ ಯುವಕರಿಂದ ಒತ್ತಾಯ.
ಈ ಸಂದರ್ಭದಲ್ಲಿ ಐಶರ್ ವಾಹನ ಮಾಲೀಕರು ಹಾಗೂ ಚಾಲಕರಾದ ಶೀಥಲ್, ವಿ.ಎಸ್.ಆರ್ ವಿಜಿಕುಮಾರ್, ವೇಲು, ಶ್ಯಾಮ್, ಮುನ್ನಾ ಮುಂತಾದವರು ಇದ್ದರು





