ನಿಮ್ಮ ಭಾಗದ ಪಂಚಾಯತ್, ಸರ್ಕಾರಿ ಆಸ್ಪತ್ರೆ, ಸಮಾಜ ಸೇವಕರು, ಸಂಘ ಸಂಸ್ಥೆಗಳು ಮುಂದೆಬಂದು ಉಚಿತ ಅರೋಗ್ಯ ಶಿಬಿರಗಳನ್ನು ಆಯೋಜಿಸಿದರೆ ಅನೇಕ ಸಾರ್ವಜನಿಕರಿಗೆ ನಮ್ಮ ಆರ್ ಎಲ್ ಜಾಲಪ್ಪ ಆಸ್ಪತ್ರೆ ವತಿಯಿಂದ ಉಪಯೋಗವಾಗುತ್ತದೆ ಎಂದು ಗ್ರಾಮೀಣ ಸಮುದಾಯ ಅರೋಗ್ಯ ಕೇಂದ್ರ ಆರ್‌ಎಂಒ ಡಾ. ಶ್ರೀರಾಮಪ್ಪ ತಿಳಿಸಿದರು.
ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನಲ್ಲಿ ವೈದ್ಯರ ದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.
“ಬಾಗೇಪಲ್ಲಿ, ಚಿಂತಾಮಣಿ, ಶ್ರೀನಿವಾಸಪುರ, ಚೇಳೂರು ತಾಲೂಕಿನ ಬುರಡಗುಂಟೆ, ಏನಿಗದಲೆ, ಚೇಳೂರು, ಬಿಳ್ಳೂರು, ಪಾತಾಪಾಳ್ಯ, ಬಾಗೇಪಲ್ಲಿಯಲ್ಲಿ ಉಚಿತ ಅರೋಗ್ಯ ಶಿಬಿರ ಆಯೋಜನೆ ಮಾಡುವವರು ಇದ್ದರೆ ಸಂಪರ್ಕಿಸಿ” ಎಂದು ತಿಳಿಸಿದರು.
“ನಾನು ಬಾಗೇಪಲ್ಲಿ ತಾಲೂಕಿನವನು. ಆದ್ದರಿಂದ ನಮ್ಮ ಜಿಲ್ಲೆ, ತಾಲೂಕು, ಊರುಗಳ ಜನರಿಗೆ ಅನುಕೂಲವಾಗಲಿ ಎಂಬುವ ಕಾಳಜಿ” ಎಂದರು.
ಈ ಸುದ್ದಿ ಓದಿದ್ದೀರಾ? ಬೀದರ್ | 9ನೇ ತರಗತಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಪ್ರಕರಣ: ಶಿಕ್ಷಕ, ಶಿಕ್ಷಕಿ ಅಮಾನತು
ಕೋಲಾರ ಜಿಲ್ಲೆಯ ದೇವರಾಯಸಮುದ್ರ ಗ್ರಾಮೀಣ ಸಮುದಾಯ ಅರೋಗ್ಯ ಕೇಂದ್ರ, ಆರ್ ಎಲ್ ಜಾಲಪ್ಪ ಆಸ್ಪತ್ರೆ, ಶ್ರೀ ದೇವರಾಜ ಅರಸು ಮೆಡಿಕಲ್ ಕಾಲೇಜಿನ ಆರ್‌ಎಂಒ ಡಾ. ಶ್ರೀರಾಮಪ್ಪ ಅವರ ಸಂಪರ್ಕ ಸಂಖ್ಯೆ 8329392104
