ಕೋಲಾರ | ರಸ್ತೆ ವಿಸ್ತರಣೆಗೆ ಕಾನೂನು ಬಾಹಿರವಾಗಿ ಜಾಗ ಅತಿಕ್ರಮಣ; ಕುರ್ಕಿ ರಾಜೇಶ್ವರಿ ಆರೋಪ

Date:

Advertisements

ಕೋಲಾರ ತಾಲೂಕಿನ ನರಸಾಪುರ ಗ್ರಾಮ ಠಾಣಾ ವ್ಯಾಪ್ತಿಯಲ್ಲಿ ರಸ್ತೆ ವಿಸ್ತರಣೆ ಕಾಮಗಾರಿಗೆ ಕಾನೂನು ಬಾಹಿರವಾಗಿ ಜಾಗ ಅತಿಕ್ರಮಣ ಮಾಡಿಕೊಂಡಿದ್ದಾರೆ‌. ಲೋಕೋಪಯೋಗಿ, ತಾಪಂ ಇಒ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಯಾವುದೇ ನೋಟಿಸ್ ನೀಡದೇ ಕಟ್ಟಡದ ಖಾತೆ ರದ್ದು ಮಾಡಿದ್ದಾರೆ ಎಂದು ಎಪಿಎಂಸಿ ಮಾಜಿ ಅಧ್ಯಕ್ಷೆ ಕುರ್ಕಿ ರಾಜೇಶ್ವರಿ ಆರೋಪಿಸಿದರು.

ನಗರದ‌ ಪತ್ರಕರ್ತರ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ನಿಯಮಬದ್ಧವಾಗಿ ನೋಟಿಸ್ ನೀಡಿ ಪರಿಹಾರ ನೀಡಿ ಖಾಸಗಿ ಸ್ವತ್ತು ತೆಗೆದುಕೊಳ್ಳಬೇಕು. ಆದರೆ, ಅಧಿಕಾರಿಗಳು ಸರ್ವಾಧಿಕಾರಿ ವರ್ತನೆ ತೋರಿದ್ದಾರೆ. ರಸ್ತೆ ಯೋಜನೆಗೆ ನಿಯಮಾನುಸಾರ ಜಾಗ ತೆಗೆದುಕೊಂಡಿಲ್ಲ. ಕಾನೂನು ಕೂಡ ಲೆಕ್ಕಿಸಿಲ್ಲ‌. ಖಾಸಗಿ ಆಸ್ತಿ ಹಕ್ಕುಗಳಿಗೆ ನ್ಯಾಯ ಒದಗಿಸದೆ ಜಾಗ ತೆಗೆದುಕೊಂಡಿದ್ದಾರೆ. ಜನಪ್ರತಿನಿಧಿಗಳನ್ನು ದಿಕ್ಕು ತಪ್ಪಿಸಿ ದೌರ್ಜನ್ಯ ‌ಎಸಗುತ್ತಿದ್ದಾರೆ” ಎಂದು ವಾಗ್ದಾಳಿ ನಡೆಸಿದರು.

“ಅಭಿವೃದ್ಧಿಯನ್ನು ನಾವು ವಿರೋಧಿಸುವುದಿಲ್ಲ. ಆದರೆ, ನರಸಾಪುರ ರಸ್ತೆ ವಿಸ್ತರಣೆ ಕಾಮಗಾರಿಯೇ ನಿಯಮ ಬಾಹಿರವಾಗಿದೆ. ಖಾಸಗಿ ಸ್ವತ್ತುಗಳ ಹಿತಾಸಕ್ತಿಗೆ ಧಕ್ಕೆಯಾಗಿದೆ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ನಿಯಮ ಉಲ್ಲಂಘಿಸಿದ್ದಾರೆ. ಅಳತೆ ಕಾರ್ಯವನ್ನು ನಿಯಮಾನುಸಾರ ಖಾಲಿ ಇರುವ ಗ್ರಾಮ ಠಾಣಾ ಗಡಿಯಿಂದ ಸರ್ಕಾರಿ ಜಾಗದಲ್ಲಿ ಉತ್ತರ ದಿಕ್ಕಿನಿಂದ ಅಳತೆ ಮಾಡಿ ಜಾಗ ಗುರುತಿಸಬೇಕಿತ್ತು. ರಸ್ತೆ ವಿಸ್ತರಣೆ ಕಾರ್ಯವನ್ನು ಉತ್ತರ ದಿಕ್ಕಿನಲ್ಲಿರುವ ಸರ್ಕಾರಿ ಖಾಲಿ ಜಾಗದಿಂದ ತೆಗೆದುಕೊಂಡು ದಕ್ಷಿಣ ದಿಕ್ಕಿಗೆ ರಸ್ತೆ ವಿಸ್ತರಣೆ ಮಾಡಿಕೊಳ್ಳಬೇಕಿತ್ತು. ಅದನ್ನು ಬಿಟ್ಟು ದಕ್ಷಿಣ ದಿಕ್ಕಿನಲ್ಲಿ ಗ್ರಾಮದ ಕಡೆಯಿಂದ ಈಗಾಗಲೇ ಕಟ್ಟಡ ಅಭಿವೃದ್ಧಿಪಡಿಸಿರುವ ಹಾಗೂ ಖಾಲಿ ನಿವೇಶನಗಳು ಇರುವಂಥ ಜಾಗದಿಂದ ಅಳತೆ ಮಾಡಿದ್ದಾರೆ” ಎಂದು ದೂರಿದರು.

Advertisements

“ಗ್ರಾಮ ಪಂಚಾಯಿತಿಯವರು ಸಾರ್ವಜನಿಕರಿಂದ ಆಧಾರ ರಹಿತ ಅರ್ಜಿಗೆ ಮಾನ್ಯತೆ ನೀಡಿ ಕಾನೂನು ಬಾಹಿರವಾಗಿ,‌ ಒತ್ತುವರಿ ಹೆಸರಿನಲ್ಲಿ ಖಾತೆಯನ್ನೇ ರದ್ದು ಮಾಡಲು ಹೊರಟಿದ್ದಾರೆ. ಸಂಬಂಧಿಸಿದ ಅಧಿಕಾರಿಗಳನ್ನು ಪ್ರಶ್ನೆ ಮಾಡಿದರೆ ಯಾವುದೇ ಉತ್ತರ ನೀಡುತ್ತಿಲ್ಲ. ಹಿಂದೆ ಗ್ರಾಮ ಪಂಚಾಯತಿಯಲ್ಲಿ ತೆಗೆದುಕೊಂಡಿರುವ ನಿರ್ಣಯವು ಕಾನೂನು ಬಾಹಿರವಾಗಿದೆ ಎಂದು ಆರೋಪಿಸಿ ಈ ಸಂಬಂಧ ನ್ಯಾಯಾಲಯ ಮೊರೆ‌ ಕೂಡ ಹೋಗಿದ್ದು, ತಡೆಯಾಜ್ಞೆ ಲಭಿಸಿದೆ. ಸುಮಾರು 1971ರಿಂದ ದಾಖಲೆಗಳು ನಮ್ಮದಾಗಿದ್ದು, ಕ್ರಯ ಪತ್ರ, ಇ ಸ್ವತ್ತು ಸೇರಿದಂತ ಎಲ್ಲಾ ದಾಖಲೆಗಳು ನಮ್ಮ ಹೆಸರಿನಲ್ಲಿದೆ. ತಾಲ್ಲೂಕು ಪಂಚಾಯಿತಿ, ಕಾರ್ಯ ನಿರ್ವಹಣಾಧಿಕಾರಿ, ಪಿಡಬ್ಲ್ಯೂಡಿ ಅಧಿಕಾರಿಗಳಿಗೆ ಇದರ ಬಗ್ಗೆ ಹಲವಾರು ಬಾರಿ ಮನವರಿಕೆ ಮಾಡಿದ್ದರೂ ಯಾರದ್ದೋ ಒತ್ತಡದಿಂದ ನಮ್ಮ ಜಾಗವನ್ನು ಅತಿಕ್ರಮಣ ಮಾಡಿದ್ದಾರೆ” ಎಂದು ಹೇಳಿದರು.

ಇದನ್ನೂ ಓದಿ: ಕೋಲಾರ | 9 ತಿಂಗಳಿನಿಂದ ವೇತನ ಸಿಗದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಹೊರಗುತ್ತಿಗೆ ಕಾರ್ಮಿಕರು

ಈ ಸಂದರ್ಭದಲ್ಲಿ ಜಾಗ ಕಳೆದುಕೊಂಡ ಬತ್ತುನ್ನೀಸಾ ಮಾತನಾಡಿ, “ಸುಮಾರು 1936ರಿಂದ ನಮ್ಮ ಜಾಗದ ಮೂಲ ದಾಖಲೆಗಳು ಇದ್ದು ಅಂದಿನಿಂದಲೂ ಸರ್ಕಾರಕ್ಕೆ ಕಂದಾಯವನ್ನು ಪಾವತಿಸಿದ್ದೇವೆ. ಆದರೆ, ಇವತ್ತು ಏಕಾಏಕಿ ಖಾತೆಯನ್ನು ರದ್ದು ಮಾಡಿ ನಮ್ಮ ಕುಟುಂಬಕ್ಕೆ ಅನ್ಯಾಯ ಮಾಡಿದ್ದಾರೆ” ಎಂದು ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರಾಜೇಶ್ವರಿ ಅವರೊಂದಿಗೆ ನೂರುಲ್ಲಾ ಷರೀಫ್ ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ಬಾಣಂತಿ, ಮಗು ಸಾವು

ಹೆರಿಗೆಯ ವೇಳೆ ತೀವ್ರ ರಕ್ತಸ್ರಾವವಾಗಿ ತಾಯಿ ಮತ್ತು ಮಗು ಇಬ್ಬರೂ ಸಾವನ್ನಪ್ಪಿದ...

ಉಡುಪಿ | ಶಾಸಕರಿಂದ ಸೌಹಾರ್ದತೆಗೆ ದಕ್ಕೆ ತರುವ ಹೇಳಿಕೆ, ಕಾನೂನು ಕ್ರಮ ಕೈಗೊಳ್ಳಿ – ಎಸ್ ಡಿ ಪಿ ಐ

ಮೈಸೂರು ಸಂಸ್ಥಾನದ ಇತಿಹಾಸದ ಗಂಧಗಾಳಿ ತಿಳಿಯದ ಮತ್ತು ಸದಾ ಹಿಂದುತ್ವದ ಅಮಲಿನಲ್ಲಿರುವ...

ವಿಜಯಪುರ | ಸರ್ಕಾರ ದಲಿತರಿಗೆ ರಾಜಕೀಯದಲ್ಲೂ ಮೀಸಲಾತಿ ಕಲ್ಪಿಸಲಿ: ದಸಂಸ ಸಂಚಾಲಕ ಮಯೂರ

ಪರಿಶಿಷ್ಟ ಸಮುದಾಯಗಳಿಗೆ ಶೈಕ್ಷಣಿಕ, ಆರ್ಥಿಕ ಮತ್ತು ಔದ್ಯೋಗಿಕ ಕ್ಷೇತ್ರದಲ್ಲಿ ರಾಜ್ಯ ಸರ್ಕಾರ...

ಬಳ್ಳಾರಿ | ಪದವಿ ಕಾಲೇಜುಗಳಲ್ಲಿ ಉಪನ್ಯಾಸಕರ ಕೊರತೆಯಿಂದ ವಿದ್ಯಾರ್ಥಿಗಳ ಶೈಕ್ಷಣಿಕತೆಗೆ ಹಿನ್ನೆಡೆ: ಎಐಡಿಎಸ್ಒ ಆಕ್ರೋಶ

ರಾಜ್ಯಾದ್ಯಂತ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಉಪನ್ಯಾಸಕರ ಕೊರತೆಯಿಂದ ಪದವಿ ವಿದ್ಯಾರ್ಥಿಗಳ ಶೈಕ್ಷಣಿಕ...

Download Eedina App Android / iOS

X