ಕೋಲಾರ | ಸುಳ್ಳುಗಳೇ ಮೈತ್ರಿಯ ಮಾನದಂಡ: ಶಾಸಕ ಕೊತ್ತೂರು ಮಂಜುನಾಥ್

Date:

Advertisements

ಕೋಲಾರ ಜಿಲ್ಲೆಯ ಅಭಿವೃದ್ಧಿಗೆ ಜೆಡಿಎಸ್ ಮತ್ತು ಬಿಜೆಪಿ ಸರ್ಕಾರಗಳು ಕೇವಲ ಆದೇಶಕ್ಕೆ ಮಾತ್ರ ಸೀಮಿತವಾಗಿದ್ದು, ಅವುಗಳಿಗೆ ಅನುದಾನ ಬಿಡುಗಡೆ ಮಾಡಿ ಜಾರಿ ಮಾಡಿರುವುದು ಕಾಂಗ್ರೆಸ್ ಸರ್ಕಾರ. ಮೈತ್ರಿ ಪಕ್ಷಗಳು ಯಾವುದೇ ಕೊಡುಗೆಗಳ ಮಾನದಂಡಗಳ ಮೇಲೆ ಹೋಗಿ ಮತ ಕೇಳುತ್ತಾರೆ ಎಂಬುದನ್ನು ಜನತೆ ಪ್ರಶ್ನೆ ಮಾಡಬೇಕಾಗಿದೆ. ಸುಳ್ಳುಗಳೇ ಮೈತ್ರಿಯ ಮಾನದಂಡ ಎಂದು ಶಾಸಕ ಕೊತ್ತೂರು ಮಂಜುನಾಥ್ ಮೈತ್ರಿ ವಿರುದ್ದ ವಾಗ್ದಾಳಿ ನಡೆಸಿದರು.

ತಾಲೂಕಿನ ವೇಮಗಲ್ ಕುರುಗಲ್ ಪಟ್ಟಣ ಪಂಚಾಯಿತಿ ಚುನಾವಣೆಗೆ ಸಂಬಂಧಿಸಿದಂತೆ ಪ್ರಚಾರದ ಸಭೆಗಳಲ್ಲಿ ಭಾಗವಹಿಸಿ ಮಾತನಾಡಿದ ಅವರು, “ಸುಳ್ಳು ಪಳ್ಳು ಹೇಳಿ ನಿಮ್ಮ ಮುಂದೆ ಕಾಂಗ್ರೆಸ್ ಪಕ್ಷದವರು ಬಂದಿಲ್ಲ. ಚುನಾವಣೆ ಪೂರ್ವದಲ್ಲಿ ಏನು ಹೇಳಿದ್ದೇವೆ ಅದನ್ನು ಜಾರಿ ಮಾಡಿದ್ದೇವೆ. ಸ್ವಾತಂತ್ರ್ಯ ಪೂರ್ವದಿಂದ ಇಲ್ಲಿತನಕ ಕಾಂಗ್ರೆಸ್ ದೇಶಕ್ಕಾಗಿ ಸಾಕಷ್ಟು ಕೊಡುಗೆ ಕೊಟ್ಟಿದೆ. ಬಿಜೆಪಿ ಜೆಡಿಎಸ್ ದೇಶಕ್ಕಾಗಿ ಏನು ಕೊಡುಗೆ ಕೊಟ್ಟಿದೆ ಕೇಳಿ. ಮೈತ್ರಿಯಿಂದ ಏನೂ ಮಾಡಲು ಆಗಲ್ಲ. ಕಾಂಗ್ರೆಸ್ ಮಾತ್ರವೇ ಅಭಿವೃದ್ಧಿ ಮಾಡೋದು, ನಿಮ್ಮ ಮತಕ್ಕೆ ಬೆಲೆ ಕೊಡುವ ಕೆಲಸವನ್ನು ಕಾಂಗ್ರೆಸ್ ಪಕ್ಷವು ಮಾಡುತ್ತದೆ” ಎಂದರು.

“ಬೆಂಗಳೂರಿನ ಸಂಜಯ್ ನಗರದಲ್ಲಿ ಸ್ವಂತ ಮನೆ ಇದೆ ಅಂತ ಹೇಳಿಕೊಂಡಿದ್ದ ವರ್ತೂರು ಪ್ರಕಾಶ್ ಅವರ ಮನೆಯು ಬಾಡಿಗೆದ್ದಾಗಿದೆ. ಕಳೆದ ಐದು ವರ್ಷದಿಂದ ಬಾಡಿಗೆ ಕೊಟ್ಟಿಲ್ಲ ಅಂತ ಮನೆ ಮಾಲೀಕರು ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ದಾಖಲೆಗಳ ಸಹಿತವಾಗಿ ಇದೆ. ಇವತ್ತು ಅವರನ್ನು ಕೋರ್ಟ್ ಮೂಲಕ ಮನೆಯಿಂದ ಹೊರ ಹಾಕುವ ಪರಿಸ್ಥಿತಿ ಬಂದಿದೆ. ಇದು ಅವರ ಸಾಧನೆ. ಹಾಗಾಗಿ ಜನ ಯೋಚನೆ ಮಾಡಬೇಕಾಗಿದೆ” ಎಂದು ತಿಳಿಸಿದರು.

Advertisements

ವಿಧಾನ ಪರಿಷತ್ ಸದಸ್ಯ ಎಂ ಎಲ್ ಅನಿಲ್ ಕುಮಾರ್ ಮಾತನಾಡಿ, “ಕ್ಷೇತ್ರದಲ್ಲಿ ಸುಳ್ಳಿಗೆ ಇನ್ನೊಂದು ಹೆಸರೇ ವರ್ತೂರು ಪ್ರಕಾಶ್. 2013 ರಿಂದ 2018 ರವರೆಗೆ ಸಿದ್ದರಾಮಯ್ಯ ಅವರ ಸರ್ಕಾರ ಇದ್ದಾಗ ಎಸ್‌ಸಿಪಿ ಮತ್ತು ಟಿಎಸ್‌ಪಿ ಅನುದಾನದಲ್ಲಿ ಸಿಮೆಂಟ್ ರಸ್ತೆ ಮಾಡಿದ್ದು, ಅದನ್ನೇ ಇವತ್ತು ಎಲ್ಲ ಕಡೆಯಲ್ಲಿ ಹೇಳಿಕೊಂಡು ನಾನು ಅಭಿವೃದ್ಧಿ ಮಾಡಿದ್ದು ಬೇರೆ ಯಾವ ಶಾಸಕರು ಮಾಡದ ಕೆಲಸವನ್ನು ನಾನು ಮಾಡಿದ್ದೇನೆ ಎನ್ನುತ್ತಾರೆ. ಹೌದಪ್ಪ ವರ್ತೂರು ಪ್ರಕಾಶ ಅವರೇ ಹಿಂದೆ ಶಾಸಕರಾಗಿದ್ದ ಬೈರೇಗೌಡರು, ಕೃಷ್ಣಬೈರೇಗೌಡ, ಶ್ರೀನಿವಾಸಗೌಡ, ಕೊತ್ತೂರು ಮಂಜುನಾಥ್ ಅವರು ಹಳ್ಳಿಗಳಲ್ಲಿ ಯುವಕರನ್ನು ರಾತ್ರಿಯಲ್ಲಿ ಗುಂಡು ತುಂಡು ಕೊಟ್ಟು ಹಾಳು ಮಾಡಿಲ್ಲ, ಜಾತಿ ಜಾತಿಗಳ ಮಧ್ಯೆ ಸಂಘರ್ಷ ಮಾಡಿಲ್ಲಪ್ಪ ವರ್ತೂರು ಪ್ರಕಾಶ್” ಎಂದು ವಾಗ್ದಾಳಿ ನಡೆಸಿದರು.

“ವರ್ತೂರು ಪ್ರಕಾಶ್ ಅವರು ಶಾಸಕರಾಗಿ ಸಚಿವರಾಗಿ ಕ್ಷೇತ್ರದಲ್ಲಿ ಏನಾದರೂ ಒಂದೇ ಒಂದು ಹೈಸ್ಕೂಲ್, ಐಟಿಐ, ಡಿಪ್ಲೊಮಾ, ಪಿಯುಸಿ, ಡಿಗ್ರಿ ಕಾಲೇಜುಗಳನ್ನು ಮಾಡಿದ್ದಾರೆಯೇ ಎಂಬುದನ್ನು ಬಹಿರಂಗ ಪಡಿಸಬೇಕು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೋಲಾರ ಕ್ಷೇತ್ರದಲ್ಲಿ ಹೈಸ್ಕೂಲ್, ಅಂಗನವಾಡಿ ಕೇಂದ್ರಗಳು, ಹೋಬಳಿ ಕೇಂದ್ರಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮಾಡಿದ್ದಾರೆ. ವರ್ತೂರು ಪ್ರಕಾಶ್ ಅವರನ್ನು ಕಳೆದ ಎರಡು ಚುನಾವಣೆಗಳಲ್ಲಿ ಮೂರನೇ ಸ್ಥಾನಕ್ಕೆ ಕ್ಷೇತ್ರದ ಜನತೆ ಕಳುಹಿಸಿದ್ದಾರೆ. ಅದರೂ ಬುದ್ದಿ ಕಲಿಯಲಿಲ್ಲ. ಸುಳ್ಳೇ ಬಂಡವಾಳ ಮಾಡಿಕೊಂಡಿದ್ದಾರೆ. ಅವರಿಗೆ ಈ ಚುನಾವಣೆಯಲ್ಲಿಯೂ ಕೂಡ ತಕ್ಕ ಪಾಠ ಕಲಿಸಬೇಕಾಗಿದೆ” ಎಂದರು.

“ಕಳೆದ ಕೋಮುಲ್ ಚುನಾವಣೆಯಲ್ಲಿ ವೇಮಗಲ್ ಭಾಗದ ಮೈತ್ರಿ ಅಭ್ಯರ್ಥಿ ಜನಘಟ್ಟ ಕೃಷ್ಣಪ್ಪ ಅವರ ಪರವಾಗಿ ವರ್ತೂರು ಪ್ರಕಾಶ್ ಮತ್ತು ಸಿಎಂಆರ್ ಶ್ರೀನಾಥ್ ಅವರು ಚುನಾವಣೆ ಪೂರ್ವದಲ್ಲಿ ಕೊಟ್ಟಿದ್ದ ಹಣವನ್ನು ಸೋತ ನಂತರ ವಸೂಲಿ ಮಾಡಿದ್ದಾರೆ. ಅಂತಹ ಮೈತ್ರಿ ಗಿರಾಕಿಗಳ ಬಗ್ಗೆ ಹೆಚ್ಚು ಮಾತು ಅವಶ್ಯಕತೆ ಇಲ್ಲ. ಅವರ ಸುಳ್ಳು ಈ ಭಾಗದಲ್ಲಿ ನಡೆಯುವುದಿಲ್ಲ” ಎಂದು ಛಾಟಿ ಬೀಸಿದರು.‌

ಈ ಸುದ್ದಿ ಓದಿದ್ದೀರಾ? ವಿಜಯಪುರ | ಆಲಮಟ್ಟಿ ಜಲಾಶಯ ಭರ್ತಿಗೆ ಕೆಲವೇ ಗಂಟೆಗಳು ಬಾಕಿ

ಈ ಸಂದರ್ಭದಲ್ಲಿ ಮಾಜಿ ಸಭಾಪತಿ ವಿ. ಆರ್ ಸುದರ್ಶನ್, ಮಾಜಿ ಜಿಪಂ ಸದಸ್ಯ ನಾಗನಾಳ ಸೋಮಣ್ಣ, ಕೋಮುಲ್ ನಿರ್ದೇಶಕ ಚಂಜಿಮಲೆ ಬಿ ರಮೇಶ್, ಜಿಲ್ಲಾ ಗ್ಯಾರೆಂಟಿ ಸಮಿತಿ ಅಧ್ಯಕ್ಷ ವೈ ಶಿವಕುಮಾರ್, ತಾಲೂಕು ಅಧ್ಯಕ್ಷ ಮುನಿಯಪ್ಪ, ಸಿಂಡಿಕೇಟ್ ಸದಸ್ಯ ಸೀಸಂದ್ರ ಗೋಪಾಲಗೌಡ, ನರಸಾಪುರ ಸೊಸೈಟಿ ಅಧ್ಯಕ್ಷ ಖಾಜಿಕಲ್ಲಹಳ್ಳಿ ಮುನಿರಾಜು, ಮೈಲಾಂಡಹಳ್ಳಿ ಮುರಳಿ, ಖಾದ್ರಿಪುರ ಬಾಬು, ಉದಯ ಶಂಕರ್‌, ಪೆರ್ಜೇನಹಳ್ಳಿ ನಾಗೇಶ್, ಬೆಳಗಾನಹಳ್ಳಿ ಮುನಿವೆಂಕಟಪ್ಪ, ಯಲವಾರ ರಾಜಕುಮಾರ್, ಆಫ್ರೀದ್, ಛತ್ರಕೋಡಿಹಳ್ಳಿ ಮಂಜುನಾಥ್, ಅಭ್ಯರ್ಥಿಗಳಾದ ಗಂಗಣ್ಣ, ಅಂಜಲಿ ಪ್ರಕಾಶ್, ಕೆ ಹೆಚ್ ಮುನಿರಾಜು, ರಾಜೇಶ್, ಮಂಜುಳ ಸುರೇಶ್, ಮುರಳಿ, ದೀಪಾ, ವನಿತಾ ಮಹೇಶ್, ಶಶಿಕಲಾ ನಾಗೇಶ್, ರವಿಚಂದ್ರ ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಕಲೇಶಪುರ | ಮಕ್ಕಳನ್ನು ಡ್ರಗ್ಸ್‌ ದಾಸರನ್ನಾಗಿ ಮಾಡಿ ಭಾರತವನ್ನು ಮುಳುಗಿಸುವಲ್ಲಿ ದೊಡ್ಡ ದೊಡ್ಡ ದೇಶಗಳ ಕೈವಾಡವಿದೆ: ಎಚ್‌ ಎಂ ವಿಶ್ವನಾಥ್

ದೊಡ್ಡ ದೊಡ್ಡ ದೇಶಗಳು ನಮ್ಮ ದೇಶದ ಮಕ್ಕಳನ್ನು ಗುರಿಯಾಗಿಸಿಕೊಂಡು ಡ್ರಗ್ಸ್‌ನಲ್ಲಿ ಮುಳುಗಿಸುತ್ತಿದ್ದಾರೆ....

ಹಾವೇರಿ | ಮಾದಕ ವಸ್ತು ಮಾರಾಟ; ನಾಲ್ವರು ಬಂಧನ

ಗಾಂಜಾ ಮಾರಾಟ ಮಾಡುತ್ತಿದ್ದ ವೇಳೆ ನಾಲ್ವರನ್ನು ಪೊಲೀಸರು ಬಂಧಿಸಿದ ಘಟನೆ ಹಾವೇರಿ...

ಶಿವಮೊಗ್ಗ | ಕಾಂಗ್ರೆಸ್ ಕಚೇರಿಯಲ್ಲಿ ಅರಸು ಮತ್ತು ರಾಜೀವ್‍ಗಾಂಧಿಯವರ ಜನ್ಮದಿನಾಚರಣೆ

ಶಿವಮೊಗ್ಗ, ನಗರದ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಹಿಂದುಳಿದ ವರ್ಗಗಳ ನಾಯಕ ಹಾಗೂ...

ಶಿವಮೊಗ್ಗ | ಆರು ಜಿಲ್ಲೆಯ ಮುಖಂಡರಿಂದ ಅಹಿಂದ ಸಮಾವೇಶದ ಪೂರ್ವಭಾವಿ ಸಭೆ : ತೀ.ನ. ಶ್ರೀನಿವಾಸ್

ಶಿವಮೊಗ್ಗ, ಮಲೆನಾಡು ರೈತರ ಸಮಸ್ಯೆ ಹಾಗೂ ಕಾಂತ್‌ರಾಜ್ ವರದಿಯ ಜಾರಿಗೆ ಆಗ್ರಹಿಸಿ...

Download Eedina App Android / iOS

X