ನೆಲದ ಸಂಸ್ಕೃತಿಯನ್ನು ಎತ್ತಿ ಹಿಡಿಯುವುದೇ ನಮ್ಮ ಆಶಯ. ಜನಪದ ಕಲೆಯನ್ನು ಉಳಿಸಿ ಕಾಪಾಡುವುದು ನಮ್ಮ ಮೊದಲ ಆದ್ಯತೆ. ಜನಪದ ಕಲೆ ಉಳಿಸಿದರೆ ನಮ್ಮ ಪರಂಪರೆಯನ್ನು ಉಳಿಸಿದ ಹಾಗೆ ಎಂದು ಕೋಲಾರದ ಆದಿಮಾ ಸಾಂಸ್ಕೃತಿಕ ಕೇಂದ್ರ ಕಾರ್ಯದರ್ಶಿ ಹಾ ಮಾ ರಾಮಚಂದ್ರ ಹೇಳಿದರು.
ಕೋಲಾರದ ಆದಿಮ ಸಂಸ್ಕೃತಿ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಜನಪದ ಸಂಸ್ಕೃತಿಯನ್ನು ಕಾಪಾಡಲು ನಾವು ನಿರಂತರವಾಗಿ ಹುಣ್ಣಿಮೆ ಹಾಡು ಹಾಗೂ ಚುಕ್ಕಿ ಮೇಳಾ ಕಾರ್ಯಕ್ರಮ ಮಾಡಿಕೊಂಡು ಬರುತ್ತಿದ್ದೇವೆ. ಇಲ್ಲಿ 2005ರಿಂದ ಆರಂಭ ಮಾಡಿ ಸುಮಾರು 20 ವರ್ಷದಿಂದ ನಡೆದುಕೊಂಡು ಬಂದಿರುವ ಕಾರ್ಯಕ್ರಮಗಳಲ್ಲಿ ಸುಮಾರು 220 ಹುಣ್ಣಿಮೆ ಹಾಡು ಹಾಗೂ 20 ಚುಕ್ಕಿ ಮೇಳಾ ಕಾರ್ಯಕ್ರಮ ಆಯೋಜನೆಯಾಗಿದೆ” ಎಂದರು.
“ಆದಿಮ ಸಾಂಸ್ಕೃತಿಕ ಕೇಂದ್ರದಿಂದ ರಂಗಭೂಮಿಯನ್ನು ಪ್ರಾರಂಭ ಮಾಡಿದ್ದು, ಅದರ ಮುಂದುವರೆದ ಭಾಗವಾಗಿ ಸರ್ಕಾರ ಮತ್ತು ವಿಶ್ವವಿದ್ಯಾಲಯದಿಂದ ಅನುಮತಿ ಪಡೆದು ಜುಲೈ 14ರಿಂದ ರಂಗಭೂಮಿ ಶಿಕ್ಷಣ ಕೇಂದ್ರ ಪ್ರಾರಂಭಿಸಿ, ಕಾಲೇಜು ಆರಂಭಿಸಿ ಶಿಕ್ಷಣ ಒದಗಿಸಿ ಸರ್ಟಿಫಿಕೇಟ್ ನೀಡುವ ಕೆಲಸ ಮಾಡುತ್ತಿದ್ದೇವೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಚಿಂತಾಮಣಿ | ಹಿರಿಯ ನಾಗರಿಕರ ವಿವಿಧ ಸ್ಪರ್ಧೆಗಳಿಗೆ ಸಚಿವ ಡಾ. ಎಂ ಸಿ ಸುಧಾಕರ್ ಚಾಲನೆ
“ಸ್ವಾವಲಂಬಿ ಬದುಕು ಕಟ್ಟಿಕೊಳ್ಳವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಯಾರ ಮೇಲೆಯೂ ಅವಲಂಬಿತರಾಗದೆ ಸ್ವತ್ರಂತ್ರ ವ್ಯಕ್ತಿತ್ವ ನಿರ್ಮಾಣ ಮಾಡುವ ರೀತಿಯಲ್ಲಿ ತರಬೇತಿ ನೀಡುತ್ತಿದ್ದೇವೆ” ಎಂದು ಸಂತಸ ವ್ಯಕ್ತಪಡಿಸಿದರು.