ಕೋಲಾರ | ವೇಮಗಲ್ ಕುರುಗಲ್ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದು ಬೀಗಿದ ಮೈತ್ರಿ

Date:

Advertisements

ತೀವ್ರ ಕುತೂಹಲ ಮೂಡಿಸಿದ್ದ ಕೋಲಾರದ ವೇಮಗಲ್ ಕುರುಗಲ್ ಪಟ್ಟಣ ಪಂಚಾಯತಿ ಚುನಾವಣಾ ಫಲಿತಾಂಶ ಇಂದು ಹೊರಬಿದ್ದಿದೆ. ಕಾಂಗ್ರೆಸ್ 6, ಬಿಜೆಪಿ 6, ಜೆಡಿಎಸ್ 4 ಹಾಗೂ ಪಕ್ಷೇತರವಾಗಿ ಒಬ್ಬರು ಅಭ್ಯರ್ಥಿ ಜಯಗಳಿಸಿದ್ದಾರೆ.

ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಕಣಕ್ಕಿಳಿದಿತ್ತು. ಆದರೆ, ಕಾಂಗ್ರೆಸ್ ಪಕ್ಷ ವೇಮಗಲ್ ಕುರುಗಲ್ ಭಾಗದಲ್ಲಿ ಪ್ರಭಾವವಾಗಿದ್ದ ಮೈತ್ರಿ ವಿರುದ್ಧ ಬಿರುಸಿನ ಪ್ರಚಾರ ಮಾಡಿತ್ತು ಹಾಗೂ ಹಲವಾರು ಮೈತ್ರಿ ಮುಖಂಡರನ್ನು ಸಹ ಸೆಳೆದರು ಸಹ 17 ಸ್ಥಾನಗಳಲ್ಲಿ ಆರು ಸ್ಥಾನವನ್ನು ಪಡೆದಿದೆ. ವೇಮಗಲ್ ಕುರುಗಲ್ ಭಾಗದಲ್ಲಿ ಮಾಜಿ ಶಾಸಕ ವರ್ತೂರು ಪ್ರಕಾಶ್ ರವರ ಪ್ರಭಾವ ಹೆಚ್ಚಿರುವ ಕಾರಣದಿಂದ ಮೈತ್ರಿ ಅಭ್ಯರ್ಥಿಗಳಿಗೆ ಅನುಕೂಲವಾಗಿದೆ ಎನ್ನಲಾಗಿದೆ.

ಕೋಲಾರ ಗ್ರಾಮಾಂತರ ಭಾಗದಲ್ಲಿ ಕಾಂಗ್ರೆಸ್ 6 ಸ್ಥಾನ ಪಡೆದು ಮತ ಪ್ರಮಾಣವನ್ನು ಕಳೆದ ಬಾರಿ ಚುಣಾವಣೆಗಿಂತ ಹೆಚ್ಚಿಗೆ ಪಡೆದಿದೆ.

Advertisements
IMG 20250820 WA0047

1ನೇ ವಾರ್ಡ್ ಚನ್ನಪ್ಪನಹಳ್ಳಿ- ಕುರುಬರಹಳ್ಳಿ ಕಾಂಗ್ರೆಸ್‌, 2 ಬೆಟ್ಟಹೊಸಪುರ- ಮಂಜಲಿ ಮೈತ್ರಿ, 3 ನೇ ವಾರ್ಡ್ ಕಲ್ವ-ಚಿಕ್ಕವಲ್ಲಬ್ಬಿ ಜೆಡಿಎಸ್, 4 ನೇ ವಾರ್ಡ್ ಮಲಿಯಪ್ಪನಹಳ್ಳಿ ಜೆಡಿಎಸ್, 5 ನೇ ವಾರ್ಡ್ ಜೆಡಿಎಸ್ ಮೈತ್ರಿ, 6 ನೇ ವಾರ್ಡ್ ಬಿಜೆಪಿ ಮೈತ್ರಿ, 7 ನೇ ವಾರ್ಡ್ ಕಾಂಗ್ರೆಸ್ ಗೆಲುವು, ಕುರುಗಲ್ – 8 ನೇ ವಾರ್ಡ್ ಮೈತ್ರಿ, ಕುರುಗಲ್ ಎ 9 ನೇ ವಾರ್ಡ್ -1 ಬಿಜೆಪಿ, 10 ನೇ ವಾರ್ಡ್ ಹಾರ್ಜೇನಹಳ್ಳಿ ಕಾಂಗ್ರೆಸ್, 11 ನೇ ವಾರ್ಡ್ ಪೇರ್ಜೆನಹಳ್ಳಿ- ಪುರಹಳ್ಳಿ ಕಾಂಗ್ರೆಸ್‌, 12 ಐಬಿ- ಸಿಂಗೇಹಳ್ಳಿ ವಾರ್ಡ್ ಮೈತ್ರಿ ಬಿಜೆಪಿ, ವೇಮಗಲ್ – ಎ 1 ಪಕ್ಷೇತರ ಅಭ್ಯರ್ಥಿ ಶಿಲ್ಪಾ ಶಿವಶಂಕರ್, ವೇಮಗಲ್ ಎ -2 ಮೈತ್ರಿ ಬಿಜೆಪಿ, ವೇಮಗಲ್ – ಬಿ 2 ಬೆಜೆಪಿ, 15 ನೇ ವಾರ್ಡ್ ಕಾಂಗ್ರೆಸ್, 17 ನೇ ವಾರ್ಡ್ ವೇಮಗಲ್ ಸಿ ಬ್ಲಾಕ್ ನಲ್ಲಿ ಕಾಂಗ್ರೆಸ್ ಗೆಲುವು ದಾಖಲಿಸಿವೆ.

ಕಾಂಗ್ರೆಸ್ ಸರ್ಕಾರದ ದುರಾಡಳಿತದ ವಿರುದ್ಧ ವೇಮಗಲ್ ಕುರುಗಲ್ ಭಾಗದ ಜನರು ಮೈತ್ರಿ ಅಭ್ಯರ್ಥಿಗಳಿಗೆ ಬೆಂಬಲಿಸಿದ್ದಾರೆ, ಎಂದು ಹೇಳಿದ ಕೋಲಾರ ಜೆಡಿಎಸ್ ಮುಖಂಡ CMR ಶ್ರೀನಾಥ್ ಪ್ರತಿಕ್ರಿಯಿಸಿದ್ದಾರೆ.

IMG 20250820 WA0050

ಇದನ್ನೂ ಓದಿ: ಕೋಲಾರ | ಗುದ್ದಲಿ ಪೂಜೆಯಾಗಿ ವರ್ಷ ಕಳೆದರೂ ರಸ್ತೆ ಕಾಮಗಾರಿ ಪೂರ್ಣಗೊಂಡಿಲ್ಲ: ಸ್ಥಳೀಯರ ಆಕ್ರೋಶ

ವೇಮಗಲ್ ಕುರುಗಲ್ ಪಟ್ಟಣ ಪಂಚಾಯಿತಿಯಲ್ಲಿ ಚುನಾವಣೆ ನಡೆದು ಮೈತ್ರಿ ಗೆ ಜನರು ಬೆಂಬಲ ನೀಡಿದ್ದಾರೆ ನಮಗೆ ಜನ ಸೇವೆ ಮಾಡಕ್ಕೆ ಅವಕಾಶ ನೀಡಿದ್ದು ಎಲ್ಲರಿಗೂ ಅಭಿನಂದನೆಗಳು ಸಲ್ಲಿಸುತ್ತೇನೆ ಹಾಗೂ ವೇಮಗಲ್ ಕುರುಗಲ್ ಪಟ್ಟಣ ಪಂಚಾಯಿತಿಯನ್ನು ಅಭಿವೃದ್ಧಿ ಮಾಡುತ್ತೇವೆ ಎಂದು ಕೋಲಾರ ಮಾಜಿ ಶಾಸಕ ವರ್ತೂರು ಪ್ರಕಾಶ್ ಹೇಳಿದ್ದಾರೆ.

ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಪೋಲಿಸರು ಸೂಕ್ತ ಬಂದೋಬಸ್ತ್ ಮಾಡಿಕೊಂಡಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸೊರಬ | 30 ಅಡಿ ಬಾವಿಗೆ ಬಿದ್ದ ಆಕಳು ರಕ್ಷಣೆ

ಸೊರಬ, ಪಟ್ಟಣದ ಹೊಸಪೇಟೆ ಬಡಾವಣೆಯಲ್ಲಿ ಬಾವಿಗೆ ಬಿದ್ದ ಆಕಳನ್ನು ಅಗ್ನಿಶಾಮಕದಳದ ಸಿಬ್ಬಂದಿ...

ಶಿವಮೊಗ್ಗ | ಹಳೆ ದ್ವೇಷ : ಯುವಕನಿಗೆ ಚಾಕುವಿನಿಂದ ಇರಿದು ಕೊಲೆ

ಶಿವಮೊಗ್ಗ, ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಸಂಬಂಧಿ ಯುವಕನಿಗೆ ಇನ್ನೊಬ್ಬ ಚಾಕುವಿನಿಂದ ಇರಿದು...

ಚಿಕ್ಕಬಳ್ಳಾಪುರ | ದೇಶದಲ್ಲೇ ಮೊದಲ ಬಾರಿಗೆ AI ತಂತ್ರಜ್ಞಾನದಿಂದ ಸೇವೆ ನೀಡಲು ಮುಂದಾದ ಜಿಲ್ಲಾ ಪೊಲೀಸ್

ಸಾಮಾಜಿಕ ಜಾಲತಾಣಗಳನ್ನು ಸಮರ್ಥವಾಗಿ ಬಳಸಿಕೊಂಡು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ...

ಬಾಗೇಪಲ್ಲಿ | ಡಿ.ದೇವರಾಜ ಅರಸುರವರ ಆಶಯ, ಚಿಂತನೆಗಳು ಇಂದಿಗೂ ಮಾದರಿ: ತಹಶೀಲ್ದಾರ್ ಮನೀಷ್ ಎನ್ ಪತ್ರಿ

ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಆಶಯಗಳು, ಚಿಂತನೆಗಳು ಇಂದಿಗೂ ಮಾದರಿಯಾಗಿವೆ....

Download Eedina App Android / iOS

X