ಕಾಡಾನೆ ದಾಳಿಯಿಂದ ವಾರದಲ್ಲಿ ಎರಡು ಸಾವಾಗಿದೆ, ಹಾಗೆಯೇ, ಅಕ್ರಮವಾಗಿ ಸಾಗುವಾನಿ ಮರ ಕಡಿದವರಿಗೆ ಏನು ಕ್ರಮ ಜರುಗಿಸಿದ್ದೀರ ಎಂದು ಪ್ರಶ್ನಿಸಿದಕ್ಕೆ ಕೊಪ್ಪ ತಾಲೂಕಿನ ಆರ್ ಎಫ್ ಒ ರಂಗನಾಥ್ ಉಡಾಫೆ ಮಾತುಗಳನ್ನಾಡುತ್ತಾರೆ ಎಂದು ಕರ್ನಾಟಕ ಜನಶಕ್ತಿ ಸಂಘಟನೆಯ ಮುಖಂಡರಾದ ಕೆ ಎಲ್ ಅಶೋಕ್ ಆರೋಪಿಸಿದ್ದಾರೆ.
ಮಲೆನಾಡಿನ ಭಾಗದಲ್ಲಿ ನಿರಂತರ ಕಾಡಾನೆ ದಾಳಿಯಿಂದ ರೈತರು ಬೆಳೆದಿರುವ ಬೆಳೆಗಳು ಹಾಗೆಯೇ, ಜನರ ಪ್ರಾಣ ಹಾನಿಯಾಗುತ್ತಿದೆ. ನಾಲ್ಕು ದಿನದ ಹಿಂದೇ ಅನಿತಾ ಎಂಬ ಕಾರ್ಮಿಕ ಮಹಿಳೆ ಮೃತ ಪಟ್ಟಿದ್ದರು, ಆದರೂ “ಸುತ್ತಮುತ್ತಲಿನ ವಾಸ ಮಾಡುತ್ತಿರುವ ಜನರಿಗೆ ಯಾವ ರಕ್ಷಣೆ ಇಲ್ಲದ ಕಾರಣ ಭಾನುವಾರ ಸಂಜೆ ಸುಬ್ಬರಾಯ ಗೌಡ ಎಂಬ ವ್ಯಕ್ತಿಯನ್ನು ಕಾಡಾನೆ ದಾಳಿ ನಡೆಸಿದ ಪರಿಣಾಮ ವ್ಯಕ್ತಿ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.” ಎಂದು ಈದಿನ.ಕಾಮ್ ಗೆ ಕೆ.ಎಲ್ ಅಶೋಕ್ ಮಾಹಿತಿ ತಿಳಿಸಿದ್ದಾರೆ.
ಹಾಗೆಯೇ, ಕಳೆದ ವಾರದ ಹಿಂದೇ ಅಕ್ರಮವಾಗಿ ಸಾಗುವಾನಿ ಮರ ಕಡಿದು ಸಾಗಾಟ ಮಾಡಿದ ಆರೋಪಿಗಳನ್ನು ಇನ್ನೂ ಬಂಧಿಸದೆ ಹಲವು ಕಾರಣಗಳನ್ನು ಕೊಟ್ಟು ಅದನ್ನು ಮುಚ್ಚಿ ಹಾಕುವ ಹೊನ್ನರ ನಡೆಯುತ್ತಿದೆ. “ಅದೇ ಬಡವ ಮಾಡಿದರೇ, ತಕ್ಷಣ ಕ್ರಮ ತೆಗೆದುಕೊಂಡು ಬಂಧಿಸುವ ಕೆಲಸ ಆಗುತ್ತಿತ್ತು” ಈ ವಿಚಾರವಾಗಿ ಕೊಪ್ಪ ತಾಲೂಕಿನ ಆರ್ ಎಫ್ ಒ ರಂಗನಾಥ್ ಅವರೊಂದಿಗೆ ಪ್ರಶ್ನಿಸಿದಾಗ ಉಡಾಫೆಯಿಂದ ಮಾತಾಡಿದ್ದಾರೆ ಎಂದು ಕರ್ನಾಟಕ ಜನಶಕ್ತಿ ಸಂಘಟನೆ ಮುಖಂಡರಾದ ಕೆ.ಎಲ್ ಅಶೋಕ್ ಆರೋಪಿಸಿದ್ದಾರೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಕಾಡಾನೆ ದಾಳಿ ನಿಯಂತ್ರಣಕ್ಕೆ ಒತ್ತಾಯಿಸಿ ಬಾಳೆಹೊನ್ನೂರು ಬಂದ್
“ಕಾಡಾನೆ ದಾಳಿ ಆಗುತ್ತಿದೆ ನಾವು ಕೂಡ ನಿರಂತರವಾಗಿ ಕೆಲಸ ಮಾಡುತ್ತಿದ್ದೇವೆ. ತಕ್ಷಣ ನಾವು ಆನೆ ಹಿಡಿಯಲು ಆಗುವುದಿಲ್ಲ ಮೇಲಾಧಿಕಾರಿಗಳಿಂದ ಪ್ರತಿಕ್ರಿಯೆ ಬರಬೇಕು ಸಕ್ರೆಬೈಲು ಕಡೆಯಿಂದ ಆನೆ ಕರೆಸಿ ಕಾನೂನು ಪ್ರಕಾರವಾಗಿ ಕಾರ್ಯ ನಿರ್ವಹಿಸಬೇಕಾಗುತ್ತದೆ” ಎಂದು ಕೊಪ್ಪ ತಾಲೂಕಿನ ಆರ್ ಎಫ್ ಒ ರಂಗನಾಥ್ ತಿಳಿಸಿದರು.