ಕೊಪ್ಪ l ಅರಣ್ಯ ಅಧಿಕಾರಿ ಆರ್ ಎಫ್ಒ ರಂಗನಾಥ್ ಉಡಾಫೆ ಮಾತು ಆರೋಪ: ಕೆ ಎಲ್ ಅಶೋಕ್ 

Date:

ಕಾಡಾನೆ ದಾಳಿಯಿಂದ ವಾರದಲ್ಲಿ ಎರಡು ಸಾವಾಗಿದೆ, ಹಾಗೆಯೇ, ಅಕ್ರಮವಾಗಿ ಸಾಗುವಾನಿ ಮರ ಕಡಿದವರಿಗೆ ಏನು ಕ್ರಮ ಜರುಗಿಸಿದ್ದೀರ ಎಂದು ಪ್ರಶ್ನಿಸಿದಕ್ಕೆ ಕೊಪ್ಪ ತಾಲೂಕಿನ ಆರ್ ಎಫ್ ಒ ರಂಗನಾಥ್ ಉಡಾಫೆ ಮಾತುಗಳನ್ನಾಡುತ್ತಾರೆ ಎಂದು ಕರ್ನಾಟಕ ಜನಶಕ್ತಿ ಸಂಘಟನೆಯ ಮುಖಂಡರಾದ ಕೆ ಎಲ್ ಅಶೋಕ್ ಆರೋಪಿಸಿದ್ದಾರೆ.

- Advertisement -

ಮಲೆನಾಡಿನ ಭಾಗದಲ್ಲಿ ನಿರಂತರ ಕಾಡಾನೆ ದಾಳಿಯಿಂದ  ರೈತರು ಬೆಳೆದಿರುವ ಬೆಳೆಗಳು ಹಾಗೆಯೇ, ಜನರ ಪ್ರಾಣ ಹಾನಿಯಾಗುತ್ತಿದೆ. ನಾಲ್ಕು ದಿನದ ಹಿಂದೇ ಅನಿತಾ ಎಂಬ ಕಾರ್ಮಿಕ ಮಹಿಳೆ ಮೃತ ಪಟ್ಟಿದ್ದರು, ಆದರೂ “ಸುತ್ತಮುತ್ತಲಿನ ವಾಸ ಮಾಡುತ್ತಿರುವ ಜನರಿಗೆ ಯಾವ ರಕ್ಷಣೆ ಇಲ್ಲದ ಕಾರಣ ಭಾನುವಾರ ಸಂಜೆ ಸುಬ್ಬರಾಯ ಗೌಡ ಎಂಬ ವ್ಯಕ್ತಿಯನ್ನು ಕಾಡಾನೆ ದಾಳಿ ನಡೆಸಿದ ಪರಿಣಾಮ ವ್ಯಕ್ತಿ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.” ಎಂದು ಈದಿನ.ಕಾಮ್ ಗೆ ಕೆ.ಎಲ್ ಅಶೋಕ್ ಮಾಹಿತಿ ತಿಳಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಉತ್ತರ ಕನ್ನಡ | ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ‘ಅಕ್ಕ...

ಉತ್ತರ ಕನ್ನಡ ಜಿಲ್ಲೆಯಲ್ಲಿ 'ಅಕ್ಕ ಕೆಫೆ' ಯೋಜನೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಗ್ರಾಮೀಣ ಮಹಿಳೆಯರು ಸ್ವಂತ ಉದ್ಯಮ ನಡೆಸಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಮತ್ತು ಉದ್ಯಮಿಗಳಾಗಿ ಹೊರಹೊಮ್ಮಲು ಇದು ದಾರಿಮಾಡಿಕೊಟ್ಟಿದೆ. ಸಂಜೀವಿನಿ ಎನ್‌ಆರ್‌ಎಲ್‌ಎಂ ಯೋಜನೆಯಡಿ...

ಗ್ಯಾನೇಶ್ ಕುಮಾರ್ ವಿರುದ್ಧದ 20 ವರ್ಷಗಳ ಪ್ರಕರಣಕ್ಕೆ ಮರುಜೀವ;...

ಭಾರತದ ಮುಖ್ಯ ಚುನಾವಣಾ ಆಯುಕ್ತ (CEC) ಗ್ಯಾನೇಶ್‌ ಕುಮಾರ್ ವಿರುದ್ಧ 2006ರಲ್ಲಿ ದಾಖಲಾಗಿದ್ದ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣಕ್ಕೆ ಕೇರಳ ಸರ್ಕಾರ ಈಗ ಮರುಜೀವ ನೀಡಿದೆ. ಪ್ರಕರಣವನ್ನು ವಿಜಿಲೆನ್ಸ್ ತನಿಖೆಗೆ ಆದೇಶ ಹೊರಡಿಸಿದೆ....

ನೊಬೆಲ್‌ ಪ್ರಶಸ್ತಿ ಸರಣಿ | ಶಾಸ್ತ್ರೀಯ ಪರಂಪರೆಗೆ ಸಮಕಾಲೀನ...

ಈ ಬಾರಿಯ ಸಾಹಿತ್ಯದ ನೊಬೆಲ್‌ ಪುರಸ್ಕಾರ ಕೆನಡಾದ ಆನ್‌ ಕಾರ್ಸನ್‌ ಅವರ ಮುಡಿಗೇರಿದೆ. ಇವರು ಕವಯತ್ರಿ, ಪ್ರಬಂಧಗಾರ್ತಿ ಹಾಗೂ ಅನುವಾದಕಿ. ಕ್ಲಾಸಿಕಲ್‌ ಗ್ರೀಕ್‌ ಸಾಹಿತ್ಯದ ಪ್ರೇಮಿಯಾದ ಕಾರ್‌ಸನ್‌ ಶಾಸ್ತ್ರೀಯ ಮಾದರಿಯನ್ನು ಸಮಕಾಲೀನ ಸಂದರ್ಭಗಳಲ್ಲಿ...

ಹಾಗೆಯೇ, ಕಳೆದ ವಾರದ ಹಿಂದೇ ಅಕ್ರಮವಾಗಿ ಸಾಗುವಾನಿ ಮರ ಕಡಿದು ಸಾಗಾಟ ಮಾಡಿದ ಆರೋಪಿಗಳನ್ನು ಇನ್ನೂ ಬಂಧಿಸದೆ ಹಲವು ಕಾರಣಗಳನ್ನು ಕೊಟ್ಟು ಅದನ್ನು ಮುಚ್ಚಿ ಹಾಕುವ ಹೊನ್ನರ ನಡೆಯುತ್ತಿದೆ. “ಅದೇ ಬಡವ ಮಾಡಿದರೇ, ತಕ್ಷಣ ಕ್ರಮ ತೆಗೆದುಕೊಂಡು ಬಂಧಿಸುವ ಕೆಲಸ ಆಗುತ್ತಿತ್ತು” ಈ ವಿಚಾರವಾಗಿ ಕೊಪ್ಪ ತಾಲೂಕಿನ ಆರ್ ಎಫ್ ಒ ರಂಗನಾಥ್ ಅವರೊಂದಿಗೆ ಪ್ರಶ್ನಿಸಿದಾಗ ಉಡಾಫೆಯಿಂದ ಮಾತಾಡಿದ್ದಾರೆ ಎಂದು ಕರ್ನಾಟಕ ಜನಶಕ್ತಿ ಸಂಘಟನೆ ಮುಖಂಡರಾದ ಕೆ.ಎಲ್ ಅಶೋಕ್ ಆರೋಪಿಸಿದ್ದಾರೆ.

ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಕಾಡಾನೆ ದಾಳಿ ನಿಯಂತ್ರಣಕ್ಕೆ ಒತ್ತಾಯಿಸಿ ಬಾಳೆಹೊನ್ನೂರು ಬಂದ್

“ಕಾಡಾನೆ ದಾಳಿ ಆಗುತ್ತಿದೆ ನಾವು ಕೂಡ ನಿರಂತರವಾಗಿ ಕೆಲಸ ಮಾಡುತ್ತಿದ್ದೇವೆ. ತಕ್ಷಣ ನಾವು ಆನೆ ಹಿಡಿಯಲು ಆಗುವುದಿಲ್ಲ ಮೇಲಾಧಿಕಾರಿಗಳಿಂದ ಪ್ರತಿಕ್ರಿಯೆ ಬರಬೇಕು ಸಕ್ರೆಬೈಲು ಕಡೆಯಿಂದ ಆನೆ ಕರೆಸಿ ಕಾನೂನು ಪ್ರಕಾರವಾಗಿ ಕಾರ್ಯ ನಿರ್ವಹಿಸಬೇಕಾಗುತ್ತದೆ” ಎಂದು ಕೊಪ್ಪ ತಾಲೂಕಿನ ಆರ್ ಎಫ್ ಒ ರಂಗನಾಥ್ ತಿಳಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೊಪ್ಪಳ | ಬರಗಾಲದಲ್ಲಿ ಸ್ಥಳೀಯರಿಗೆ ಹೆಚ್ಚಿನ ಕೆಲಸ ನೀಡಿ, ವಾರದೊಳಗೆ ಕೂಲಿ ಪಾವತಿಸಿ: ಡಿಸಿಎಂ ಪರಮೇಶ್ವರ

ತೀವ್ರ ಬರಗಾಲವಿರುವ ಕಾರಣ ವಿಬಿ ಜಿ ರಾಮ್‌ಜಿ ಯೋಜನೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ...

ಕಲಬುರಗಿ | ಬೆಣ್ಣೂರ ಬಿ ಗ್ರಾಮಕ್ಕೆ ಪ್ರತ್ಯೇಕ ಬಸ್‌ ಸೌಲಭ್ಯಕ್ಕೆ ವಿದ್ಯಾರ್ಥಿಗಳ ಆಗ್ರಹ

ಕಾಳಗಿ ತಾಲೂಕಿನ ಬೆಣ್ಣೂರ ಬಿ ಗ್ರಾಮಕ್ಕೆ ಸಮರ್ಪಕ ಬಸ್‌ ಸಂಚಾರವಿಲ್ಲದೆ ಕಳೆದ...

ಯಾದಗಿರಿ | ‘ಬೆಂಕಿ ಹಚ್ಚುತ್ತೇನೆ’ ಹೇಳಿಕೆ ಶಾಸಕರ ಘನತೆಗೆ ತಕ್ಕುದಲ್ಲ: ಮಂಜುನಾಥ ಮೇತ್ರಿ

ಅಕ್ರಮ ಮರಳು ಸಾಗಾಟ ಹಾಗೂ ಓವರ್‌ಲೋಡ್ ಟಿಪ್ಪರ್‌ಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸುವುದು...

ಯಾದಗಿರಿ | ಯುವಜನರಲ್ಲಿ ಸಂವಿಧಾನ ಪ್ರಜ್ಞೆ ಬೆಳೆಸಲು ಅ.17ರಿಂದ ತರಬೇತಿ ಶಿಬಿರ

ಯುವಜನರಲ್ಲಿ ಸಂವಿಧಾನಾತ್ಮಕ ಅರಿವು, ಸಾಮಾಜಿಕ ಪ್ರಜ್ಞೆ ಹಾಗೂ ನಾಯಕತ್ವ ಗುಣಗಳನ್ನು ಬೆಳೆಸುವ...