ಕೊಪ್ಪಳದ ಎಐಡಿಎಸ್‌ಒ ಹಾಗೂ ಎಐಡಿವೈಒ ನೇತೃತ್ವದಲ್ಲಿ ನಗರದ ಆಜಾದ್ ವೃತ್ತದ ಬಳಿ ಮಹಾನ್ ಕ್ರಾಂತಿಕಾರಿ ಚಂದ್ರಶೇಖರ್ ಆಜಾದ್ ಅವರ 94ನೇ ಹುತಾತ್ಮ ದಿನಾಚರಣೆಯನ್ನು ಆಚರಿಸಿದರು.
ಎಐಡಿವೈಒ ಜಿಲ್ಲಾ ಕಾರ್ಯದರ್ಶಿ ಶರಣು ಪಾಟೀಲ್ ಮಾತನಾಡಿ, “ಆಜಾದ್‌ರವರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬಂದಿರುವಂತಹ ಮಹಾನ್ ಕ್ರಾಂತಿಕಾರಿಯಾಗಿದ್ದು, ರಾಜಿರಹಿತ ಹೋರಾಟವನ್ನು ಮಾಡುವ ಮೂಲಕ ಸ್ವಾತಂತ್ರ್ಯ ನಂತರ ಭಾರತದಲ್ಲಿ ಸಮಸಮಾಜದ ಕನಸು ಕಂಡಂತಹ ಮಹಾನ್ ಹೋರಾಟಗಾರರಾಗಿದ್ದರು. ಹಲವಾರು ಕ್ರಾಂತಿಕಾರಿ ಸಂಘಟನೆಗಳಲ್ಲಿ ಭಾಗವಹಿಸುವ ಮೂಲಕ ಭಗತ್ ಸಿಂಗ್ ಅವರ ಜೊತೆಗೂಡಿ ಸಾಮಾಜಿಕ ಕ್ರಾಂತಿಯ ಮೂಲಕವಾಗಿ ಜಾತಿ ವ್ಯವಸ್ಥೆ, ಧಾರ್ಮಿಕ ಸಮಸ್ಯೆ, ಆರ್ಥಿಕ ಅಸಮಾನತೆಗಳ ನಿರ್ಮೂಲನೆಗೆ ರಾಜಿ ಇಲ್ಲದೆ ನಿರಂತರ ಹೋರಾಟ ಮಾಡಿರುವ ಮಹಾನ್ ವ್ಯಕ್ತಿ” ಎಂದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ಬೇಸಿಗೆ ಆರಂಭಕ್ಕೂ ಮುನ್ನವೇ ಕಲ್ಪತರು ನಾಡಿನಲ್ಲಿ ಎಳನೀರಿಗೆ ಭಾರೀ ಡಿಮ್ಯಾಂಡ್
ಈ ಸಂದರ್ಭದಲ್ಲಿ ಎಐಡಿವೈಒ ರಾಜ್ಯ ಮುಖಂಡ ಶರಣು ಗಡ್ಡಿ, ಎಐಡಿಎಸ್‌ಒ ಜಿಲ್ಲಾ ಸಂಚಾಲಕ ಗಂಗರಾಜ ಅಳ್ಳಳ್ಳಿ, ಸದಾಶಿವ ಮುನಿರಾಬಾದ್, ಹಿರಿಯರಾದ ಈಶ್ವರಪ್ಪ ದಿನ್ನಿ, ಶಿವಪ್ಪ ಹಡಪದ್, ಮಕ್ಬಲ್ ಕೊಪ್ಪಳ ವಿಜಯಕುಮಾರ್ ಬ್ಯಾಳಿ ಸೇರಿದಂತೆ ಇತರರು ಇದ್ದರು.