ಕೊಪ್ಪಳ | ಮಾನಸಿಕ ಒತ್ತಡ ಮೀರಿ ಮಹಿಳೆ ಜವಾಬ್ದಾರಿ ನಿಭಾಯಿಸಬಲ್ಲಳು: ಶೋಭಾ

Date:

Advertisements

ಇಂದು ಮಹಿಳೆ ಅಬಲೆಯಲ್ಲ. ಒಬ್ಬ ಮಹಿಳೆ ಮಾಡುವ ಕೆಲಸ ನೂರು ಗಂಡಸರ ಕೆಲಸಕ್ಕೆ ಸಮಾನಾಗಿರುತ್ತದೆ. ಮಹಿಳೆಯು ಮಾನಸಿಕ ಒತ್ತಡಗಳನ್ನು ಮೀರಿ ತನ್ನ ಜವಬ್ದಾರಿಗಳನ್ನು ನಿರ್ವಹಿಸುತ್ತಾಳೆ ಎಂದು ಎಐಎಮ್‌ಎಸ್‌ಎಸ್‌‌ನ ರಾಜ್ಯ ಕಾರ್ಯದರ್ಶಿ ಶೋಭಾ ಎಸ್ ಅಭಿಪ್ರಾಯಪಟ್ಟರು.

ಅಂತಾರಾಷ್ಟ್ರೀಯ ಮಹಿಳಾ ದಿನದ ಪ್ರಯುಕ್ತ ತಾಪಂ ಆವರಣದಲ್ಲಿರುವ ಕೃಷಿ ವಿಸ್ತರಣಾ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಕೊಪ್ಪಳ ಜಿಲ್ಲಾ ಮಹಿಳಾ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

“ಸತ್ಯ ಹೇಳುವವರು ಕಡಿಮೆ ಜನ ಇರುತ್ತಾರೆ. ಆದರೆ, ಸಮಾಜ ಬೇಗ ಅದನ್ನು ಒಪ್ಪಿಕೊಳ್ಳಲ್ಳ. ಒಂದು ಕಾಲದಲ್ಲಿ ಭೂಮಿಯೇ ಕೇಂದ್ರ ಅದರ ಸುತ್ತ ಎಲ್ಲಾ ಗ್ರಹಗಳು ಸುತ್ತತ್ತವೆ ಅಂತಿದ್ರು.. ಈಗ ಅದರ ಸತ್ಯ ಗೊತ್ತಾದ ಮೇಲೆ ಸೂರ್ಯ ಕೇಂದ್ರ, ಭೂಮಿ ಮೂರನೇ ಗ್ರಹವಾಗಿ ಅದರ ಸುತ್ತ ಎಲ್ಲಾ ಗ್ರಹಗಳು ಸುತ್ತುತ್ತವೆ ಎಂಬ ಸತ್ಯ ಅರಿವಾಗಿದೆ. ಅದೇ ರೀತಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್‌ ಎಸ್) ಪ್ರತಿ ಹಳ್ಳಿಗೂ ಭೇಟಿ ನೀಡಿ ಮಹಿಳೆಯರಲ್ಲಿ ಸತ್ಯದ ತಿಳಿವು ಹಾಗೂ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ” ಎಂದರು.

Advertisements
WhatsApp Image 2025 03 20 at 9.23.14 AM

ಎಐಎಮ್‌ಎಸ್‌ಎಸ್‌ನ ರಾಜ್ಯ ಸೆಕ್ರೆಟರಿಯಟ್ ಸದಸ್ಯೆ ವಿಜಯಲಕ್ಷ್ಮಿ ಮಾತನಾಡಿ, “ಸಾವಿತ್ರಿ ಬಾಯಿ ಫುಲೆ ಅಂತ ಒಬ್ಬ ಮಹಿಳೆ ಸಮಾಜದ ಮಹಿಳಾ ವರ್ಗವನ್ನು ಜಾಗೃತಗೊಳಿಸಲು ಗಂಡ ಜ್ಯೋತಿಬಾ ಅವರಿಂದ ಸ್ವತಃ ಅಕ್ಷರ ಕಲಿತು ವಿಶೇಷವಾಗಿ ಹೆಣ್ಮಕ್ಕಳಿಗೆ ಓದು-ಬರಹ ಕಲಿಸಿದರು. ಆಗ ಸಾವಿತ್ರಿ ಬಾಯಿ ಪ್ರತಿ ಮನೆಗೆ ಹೋಗಿ ‘ನಿಮ್ಮ ಮನೆಯ ಹೆಣ್ಮಕ್ಕಳನ್ನು ಶಾಲೆಗೆ ಕಳಿಸಿ’ ಎಂದು ಮನೆಮನೆಗೆ ಕೇಳಲು ಹೋದಾಗ ಆವತ್ತು ಅವರಿಗೆ ಆದ ಅವಮಾನ, ನಿಂದನೆ, ನೋವು ಇವತ್ತು ಯಾರೂ ಅನುಭವಿಸಿಲ್ಲ. ಮಕ್ಕಳಿಗೆ ಪಾಠ ಹೇಳಲು ಹೋಗುವಾಗ ಅವರ ಮೈ ಮೇಲೆ ಗಂಜಲು ಎಸೆಯುತ್ತಿದ್ದರು, ಮೈಮೇಲೆ ಎಂಜಲು ಉಗುಳುತ್ತಿದ್ದರು. ಹೀಗೆ ಮಹಿಳೆಯರು ಎಚ್ಚೆತ್ತುಕೊಂಡಾಗಲೆಲ್ಲ ವೈಯಕ್ತಿಕ ನಿಂದನೆ, ಟೀಕೆ, ಅವಮಾನಗಳು ಆಗುತ್ತವೆ. ಆದರೆ, ನಾವು ಮಹಿಳೆಯರು ಜಾಗೃತರಾಗಬೇಕು ಎಚ್ಚೆತ್ತುಕೊಳ್ಳಬೇಕು” ಎಂದು ತಿಳಿಸಿದರು.

ಕೊಪ್ಪಳ ಜಿಲ್ಲಾ ಹೊಸ ಸಂಘಟನಾ ಸಮಿತಿ ರಚನೆಯಾಯಿತು. ಸಮಿತಿಯ ಅಧ್ಯಕ್ಷರಾಗಿ ಮಂಜುಳಾ ಮಜ್ಜಿಗಿ, ಕಾರ್ಯದರ್ಶಿಯಾಗಿ ಶಾರದಾ ಗಡ್ಡಿ, ಜಂಟಿ ಕಾರ್ಯದರ್ಶಿಯಾಗಿ ಹುಸೇನಬೀ, ಕಾರ್ಯಕಾರಿ ಸಮಿತಿಗೆ 10 ಜನ ಸದಸ್ಯರು ಹಾಗೂ ಕೌನ್ಸಿಲ್ ಸಮಿತಿಗೆ 6 ಜನ ಸದಸ್ಯರು ಸೇರಿದಂತೆ ಒಟ್ಟು 19 ಜನರ ಹೊಸ ಸಮಿತಿ ರಚನೆಯಾಯಿತು.

ಇದನ್ನೂ ಓದಿ: ಕೊಪ್ಪಳ | ಕರ್ತವ್ಯ ಲೋಪ ಆರೋಪ : ಆನೆಗೊಂದಿ ಗ್ರಾ.ಪಂ. ಪಿಡಿಒ ಅಮಾನತು

ಸಮಾವೇಶದಲ್ಲಿ ಎಐಎಮ್‌ಎಸ್‌ಎಸ್ ನ ಜಿಲ್ಲಾ ಸಂಘಟಕಿ ಮಂಜುಳಾ ಮಜ್ಜಿಗಿ ಸೇರಿದಂತೆ ವಿವಿಧ ಬಡಾವಣೆ, ಹಳ್ಳಿಯ ಮಹಿಳೆಯರು, ಕಾಲೇಜಿನ ವಿದ್ಯಾರ್ಥಿನಿಯರು ಹಾಗೂ ಇತರರು ಭಾಗವಹಿಸಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X