ಸಂಸತ್ ಸದನದಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಅವರಿಗೆ ಕೇಂದ್ರ ಸಚಿವ ಅಮಿತ್ ಶಾ ಅಪಮಾನ ಮಾಡಿದನ್ನು ಖಂಡಿಸಿ ಜನವರಿ 6ರಂದು “ಸಂವಿಧಾನ ಸಂರಕ್ಷಣಾ ಸಮಿತಿ” ಕೊಪ್ಪಳ ಬಂದ್‌ಗೆ ಕರೆ ನೀಡಿದೆ.
ಕೊಪ್ಪಳ ನಗರದಲ್ಲಿ ಸಂವಿಧಾನ ಸಂರಕ್ಷಣಾ ಸಮಿತಿಯಿಂದ ಪತ್ರಿಕಾಗೋಷ್ಠಿ ನಡೆಸಿದ ಪ್ರಮುಖರು ಮಾತನಾಡಿ, “ಸಂಸತ್ ಅಧಿವೇಶನದಲ್ಲಿ ಸಂವಿಧಾನದ ಕುರಿತು ಚರ್ಚೆ ನಡೆಯುತ್ತಿದ್ದ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ಡಾ ಬಿ ಅರ್ ಅಂಬೇಡ್ಕರ್ ಅವರ ಕುರಿತು ನಕಾರಾತ್ಮಕ ಹೇಳಿಕೆ ನೀಡಿದ್ದು, ಬಾಬಾ ಸಾಹೇಬ್ ಅವರಿಗೆ ಅವಮಾನ ಮಾಡಿದ್ದಾರೆ. ಸಂವಿಧಾನ ಮತ್ತು ದೇಶದ ಜನೆತೆಗೆ ಅವಮಾನ ಮಾಡಿದ್ದರಿಂದ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡಲೇ ತನ್ನ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಸಂಪುಟದಿಂದ ವಜಾಗೊಳಿಸಿ ದೇಶದಿಂದ ಗಡಿಪಾರು ಮಾಡಬೇಕೆಂದು ಆಗ್ರಹಿಸಿ ಕೊಪ್ಪಳ ಬಂದ್‌ಗೆ ಕರೆ ನೀಡಲಾಗಿದೆ” ಎಂದು ಹೇಳಿದರು
“ಕೊಪ್ಪಳದ ಸಂವಿಧಾನ ಸಂರಕ್ಷಣಾ ಸಮಿತಿಯ ಮುಂದಾಳತ್ವದಲ್ಲಿ 2025ರ ಜನವರಿ 6ರ ಸೋಮವಾರದಂದು ಕೊಪ್ಪಳ ಬಂದ್‌ಗೆ ಕರೆ ನೀಡಲಾಗಿದೆ. ಸಂವಿಧಾನ ಸಂರಕ್ಷಣೆ ಸಮಿತಿಗೆ ವಿವಿಧ ಪ್ರಗತಿಪರ ಸಂಘಟನೆಗಳು ಅಹಿಂದ ಮತ್ತು ಅಲ್ಪಸಂಖ್ಯಾತರ ಸಂಘಟನೆಗಳು ಹಾಗೂ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಅನುಯಾಯಿಗಳ ಬೆಂಬಲದೊಂದಿಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಬಾಬಾ ಸಾಹೇಬರು ಈ ದೇಶದಲ್ಲಿ ಶೋಷಣೆಗೆ ಒಳಗಾದ ಜನರಿಗೆ ಬಹುದೊಡ್ಡ ಶಕ್ತಿಯನ್ನು ನೀಡಿದ್ದಾರೆ. ಸಂವಿಧಾನ ರಕ್ಷಿಸಬೇಕಾದ ಗೃಹಮಂತ್ರಿಗಳು ಸಂವಿಧಾನ ಶಿಲ್ಪಿ ಕುರಿತು ಈ ರೀತಿ ಮಾತನಾಡಿರುವುದು ಅಕ್ಷ್ಯಮ್ಯ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜನವರಿ 6ರಂದು ಪ್ರತಿಭಟನಾ ಮೆರವಣಿಗೆ ತಾಲೂಕು ಕ್ರೀಡಾಂಗಣದಿಂದ ಸಾಲಾರ ಜಂಗ್ ರಸ್ತೆ ಮೂಲಕ ಅಂಬೇಡ್ಕರ್ ವೃತ್ತ, ಶಾರದಾ ಟಾಕೀಸ್ ಕ್ರಾಸ್, ಗಡಿಯಾರ ಕಂಬ, ಜವಾಹರ ರಸ್ತೆ ಮೂಲಕ ಅಶೋಕ ಸರ್ಕಲ್‌ಗೆ ಆಗಮಿಸಿ ಮನವಿ ಸಲ್ಲಿಸಲಾಗುವುದು. ಮೆರವಣಿಗೆಯಲ್ಲಿ ಸುಮಾರು 10 ಸಾವಿರದಷ್ಟು ಜನ ಸೇರಬಹುದು” ಎಂದು ಮುಖಂಡರು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಪೊಲೀಸರ ಭರ್ಜರಿ ಕಾರ್ಯಾಚರಣೆ : ₹2.80 ಲಕ್ಷ ಮೌಲ್ಯದ ನಶೆಯುಕ್ತ ವಸ್ತು ಜಪ್ತಿ : ಮೂವರ ಬಂಧನ
ಈ ಸಂದರ್ಭದಲ್ಲಿ ಹನುಮೇಶ ಕಡೆಮನಿ, ಸಲೀಂ ಖಾದ್ರಿ, ಟಿ ರತ್ನಾಕರ, ಅಲ್ಲಮಪ್ರಭು ಬೆಟ್ಟದೂರು, ಕೆ ಎಸ್ ಮೈಲಾರಪ್ಪ ವಕೀಲರು, ಈಶಪ್ಪ, ಕಾಶಪ್ಪ ಚಲವಾದಿ, ರಾಮಣ್ಣ ಚೌಡ್ಮಿ, ಕೆ ಎಸ್ ಮೈಲಾರಪ್ಪ, ಹನುಮೇಶ ಕಡೆಮನಿ, ಸೈಯದ್ ನಾಸಿರ್ ಕಂಟಿ, ಡಿ ಎಚ್ ಪೂಜಾರ, ಸಿದ್ದರಾಮ ಹೊಸಮನಿ, ಆದಿಲ್ ಪಟೇಲ್, ರಾಮಣ್ಣ ಚೌಡಿ, ಪರಶುರಾಮ ಕೆರೆಹಳ್ಳಿ, ಸಾವಿತ್ರಿ ಮುಜುಂದಾರ, ಕಾಶಪ್ಪ ಚಲವಾದಿ, ನಿಂಗಜ್ಜ ಶಹಾಪೂರ, ನಿಂಗಜ್ಜ ಬನಕಾಳ, ಎಸ್ ಎ ಫಫಾರ್, ಸಲೀಂ ಕಾದ್ರಿ, ಸಲೀಂ ಆಳವಂಡಿ, ಎಂ ಗೊಂಡಬಾಳ, ಯಲ್ಲಪ್ಪ ಹಳೇಮನಿ ಇದ್ದರು.