ಕೊಪ್ಪಳದಲ್ಲಿ ಪ್ರೀತಿ ವಿಚಾರಕ್ಕೆ ಸಂಬಂಧಿಸಿ ಕೆಲವು ದಿನಗಳ ಹಿಂದೆ ನಡೆದ ಗವಿಸಿದ್ದಪ್ಪ ನಾಯಕನ ಕೊಲೆ ಖಂಡಿಸಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಜಿಲ್ಲಾ ಘಟಕದಿಂದ ನಗರಾದ್ಯಂತ ಬಂದ್‌ಗೆ ಕರೆ ನೀಡಿದ್ದು, ಬೃಹತ್ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯ ಹಿನ್ನಲೆಯಲ್ಲಿ ಖಾಸಗಿ ಶಾಲೆಗಳ ಒಕ್ಕೂಟ ಶಾಲೆಗಳಿಗೆ ಸ್ವಯಂ ಪ್ರೇರಿತವಾಗಿ ರಜೆ ಘೋಷಿಸಿದೆ. ಕೊಪ್ಪಳ ನಗರವು ಬಹುತೇಕ ಸ್ಥಬ್ಧವಾಗಿದ್ದು, ಕೆಲವು ಕಡೆಗಳಲ್ಲಿ ವರ್ತಕರು ಹೋಟೆಲ್, ವಾಣಿಜ್ಯ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲು ನಿರಾಕರಿಸಿದ ನಡುವೆಯೇ ಪ್ರತಿಭಟನಾಕಾರರು ಬೈಕ್ ರಾಲಿಯಲ್ಲಿ ತೆರಳಿ ಒತ್ತಾಯಪೂರ್ವಕವಾಗಿ ಮುಚಿಸುತ್ತಿರವುದು ಕಂಡುಬಂದಿತು.
ಈ ಸುದ್ದಿ ಓದಿದ್ದೀರಾ? ಗದಗ | ಬಡಮಹಿಳೆ ಮತ್ತು ಮಕ್ಕಳಿಗೆ ವೇದ್ಯಕೀಯ ಸೇವೆ ತ್ವರಿಗತಿಯಲ್ಲಿ ದೊರಕಿಸಿ : ಸಚಿವ ಎಚ್.ಕೆ.ಪಾಟೀಲ
ಕೊಪ್ಪಳ ನಗರದ ಕೆಲವು ಬಡಾವಣೆಗಳಲ್ಲಿ ಮಿಶ್ರಪ್ರತಿಕ್ರಿಯೆ ಕಂಡುಬಂದಿದೆ. ಖಾಸಗಿ ಶಾಲೆಗಳನ್ನು ಹೊರತುಪಡಿಸಿ ಸರ್ಕಾರಿ ಶಾಲೆಗಳು ಮತ್ತು ಕಚೇರಿಗಳು ಕಾರ್ಯನಿರ್ವಹಿಸುತ್ತಿದ್ದು, ಅಧಿಕೃತವಾಗಿ ಯಾವುದೇ ರಜೆ ಘೋಷಣೆ ಮಾಡಲಾಗಿಲ್ಲ.
ನಗರಾದ್ಯಂತ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಜಾಗ್ರತೆ ವಹಿಸಲಾಗಿದೆ.