ಕೊಪ್ಪಳ ಗಂಗಾವತಿಯಲ್ಲಿ ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕದ ವತಿಯಿಂದ ಆಗಸ್ಟ್ 25ರಿಂದ ಸೆಪ್ಟೆಂಬರ್ 15ರವರೆಗೆ ರಾಜ್ಯವ್ಯಾಪಿ ನಡೆಯಲಿರುವ “ಡಿಜಿಟಲ್ ಸ್ವಾತಂತ್ರ್ಯ” ಜಾಗೃತಿ ಅಭಿಯಾನದ ಪೋಸ್ಟರ್ ಅನ್ನು ಗಂಗಾವತಿ ಪೊಲೀಸ್ ಉಪ ವಿಭಾಗದ ಅಧಿಕಾರಿ ಡಿವೈಎಸ್‌ಪಿ ಸಿದ್ದಲಿಂಗಪ್ಪ ಗೌಡರವರು ಡಿಜಿಟಲ್ ಫ್ರೀಡಂ ಅಭಿಯಾನದ ಪೋಸ್ಟರನ್ನು ಬಿಡುಗಡೆ ಮಾಡಿದರು.
ಅಭಿಯಾನದ ಉದ್ದೇಶ ಯುವಕರಿಗೆ ಉತ್ತರದಾಯಕ ಡಿಜಿಟಲ್ ಬಳಕೆ, ಗೌಪ್ಯತೆ ಕಾಪಾಡುವುದು, ತಪ್ಪುಮಾಹಿತಿ ತಡೆಗಟ್ಟುವುದು ಮತ್ತು ಸಮಾನ ಡಿಜಿಟಲ್ ಅವಕಾಶಗಳನ್ನು ಒದಗಿಸುವುದು ಎಂಬ ವಿಷಯಗಳಲ್ಲಿ ಜಾಗೃತಿ ಮೂಡಿಸುವುದಾಗಿದೆ.
ಗಂಗಾವತಿ ವಿಭಾಗದ ಡಿವಾಯ್‌ಎಸ್‌ಪಿ ಸಿದ್ಧಲಿಂಗಪ್ಪ ಗೌಡ ಮಾತನಾಡಿ, “ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕದ ಉತ್ತಮವಾದ ಕೆಲಸ ಮಾಡುತ್ತಿದೆ. ಜನರ ಜಾಗೃತಿ ಮೂಡಿಸುವ ಕೆಲಸ ಹೆಚ್ವು ಮಾಡುತ್ತಿದೆ ಅವರ ಎಲ್ಲ ಸಕಾರಾತ್ಮಕ ಚಟುವಟಿಕೆಗಳಿಗೆ ಯಶಸ್ಸು ಸಿಗಲಿ” ಎಂದು ಹಾರೈಸಿ ಪೋಸ್ಟರ್ ಅನ್ನು ಬಿಡುಗಡೆ ಮಾಡಿ, ಅಭಿಯಾನಕ್ಕೆ ಬೆಂಬಲ ನೀಡಿದರು.
ಇದನ್ನು ಓದಿದ್ದೀರಾ? ಧರ್ಮಸ್ಥಳ ಪ್ರಕರಣ | ತಿಮರೋಡಿ, ಮೋಹನ್ ಶೆಟ್ಟಿ ಮನೆಯಲ್ಲಿ ಶೋಧ: ಹಲವು ವಸ್ತು ವಶಕ್ಕೆ ಪಡೆದ ಎಸ್ಐಟಿ
ಸೋಲಿಡಾರಿಟಿ ಯೂತ್ ಮೂವ್‌ಮೆಂಟ್ ಕೊಪ್ಪಳ ಜಿಲ್ಲಾಧ್ಯಕ್ಷ ನಾಸಿರ್ ಅಹಮದ್, ತಾಲೂಕು ಅಧ್ಯಕ್ಷರಾದ ರಾಜ, ಸೋಲಿಡಾರಿಟಿ ಯೂತ್ ಮೂವ್‌ಮೆಂಟ್ ಗಂಗಾವತಿಯ ಕಾರ್ಯಕರ್ತರಾದ ಆಸೀಫ್, ಅಮನ್, ಇಸ್ಮಾಯಿಲ್, ರಾಜಾವಲಿ, ಮೆಹಬೂಬ್ ಹಾಗೂ ಇತರರು ಉಪಸ್ಥಿತರಿದ್ದರು.
