ಕೊಪ್ಪಳ | ವಿಶ್ವವಿದ್ಯಾಲಯ ಸ್ಥಳಾಂತರಿಸಲು ಜಿಲ್ಲಾ ಬಚಾವೋ ಆಂದೋಲನ ಆಗ್ರಹ

Date:

Advertisements

ತಳಕಲ್ಲಿನ ಇಂಜಿನಿಯರಿಂಗ್ ಕಾಲೇಜಿನ ಎರಡನೆಯ ಅಂತಸ್ತಿನಲ್ಲಿ ನಡೆಯುತ್ತಿರುವ ಕೊಪ್ಪಳ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಹೋಟೆಲ್, ಹಾಸ್ಟೆಲ್ ಹಾಗೂ ಬಸ್ ನಿಲುಗಡೆ ಸೌಕರ್ಯ ಇರುವುದಿಲ್ಲ ಹಾಗಾಗಿ ಕೂಡಲೇ ವಿವಿ ಸ್ಥಳಾಂತರಕ್ಕೆ ಕ್ರಮಕೈಗೊಳ್ಳಬೇಕು ಎಂದು ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಆಗ್ರಹಿಸಿದೆ.

ವಿಶ್ವವಿದ್ಯಾಲಯವನ್ನು ತಳಕಲ್ಲಿನಿಂದ ಕೊಪ್ಪಳಕ್ಕೆ ಸ್ಥಳಾಂತರಿಸುವ ಅದಕ್ಕೆ ಮೂಲಭೂತ ಸೌಲಭ್ಯ ಒದಗಿಸುವಂತೆ ಹಾಗೂ ಬಲ್ಡೊಟ್ ಕಂಪನಿ ವಿಸ್ತರಣೆ ಆಗದಂತೆ ಸರಕಾರ ಕ್ರಮ ವಹಿಸಬೇಕೆಂದು ಜಿಲ್ಲಾ ಪ್ರವಾಸಿ ಮಂದಿರದಲ್ಲಿ ಮಾನವ ಬಂಧುತ್ವ ವೇದಿಕೆ, ಜಿಲ್ಲಾ ಶಿಕ್ಷಣ ಪ್ರೇಮಿಗಳ ಸಂಘಟನೆ ಹಾಗೂ ಜಿಲ್ಲಾ ಬಚಾವೋ ಆಂದೋಲನ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಅವರಿ ಮನವಿ ಸಲ್ಲಿಸಿ ಒತ್ತಾಯಿಸಿದರು.

ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, “ಕೊಪ್ಪಳದ ತಾಲೂಕ ದವಾಖಾನೆಯಲ್ಲಿ ಸ್ನಾತಕೋತ್ತರ ಕೇಂದ್ರ ನಡೆಯುತ್ತಿದ್ದಾಗ ಸಮೀಪದಲ್ಲಿ ಇಂದಿರಾ ಕ್ಯಾಂಟೀನ್ ಇತ್ತು. ವಿದ್ಯಾರ್ಥಿ–ವಿದ್ಯಾರ್ಥಿನಿಯರು ಆ ಕ್ಯಾಂಟೀನ್ ಸದ್ಭಳಿಸಿಕೊಮಡಿದ್ದರು. ಯಾವ ಸೂಚನೆಯೂ ಇಲ್ಲದೆ ವಿವಿ ಸ್ಥಳಾಂತರಿಸಿದರು. ಮೂಲ ಸೌಕರ್ಯದ ಕೊರತೆಯಿಂದ ಉನ್ನತ ಶಿಕ್ಷಣ ಪಡೆಯಲು ಪದವಿ ಆಕಾಂಕ್ಷಿಗಳಿಗೆ ತೊಂದರೆಯಾಗಿದೆ” ಎಂದು ಕಳವಳ ವ್ಯಕ್ತಪಡಿಸಿದರು.

Advertisements

ಜಿಲ್ಲಾ ಬಚಾವೋ ಆಂದೋಲನದ ಸಂಚಾಲಕ ಡಿ.ಎಚ್.ಪೂಜಾರ ಮಾತನಾಡಿ, “ಕೊಪ್ಪಳದ ಸರ್ಕಾರಿ ಪದವಿ ಕಾಲೇಜಿನ ವಿಸ್ತರಣಾ ಕಟ್ಟಡ ಬೈಪಾಸ್ ರಸ್ತೆಯ ಸಮೀಪದಲ್ಲಿದ್ದು ಅಲ್ಲಿಗೆ ವಿಶ್ವವಿದ್ಯಾಲಯವನ್ನು ಸ್ಥಳಾಂತರಿಸಬಹುದು. ಶಾಸಕರು, ಸಂಸದರು ಹಾಗೂ ಮುಖ್ಯಮಂತ್ರಿಗಳ ಸಲಹೆಗಾರ ಶಾಸಕರು ಸ್ಥಳಾಂತರಕ್ಕೆ ‘ಆಕ್ಷೇಪ ಇಲ್ಲ’ ಎಂದು ಹೇಳಿದ್ದರು. ಆದರೂ, ವಿವಿ ಸ್ಥಳಾಂತರಕ್ಕೆ ವಿಳಂಭ ಯಾಕೆ? ಕೊಪ್ಪಳ ಜಿಲ್ಲಾ ಅಭಿವೃದ್ಧಿ ಜವಾಬ್ದಾರಿಯಿಂದ ಜನಪ್ರತಿನಿಧಿಗಳು ನುಣುಚಿಕೊಳ್ಳುತ್ತಿದೆಯೇ? ಶೈಕ್ಷಣಿಕ ಈ ವರ್ಷದಲ್ಲೇ ವಿವಿ ಸ್ಥಳಾಂತರಿಸಬೇಕು; ಇಲ್ಲದಿದ್ದರೆ ವಿದ್ಯಾರ್ಥಿಗಳೊಂದಿಗೆ ಸರಕಾರದ ವಿರುದ್ದ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗುವುದು” ಎಂದು ಆಗ್ರಹಿಸಿದರು.

ಇದನ್ನೂ ಓದಿ: ಕೊಪ್ಪಳ | ಕಚೇರಿ ವೇಳೆ ಬದಲಾದರೂ ಬದಲಾಗದ ನೌಕರರು

ಕೆ.ಬಿ.ಗೋನಾಳ ಮಾತನಾಡಿ, “ಬಿಎಸ್‌ಪಿಎಲ್ ವಿಸ್ತರಿಸದಂತೆ ಮುಖ್ಯಮಂತ್ರಿಗಳಿಂದ ಪತ್ರವನ್ನು ತರಬೇಕಾದ ಜವಾಬ್ದಾರಿ ಕೊಪ್ಪಳ ಜಿಲ್ಲೆಯ ಜನಪ್ರತಿನಿಧಿಗಳ ಮೇಲಿದೆ. ನಾವು ಚುನಾವಣೆಯಲ್ಲಿ ಕೋಮುವಾದವನ್ನು ವಿರೋಧಿಸಿ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಪ್ರಚಾರ ಮಾಡಿದ್ದನ್ನು ನೆನಪಿಸುತ್ತೆವೆ. ಎಮ್‌ಎಸ್‌ಪಿಎಲ್‌ ಕಂಪನಿ ಬಸಾಪುರದ ಸಾರ್ವಜನಿಕ ಕೆರೆ ಅತಿಕ್ರಮಿಸಿಕೊಂಡಿದೆ ಇದರ ಬಗ್ಗೆ ಸರಕಾರ ಕ್ರಮ ಜರುಗಿಸಬೇಕು” ಎಂದು ಒತ್ತಾಯಿಸಿದರು.

ಮುದಕಪ್ಪ ಹೊಸಮನಿ, ಮಂಜುನಾಥ ಗೊಂಡಬಾಳ, ಬಸವರಾಜ್ ಶೀಲವಮತರ, ಶರಣು ಗಡ್ಡಿ, ಶರಣು‌ ಪಾಟೀಲ್, ಸರಣು ಶೆಟ್ಟರ, ಮಂಗಳೇಶ ರಾಟೋಡ್, ಕಾಶ್ಯಪ್ಪ ಛಲವಾದಿ, ಮಂಜುನಾಥ ಕೊತಬಾಳ, ಈಸ್ವರ ಹತ್ತಿ ಹಾಗೂ ಇತರರಿದ್ದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

ಚಿಕ್ಕಮಗಳೂರು l ತೆಂಗಿನಕಾಯಿ ಕಳ್ಳತನ ಆರೋಪ: ವ್ಯಕ್ತಿಯ ಹತ್ಯೆ; ಆರೋಪಿಗಳ ಬಂಧನ

ತೆಂಗಿನಕಾಯಿ ಕಳ್ಳತನ ಮಾಡಿದ್ದಾನೆ ಎಂಬ ಕಾರಣಕ್ಕೆ ವ್ಯಕ್ತಿಯನ್ನು ಹತ್ಯೆ ಮಾಡಿರುವ ಘಟನೆ...

ಗದಗ | ಒಳಮೀಸಲಾತಿ ಅಂಗೀಕಾರ ಸ್ವಾಗತಾರ್ಹ: ಬಸವರಾಜ ಕಡೇಮನಿ

"ಒಳಮೀಸಲಾತಿ ಜಾರಿಗಾಗಿ ಒತ್ತಾಯಿಸಿ ಮೂವತ್ತೈದು ವರ್ಷಗಳ ನಿರಂತರ ಹೋರಾಟದ ಫಲದಿಂದ ರಾಜ್ಯ...

Download Eedina App Android / iOS

X