ಈ ಬಾರಿ ಜಿ.ಪಂ, ತಾ.ಪಂ ಚುನಾವಣೆ ಘೋಷಣೆ ಮಾಡುವ ಸಾಧ್ಯತೆ ಇರುವುದರಿಂದ ಚುನಾವಣೆ ನೀತಿ ಸಂಹಿತೆ ಜಾರಿಯಾದರೆ ಅದ್ದೂರಿಯಾಗಿ ಡಾ ಬಿ ಆರ್ ಅಂಬೇಡ್ಕರ್ ಜಯಂತಿ ಆಚರಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ಏಪ್ರಿಲ್ 14ರಂದು ಅಂಬೇಡ್ಕರ್ ಜಯಂತಿ ಮುಗಿದ ಬಳಿಕ ಚುನಾವಣೆ ಘೋಷಣೆ ಮಾಡಿ ಎಂದು ಭಾರತೀಯ ಭೀಮಾ ಸೇನಾ ಜಿಲ್ಲಾಧ್ಯಕ್ಷ ಕಾಶ್ಯಪ್ಪ ಛಲವಾದಿ ಆಗ್ರಹಿಸಿದರು.
ಕೊಪ್ಪಳ ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, “ಪ್ರತಿವರ್ಷ ಡಾ. ಬಿ ಆರ್ ಅಂಬೇಡ್ಕರ್ ಜಯಂತಿ ಸಮಯದಲ್ಲೇ ಚುನಾವಣೆಗಳು ಘೋಷಣೆಯಾಗುತ್ತಿದ್ದು, ಚುನಾವಣೆ ನೀತಿ ಸಂಹಿತೆ ಇರುತ್ತಿದ್ದುದರಿಂದ ರಾಜ್ಯ ಸರ್ಕಾರ, ಜಿಲ್ಲಾಡಳಿತ, ತಾಲೂಕು ಆಡಳಿತ, ಇಲಾಖೆಗಳಿಂದ ಅದ್ದೂರಿಯಾಗಿ ಅಂಬೇಡ್ಕರ್ ಜಯಂತಿ ಆಚರಿಸಲು ಸಾಧ್ಯಾವಾಗುತ್ತಿಲ್ಲ. ಹಾಗಾಗಿ ಬುದ್ಧ, ಬಸವ, ಅಂಬೇಡ್ಕರ್ ಅವರ ಅನುಯಾಯಿಗಳು ಅದ್ದೂರಿಯಾಗಿ ಅಂಬೇಡ್ಕರ್ ಜಯಂತಿ ಆಚರಣೆ ಮಾಡಲು ಆಶಾಭಾವುಕರಾಗಿದ್ದರೂ ಸಹಿತ ಕಳೆದ ಮೂರು ವರ್ಷಗಳ ಹಿಂದೆ 2019-20ನೇ ವರ್ಷ ಮಹಾಮಾರಿ ಕೋವಿಡ್ 19 ರೋಗ ಬಂದು 2ವರ್ಷ ಅಂಬೇಡ್ಕರ್ ಅವರ ಜಯಂತಿ ಆಚರಣೆ ಮಾಡಲಿಲ್ಲ” ಎಂದರು.
ಈ ಸುದ್ದಿ ಓದಿದ್ದೀರಾ? ಚಾಮರಾಜನಗರ | ಎಸ್ಸಿಎಸ್ಪಿ, ಟಿಎಸ್ಪಿ ಹಣ ಗ್ಯಾರೆಂಟಿ ಯೋಜನೆಗಳಿಗೆ ಬಳಕೆ ಖಂಡಿಸಿ ದಸಂಸದಿಂದ ರಸ್ತೆತಡೆ
“2020ರ ನಂತರ ವಿಧಾನಸಭಾ ಚುನಾವಣೆಗಳು ಬಂದವು. ಇದೇ ರೀತಿ ಮುಂಬರುವ ಈ ಬಾರಿ ಜಿಪಂ, ತಾಪಂ, ಚುನಾವಣೆ ಬರುತ್ತವೆ. ಹಾಗಾಗಿ ಅಂಬೇಡ್ಕರ್ ಜಯಂತಿ ಮುಗಿಯುವವರೆಗೂ ಚುನಾವಣೆ ಘೋಷಣೆ ಮಾಡದಂತೆ ಸಿಎಂ ಸಿದ್ದರಾಮಯ್ಯನವರು ಕ್ರಮಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕೆ ಬಿ ಗೋನಾಳ, ಮುದಕಪ್ಪ, ಎಂ ಹೊಸಮನಿ, ಕಿರಣ ಬಂಗಾಳಿಗಿಡದ ಸೇರಿದಂತೆ ಇತರರು ಇದ್ದರು.