ಗಣಪತಿ ವಿಸರ್ಜನಾ ಮೆರವಣಿಗೆ ಸಮಯದಲ್ಲಿ ಡಿಜೆ ಸೌಂಡ್‌ಗೆ ಡ್ಯಾನ್ಸ್ ಮಾಡುತ್ತಿದ್ದ ಯುವಕನೋರ್ವ ಕುಸಿದುಬಿದ್ದು ಮೃತಪಟ್ಟಿರುವ ಘಟನೆ ಕೊಪ್ಪಳ ಜಿಲ್ಲೆ ಗಂಗಾವತಿಯ ಪ್ರಶಾಂತ ನಗರದಲ್ಲಿ ನಡೆದಿದೆ.
ಪ್ರಶಾಂತ ನಗರದ ಈಶ್ವರ ಗಜಾನನ ಯುವಕ ಮಂಡಳಿಯು ಗಣೇಶ ವಿಸರ್ಜನೆ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಮಹಾರಾಷ್ಟ್ರದ ಪೂನಾದಿಂದ ಡಿಜೆ ಸೌಂಡ್ ಸಿಸ್ಟಮ್‌ಗಳನ್ನು ತರಲಾಗಿತ್ತು ಎಂದು ತಿಳಿದುಬಂದಿದೆ.
ಸುಕೋ ಬ್ಯಾಂಕ್ ಬಳಿ ಬರುತ್ತಿದ್ದಂತೆ ಈ ಅವಘಡ ಸಂಭವಿಸಿದೆ. ಡಿಜೆ ಸೌಂಡ್‌ಗೆ ಡ್ಯಾನ್ಸ್ ಮಾಡುತ್ತಿದ್ದ ಪ್ರಶಾಂತ ನಗರದ ಯುವಕ ಸುದೀಪ್ ಸಜ್ಜನ (23) ಪ್ರಜ್ಷೆತಪ್ಪಿ ಕುಸಿದು ಬಿದ್ದು ಅಸ್ವಸ್ಥರಾಗುತ್ತಾರೆ. ಬಳಿಕ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ನಿಧನರಾಗಿದ್ದಾರೆಂದು ಸ್ಥಳೀಯ ಮಾಹಿತಿ ತಿಳಿದುಬಂದಿದೆ.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಕೂಲಿ ಕಾರ್ಮಿಕರಿಗೆ ಉಚಿತ್ ಬಸ್ ಪಾಸ್ ನೀಡುವಂತೆ ಒತ್ತಾಯ
ಗಂಗಾವತಿ ನಗರದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಘಟನೆಯ ನಂತರ ಪೊಲೀಸರು ಡಿಜೆ ನಿಲ್ಲಿಸಿ ಗಣೇಶನ ಮೆರವಣಿಗೆಯನ್ನು ಮುಂದೆ ಸಾಗಿಸಿದರು.