ಕೊಪ್ಪಳ ತಾಲೂಕಿನ ಅಳವಂಡಿ ಗ್ರಾಮದಲ್ಲಿ ಹಿಂದೂ-ಮುಸ್ಲಿಮ್ ಗೆಳೆಯರು ಸೇರಿ ವಿಜಯ ಗಣಪತಿ ಮಂದಿರದಲ್ಲಿ ಗಣಪತಿ ಮೂರ್ತಿಗೆ ವಿಶೇಷ ಪೂಜೆ ಹಾಗೂ ಅಭಿಷೇಕ ಮಾಡಿಸಿ ಭಾವೈಕ್ಯ ತೋರಿದರು.
ಅಳವಂಡಿ ಗ್ರಾಮದಲ್ಲಿ ಗಣೇಶ ಚತುರ್ಥಿ ಅಂಗವಾಗಿ ದೇವಸ್ಥಾನದ ಗಣೇಶ ಮೂರ್ತಿಗೆ ವಿಶೇಷ ಪೂಜೆ ಹಾಗೂ ಅಭಿಷೇಕ ನಡೆದ ನಂತರ ಎರಡೂ ಸಮುದಾಯದ ಗೆಳೆಯರ ಬಳಗದ ವತಿಯಿಂದ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಮಾಡಿದರು.
ಪ್ರತಿ ವರ್ಷವೂ ಹಿಂದು-ಮುಸ್ಲಿಮ್ ಗೆಳೆಯರು ಸೇರಿ ಗಣೇಶ ದೇವಸ್ಥಾನಕ್ಕೆ ತಳಿರು-ತೋರಣಗಳಿಂದ ಅಲಂಕಾರಿಸಿ ದೇವಸ್ಥಾನದಲ್ಲಿ ಗಣೇಶ ಚತುರ್ಥಿ ಭಾವೈಕ್ಯತೆಯಿಂದ ಆಚರಿಸುತ್ತಾರೆ.
ಇದನ್ನು ಓದಿದ್ದೀರಾ? ಚಿಂತಾಮಣಿ | ಆರು ತಿಂಗಳ ಹಿಂದೆಯೇ ಚಾಲನೆ ಸಿಕ್ಕರೂ ಆಮೆಗತಿಯಲ್ಲಿ ಸಾಗುತ್ತಿರುವ ಚೇಳೂರು ರಸ್ತೆ ಕಾಮಗಾರಿ!
ಗಣೇಶ ದೇವಸ್ಥಾನವನ್ನು ತಳಿರು ತೋರಣಗಳಿಂದ ಅಲಂಕರಿಸುತ್ತಾರೆ. ಗೆಳೆಯರ ಬಳಗದಲ್ಲಿ ಹಿಂದೂ – ಮುಸ್ಲಿಂ ಎರಡು ಸಮಾಜದ ಸದಸ್ಯರಿದ್ದಾರೆ. ಇಲ್ಲಿ ಯಾವುದೇ ಕೋಮು ಸಂಘರ್ಷವಿಲ್ಲ ಎಂದು ಸ್ಥಳೀಯರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
