ಬೈಕ್‌ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನಲ್ಲಿ ತೆರಳುತ್ತಿದ್ದ ಮಹಿಳೆ ಮತ್ತು ಮಗು ಸ್ಥಳದಲ್ಲೇ ಸಾವಿಗೀಡಾಗಿರುವ ಘಟನೆ ಸೋಮವಾರ ಕುಷ್ಟಗಿ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಕುಷ್ಟಗಿ ತಾಲ್ಲೂಕಿನ ತಳುವಗೇರಾ ಗ್ರಾಮದ ನಿವಾಸಿ ಚೈತ್ರಾ ಪ್ರಭು ಗಡಾದ (35) ಮತ್ತು ಮಗು ಪ್ರಮೋದ ಗಡಾದ(4) ಮೃತರು ಎಂದು ತಿಳಿದು ಬಂದಿದೆ.
ಬೈಕ್ ಚಲಾಯಿಸುತ್ತಿದ್ದ ಮಂಜುನಾಥ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಮಂಜುನಾಥ ಅವರು ಹೆಂಡತಿ, ಮಗು ಸೇರಿ ಮೂವರು ಬೈಕ್ ಮೇಲೆ ತಮ್ಮ ಊರು ಗಂಗಾವತಿ ತಾಲ್ಲೂಕು ವೆಂಕಟಾಪುರಕ್ಕೆ ತೆರಳುತ್ತಿದ್ದರು. ಈ ವೇಳೆ ತಮಿಳುನಾಡಿನ ಕಡೆಗೆ ತೆರಳುತ್ತಿದ್ದ ರಾಜಸ್ಥಾನ ಮೂಲದ ಲಾರಿ ಹಿಂದಿನಿಂದ ಬಂದು ಡಿಕ್ಕಿ ಹೊಡೆದಿದೆ. ಮೃತ ಮಗು ತಾಯಿ ಕಂಕುಳಲ್ಲೇ ಇದ್ದದ್ದು ನೆರೆದವರ ಕಣ್ಣಂಚನ್ನು ತೇವಗೊಳಿಸಿತ್ತು.
ಲಾರಿ ಚಾಲಕ ರಮೇಶ ಸತ್ಯವೇಲು ಹಾಗೂ ಬೈಕ್‌ಚಾಲಕ ಮಂಜುನಾಥ ಅವರನ್ನು ವಶಕ್ಕೆ ಪಡೆಯಲಾಗಿದೆ. ಸಿಪಿಐ ಯಶವಂತ ಬಿಸನಳ್ಳಿ, ಪಿಎಸ್‌ಐ ಹನುಮಂತಪ್ಪ ತಳವಾರ ಸ್ಥಳಕ್ಕೆ ಭೇಟಿ ನೀಡಿದ್ದರು. ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಕಲಬುರಗಿ | ಪತ್ನಿ ಕೊಂದ ಪತಿಗೆ ಜೀವಾವಧಿ ಶಿಕ್ಷೆ; ₹50 ಸಾವಿರ ದಂಡ