ಎರಡು ದಿನಗಳ ಹಿಂದೆ ತುಂಗಭದ್ರಾ ಎಡದಂಡೆ ಕಾಲುವೆಗೆ ಹಾರಿದ್ದ ಪ್ರೇಮಿಗಳಿಬ್ಬರು ಶವವಾಗಿ ಪತ್ತೆಯಾಗಿದ್ದಾರೆ.
ಗಂಗಾವತಿ ತಾಲೂಕಿನ ಸಾಣಾಪುರದ ಅಂಜಲಿ (18) ಹಾಗೂ ಕೊಪ್ಪಳ ತಾಲೂಕಿನ ಹೊಸಲಿಂಗಾಪುರದ ಪ್ರವೀಣ (18) ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಮೃತದೇಹಗಳು ಇಂದು ಶಿವಪುರದ ಕೆರೆ ಬೋರಕಾ ವಿದ್ಯುತ್ ಉತ್ಪಾದನಾ ಕೇಂದ್ರದ ಬಳಿ ಪತ್ತೆಯಾಗಿವೆ.
ಪ್ರೇಮಿಗಳು ಮದುವೆಯಾಗಿ ಹೊಸ ಜೀವನ ಕಟ್ಟಿಕೊಳ್ಳಲು ಜೊತೆಯಾಗಿ ಊರು ತೊರೆದಿದ್ದರು. ಪ್ರವೀಣನ ತಾಯಿ ಮಗನ ಮನವೊಲಿಸಿ ಮರಳಿ ಕರೆತರಲು ಕಾರು ಕಳುಹಿಸಿದ್ದರು. ಊರಿಗೆ ವಾಪಸ್ ಬರುತ್ತಿದ್ದಾಗ ಮಾರ್ಗ ಮಧ್ಯದಲ್ಲಿ ಪ್ರೇಮಿಗಳಿಬ್ಬರೂ ಶೌಚಾಲಯಕ್ಕೆ ಹೋಗಿ ಬರುವುದಾಗಿ ಕಾರು ಚಾಲಕನಿಗೆ ತಿಳಿಸಿ ಕಾಲುವೆಗೆ ಹಾರಿದ್ದರು.
ಯುವತಿ ಧರಿಸಿದ್ದ ವೇಲನ್ನು ಇಬ್ಬರೂ ಕೈಗೆ ಕಟ್ಟಿಕೊಂಡ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಕೊಪ್ಪಳ | ಪ್ರೀತಿಗೆ ಪೋಷಕರ ವಿರೋಧ : ಕಾಲುವೆಗೆ ಹಾರಿ ಪ್ರೇಮಿಗಳ ಆತ್ಮಹತ್ಯೆ
ಎರಡು ದಿನಗಳಿಂದ ಪೊಲೀಸರು, ಅಗ್ನಿಶಾಮಕ ದಳ ಸಿಬ್ಬಂದಿ ಶೋಧ ಕಾರ್ಯ ನಡೆಸಿದ್ದರು. ಈ ಕುರಿತು ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.