ಕುಕನೂರ ತಾಲ್ಲೂಕಿನ ಬಿನ್ನಾಳ ಗ್ರಾಮದ ನಿವಾಸಿ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಹಾದೇವಿ ಕಳಕಪ್ಪ ಕಂಬಳಿ ಎಂಬುವವರು 42ನೇ ವಯಸ್ಸಿನಲ್ಲಿ ಮಗಳೊಂದಿಗೆ ಪಿಯು ಪರೀಕ್ಷೆ ಬರೆದು ಪಾಸಾಗಿದ್ದಾರೆ.
ಪ್ರಸಕ್ತ ಸಾಲಿನ ದ್ವಿತೀಯ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಮಹಾದೇವಿ ಅವರು ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ 472 (ಶೇ 78.66) ಅಂಕ ಪಡೆದು ಗಮನ ಸೆಳೆದಿದ್ದಾರೆ.
ಮಹಾದೇವಿ ಕಳಕಪ್ಪ ಅವರಿಗೆ ನಾಲ್ವರು ಮಕ್ಕಳಿದ್ದು, ಮಗಳು ಎಂಜಿನಿಯರಿಂಗ್, ಎಲ್‌ಎಲ್‌ಬಿ ಓದುತ್ತಿದ್ದು, ಮತ್ತೊಬ್ಬ ಮಗ ಪದವಿ ಓದುತ್ತಿದ್ದು, ದ್ವಿತೀಯ ಪಿಯುಸಿ ಕಲಿಯುತ್ತಿದ್ದ ಕೊನೆಯ ಮಗಳ ಜತೆ ತಾಯಿ ಕೂಡ ಪರೀಕ್ಷೆ ಬರೆದು ಉತ್ತೀರ್ಣರಾಗಿದ್ದಾರೆ.
20 ವರ್ಷದ ಬಳಿಕ ಪಿಯುಸಿ ಪರೀಕ್ಷೆ ಬರೆದು ಉತ್ತೀರ್ಣಳಾಗಿದ್ದು, ಮಕ್ಕಳ ಒತ್ತಾಯದ ಮೇರೆಗೆ ಖಾಸಗಿ ಅಭ್ಯರ್ಥಿಯಾಗಿ ಪರೀಕ್ಷೆ ಬರೆದು ಪಾಸಾಗಿದ್ದೇನೆ ಎಂದು ಮಹಾದೇವಿ ಕಳಕಪ್ಪ ಅವರು ತಿಳಿಸಿದರು.