ನೀರಲ್ಲಿ ಮುಳುಗಿಸಿ ಬಾಲಕನ ಹತ್ಯೆಗೈದ ಘಟನೆ ಸಂಬಂಧ ಕುಕನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡಿವೈಎಸ್‌ಪಿ ಶರಣಬಸಪ್ಪ ಸುಬೇದಾರ್ ನೇತೃತ್ವದಲ್ಲಿ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಪ್ಪಳ ಜಿಲ್ಲೆ ಕುಕನೂರು ಸಮೀಪದ ಗೊರಲೇಕೊಪ್ಪಯ ಬಾವಿಯಲ್ಲಿ ಕಳೆದ ಭಾನುವಾರ ಸ್ನೇಹಿತರೊಂದಿಗೆ ಈಜಲು ಹೋದ ಪ್ರಜ್ವಲ್(15) ಎಂಬ ಬಾಲಕ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದನು. ಮೊದಲಿಗೆ ಇದು ಸಹಜ ಸಾವು ಎಂದು ಹೇಳಲಾಗಿತ್ತು. ಕುಟುಂಬಸ್ಥರು ಮೃತ ಬಾಲಕನ ಸ್ನೇಹಿತರನ್ನು ವಿಚಾರಿಸಿದಾಗ ಇದು ಉದ್ದೇಶಪೂರ್ವಕವಾಗಿ ಹತ್ಯೆ ಮಾಡಿರುವುದೆಂದು ತಿಳಿದುಬಂದಿತ್ತು.
ಕೊಲೆ ಆರೋಪಿ ಶಂಕರಪ್ಪ ಈರಪ್ಪ ಈಬೇರಿ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಪ್ರಕರಣ ದಾಖಲಿಸಿ ಹೆಚ್ಚಿನ ತನಿಖೆ ಕೈಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮೈಸೂರು | ಅಜ್ಜಿಯನ್ನು ಕೊಂದು ‘ಮಿಸ್ಸಿಂಗ್ ಕಂಪ್ಲೇಂಟ್’ ನೀಡಿದ ಮೊಮ್ಮಗ; ತನಿಖೆ ಬಳಿಕ ಸತ್ಯ ಬಯಲು
ಈಗಾಗಲೇ ಆರೋಪಿ ಶಂಕರಪ್ಪ ಈಬೇರಿ ಎಂಬಾತನನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ದಲಿತ ದೌರ್ಜನ್ಯ ಅಡಿಯಲ್ಲಿ ಕುಕನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಡಿವೈಎಸ್‌ಪಿ ಶರಣಬಸಪ್ಪ ಅವರ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.