ಕೊಪ್ಪಳ ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿನಲ್ಲಿ ಕಡಲೆಕಾಳು ಉತ್ಪನ್ನ ಖರೀದಿಸುವ ಸಂಬಂಧ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಕಡಲೆಕಾಳು ಖರೀದಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ ಎಂದು ಕೃಷಿ ಮಾರಾಟ ಇಲಾಖೆ ಸಹಾಯಕ ನಿರ್ದೇಶಕರು ಹಾಗೂ ಜಿಲ್ಲಾ ಟಾಸ್ಕ್‌ಪೋರ್ಸ್ ಸಮಿತಿಯ ಸದಸ್ಯ ಕಾರ್ಯದರ್ಶಿಗಳು ತಿಳಿಸಿದ್ದಾರೆ.
ಸರ್ಕಾರದ ಆದೇಶದಂತೆ 2024-25ನೇ ಸಾಲಿನ ಹಿಂಗಾರು ಹಂಗಾಮಿನಲ್ಲಿ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಎಫ್‌ಎಕ್ಯೂ ಗುಣಮಟ್ಟದ ಕಡಲೆಕಾಳು ಪ್ರತಿ ಕ್ವಿಂಟಾಲ್‌ಗೆ ₹5,650ರಂತೆ ಬೆಂಬಲ ಬೆಲೆ ನೀಡಿ, ಎಕರೆಗೆ 4 ಕ್ವಿಂಟಲ್‌ನಂತೆ ಪ್ರತಿ ರೈತರಿಂದ ಗರಿಷ್ಠ 20 ಕ್ವಿಂಟಲ್ ವರೆಗೆ ಖರೀದಿಸಲಾಗುವುದು ಎಂದು ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಬೆಂಬಲ ಬೆಲೆ ಮಾರ್ಗಸೂಚಿಗಳನ್ವಯ ಕೊಪ್ಪಳ ಜಿಲ್ಲೆಯ ರೈತರಿಂದ ಖರೀದಿಸುವ ಕುರಿತು ಇತ್ತೀಚೆಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಟಾಸ್ಕ್‌ಪೋರ್ಸ್ ಸಮಿತಿಯ ಸಭೆ ಜರುಗಿಸಿ, ಕೊಪ್ಪಳ ತಾಲೂಕಿನ ಮುದ್ದಾಬಳ್ಳಿ, ಹಿರೇಸಿಂಧೋಗಿ, ಕವಲೂರು, ಅಳವಂಡಿ ಹಾಗೂ ಘಟ್ಟಿರೆಡ್ಡಿಹಾಳ, ಕನಕಗಿರಿ ತಾಲೂಕಿನ ನವಲಿ ಹಾಗೂ ಕನಕಗಿರಿ, ಕುಷ್ಟಗಿ ತಾಲೂಕಿನ ಹನುಮಸಾಗರ, ತಾವರಗೇರಾ(ಮೆಣೇದಾಳ) ಹಾಗೂ ಕುಷ್ಟಗಿ, ಕುಕನೂರು ತಾಲೂಕಿನ ಚಿಕ್ಕಿನಕೊಪ್ಪ, ಬನ್ನಿಕೊಪ್ಪ, ತಳಕಲ್, ಮುಡಲಗೇರಿ, ಕುಕನೂರಿನಲ್ಲಿ ಮತ್ತು ಯಲಬುರ್ಗಾ ತಾಲೂಕಿನ ಯಲಬುರ್ಗಾ, ಮುಧೋಳ ಹಾಗೂ ತೊಂಡಿಹಾಳದಲ್ಲಿ ಕಡಲೆಕಾಳು ಖರೀದಿ ಕೇಂದ್ರಗಳನ್ನು ಪ್ರಾರಂಭಿಸಲು ತೀರ್ಮಾನಿಸಲಾಗಿದೆ.
ನೋಡಲ್ ಅಧಿಕಾರಿಗಳ ವಿವರ: ಕಡಲೆಕಾಳು ಖರೀದಿ ಕೇಂದ್ರಗಳಾದ ಮುದ್ದಾಬಳ್ಳಿ, ಹಿರೇಸಿಂಧೋಗಿ, ಕವಲೂರು, ಅಳವಂಡಿ ಹಾಗೂ ಘಟ್ಟಿರೆಡ್ಡಿಹಾಳ ಖರೀದಿ ಕೇಂದ್ರಗಳಿಗೆ ಕೊಪ್ಪಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ವಿ ಬಸವರಾಜ(ಮೊ ಸಂ: 9448765143) ಅವರನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಿದೆ.
ನವಲಿ ಹಾಗೂ ಕನಕಗಿರಿ ಖರೀದಿ ಕೇಂದ್ರಕ್ಕೆ ಗಂಗಾವತಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ಹರೀಶ ಪತ್ತಾರ(ಮೊ.ಸಂ: 9060893320), ಕುಷ್ಟಗಿ ಹನುಮಸಾಗರ, ತಾವರಗೇರಾ(ಮೆಣೇದಾಳ) ಖರೀದಿ ಕೇಂದ್ರಕ್ಕೆ ಕುಷ್ಟಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ಸುರೇಶ ಬಿ ತಂಗನೂರು(ಮೊ.ಸಂ:9880886909), ಚಿಕ್ಕಿನಕೊಪ್ಪ, ಬನ್ನಿಕೊಪ್ಪ, ತಳಕಲ್, ಮುಡಲಗೇರಿ, ಕುಕನೂರು ಹಾಗೂ ಯಲಬುರ್ಗಾ, ಮುಧೋಳ ಮತ್ತು ತೊಂಡಿಹಾಳದಲ್ಲಿ(ಕೇಂದ್ರ ಕಚೇರಿ, ಕುಕನೂರು) ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ಗುರುಪ್ರಸಾದ್ ಗುಡಿ(ಮೊ.ಸಂ: 9972054874) ಅವರನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಸರ್ಕಾರದ ವಿರುದ್ಧ ಫೆ.10ರಂದು ರಾಜ್ಯಾದ್ಯಂತ ಸಂಯುಕ್ತ ಹೋರಾಟ: ಎಚ್ ಆರ್ ಬಸವರಾಜಪ್ಪ
ಪ್ರತಿ ಎಕರೆಗೆ ಗರಿಷ್ಠ 4 ಕ್ವಿಂಟಲ್‌ನಂತೆ ಪ್ರತಿ ರೈತರಿಂದ ಗರಿಷ್ಠ 20 ಕ್ವಿಂಟಲ್‌ವರೆಗೆ ಕಡಲೆಕಾಳು ಉತ್ಪನ್ನವನ್ನು ಖರೀದಿಸಲಾಗುತ್ತದೆ. ಎಫ್‌ಎಕ್ಯೂ ಗುಣಮಟ್ಟದ ಕಡಲೆಕಾಳನ್ನು ಮಾತ್ರ ಖರೀದಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಕೊಪ್ಪಳದ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ(08539-230040)ಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.